ತೀವ್ರವಾದ ಬಿಸಲಿನ ಝಳದಿಂದ ಮೆಟ್ರೋ ಹಳಿಗೆ ಹೊಂದಿಕೊಂಡಂತೆ ಇರುವ ರಬ್ಬರ್‌ಗೆ ಬೆಂಕಿ ಕಿಡಿ ಹೊತ್ತುಕೊಂಡ ಕಾರಣ ನೇರಳೆ ಮಾರ್ಗದಲ್ಲಿ 20 ನಿಮಿಷಗಳ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ತೊಂದರೆಗೀಡಾದರು.
ಬೆಂಗಳೂರು (ಏ.18) : ತೀವ್ರವಾದ ಬಿಸಲಿನ ಝಳದಿಂದ ಮೆಟ್ರೋ ಹಳಿಗೆ ಹೊಂದಿಕೊಂಡಂತೆ ಇರುವ ರಬ್ಬರ್‌ಗೆ ಬೆಂಕಿ ಕಿಡಿ ಹೊತ್ತುಕೊಂಡ ಕಾರಣ ನೇರಳೆ ಮಾರ್ಗದಲ್ಲಿ 20 ನಿಮಿಷಗಳ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ತೊಂದರೆಗೀಡಾದರು.
ಸೋಮವಾರ ಸುಮಾರು 11ರ ಸುಮಾರಿಗೆ ರೈಲು ವಿವೇಕಾನಂದ ಮೆಟ್ರೋ ನಿಲ್ದಾಣದ ಬಳಿ ಬರುತ್ತಲೇ ಹಳಿಗೆ ಹೊಂದಿಕೊಂಡಂತೆ ಇರುವ ರಬ್ಬರ್‌ಗೆ ಬೆಂಕಿ ಕಿಡಿ ತಾಗಿ, ಉರಿಯುತ್ತಿರುವುದು ಪೈಲಟ್ ಗಮನಕ್ಕೆ ಬಂದಿತು. ಅವರು ತಕ್ಷಣ ಸ್ಟೇಷನ್ ಮಾಸ್ಟರ್‌ಗೆ ಮಾಹಿತಿ ನೀಡಿ ರೈಲನ್ನು ನಿಲ್ಲಿಸಿದ್ದಾರೆ. ಬಳಿಕ ಮೆಟ್ರೋದ ಸಿಬ್ಬಂದಿ ಆಗಮಿಸಿ ಆರಿಸಿದರು. ರಬ್ಬರ್ ತಣ್ಣಗಾದ ಬಳಿಕ ಸಹಜವಾಗಿ ಪ್ರಯಾಣವನ್ನು ಮರು ಪ್ರಾರಂಭಿಸಲಾಯಿತು.
ಬೆಂಗಳೂರು: ಮೆಟ್ರೋ ಕೆಳಗೆ ಕಂಪನಿಗಳಿಂದ ಉದ್ಯಾನ..!
ಘಟನೆಯಿಂದ ಸುಮಾರು 15-20 ನಿಮಿಷ ಮೆಟ್ರೋ ಸಂಚಾರ ವ್ಯತ್ಯಯವಾಗಿತ್ತು. ಇದರಿಂದ ಆ ಮಾರ್ಗದ ಮೆಟ್ರೋ ಸ್ಥಗಿತದಿಂದ ಪ್ರಯಾಣಿಕರು ಪರದಾಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಮೆಟ್ರೋ ಅಧಿಕಾರಿಗಳು, ‘ಬಿಸಿಲಿಂದ ರಬ್ಬರ್‌ಗೆ ಬೆಂಕಿ ಕಿಡಿ ಹೊತ್ತುಕೊಂಡಿತ್ತು. ಪೈಲಟ್ ಗಮನಕ್ಕೆ ಬಂದ ತಕ್ಷಣ ರೈಲನ್ನು ನಿಲ್ಲಿಸಿದ್ದಾರೆ. ಬಿಸಿಲಿನ ಝಳದಿಂದ ರಬ್ಬರ್‌ಗೆ ಕಿಡಿ ತಾಕಿರಬಹುದು. ವಿದ್ಯುತ್ ಅಥವಾ ರಬ್ಬರ್‌ನಲ್ಲಿನ ಸಮಸ್ಯೆಯಿಂದಲೂ ಆಗಿರಬಹುದು. ತಡರಾತ್ರಿ ಪರಿಶೀಲನೆ ನಡೆಸಿ ರಬ್ಬರ್ ಬದಲಿಸುವ ಕಾರ್ಯ ಮಾಡಲಾಗುವುದು. ಉಳಿದಂತೆ ಇಡೀ ದಿನ ಯಾವುದೇ ಸಮಸ್ಯೆಯಿಲ್ಲದೆ ಈ ಮಾರ್ಗದಲ್ಲಿ ರೈಲು ಸಂಚರಿಸಿದೆ’ ಎಂದು ತಿಳಿಸಿದರು.
ಹೀಟ್ ಸ್ಟ್ರೋಕ್, ಸನ್ ಸ್ಟ್ರೋಕ್ ನಿಂದ ಮುಕ್ತಿ ಪಡೆಯಲು ಇಲ್ಲಿದೆ ಟಿಪ್ಸ್
ವಿವೇಕಾನಂದ ಮೆಟ್ರೋ ನಿಲ್ದಾಣ ಬಳಿ ಬೆಂಕಿ