ಬೆಂಗಳೂರಲ್ಲಿ 2ನೇ HMP ವೈರಸ್ 3 ತಿಂಗಳ ಮಗುವಿನಲ್ಲಿ ಪತ್ತೆ, ಮಾರ್ಗಸೂಚಿ ಪ್ರಕಟ!

By Chethan Kumar  |  First Published Jan 6, 2025, 12:10 PM IST

ಬೆಂಗಳೂರಲ್ಲಿ 8 ತಿಂಗಳ ಮಗುವಿನಲ್ಲಿ  HMPV ವೈರಸ್ ಪತ್ತೆಯಾದ ಬೆನ್ನಲ್ಲೇ ಇದೀಗ 3 ತಿಂಗಳ ಮಗುವಿನಲ್ಲೂ ವೈರಸ್ ಪತ್ತೆಯಾಗಿದೆ. ಇದು ಬೆಂಗಳೂರಲ್ಲಿ ಒಂದೇ ದಾಖಲಾದ 2ನೇ ಪ್ರಕರಣವಾಗಿದೆ. ಇದರ ಬೆನ್ನಲ್ಲೋ ರಾಜ್ಯ ಆರೋಗ್ಯ ಇಲಾಖೆ  ಮಹತ್ವದ ಮಾರ್ಗಸೂಚಿ ಪ್ರಕಟಿಸಿದೆ.
 


ಬೆಂಗಳೂರು(ಜ.06) ಚೀನಾದಲ್ಲಿ  HMPV ವೈರಸ್ ಪ್ರಕರಣ ಭಾರಿ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇತ್ತ ಮಲೆಷಿಯಾದಲ್ಲೂ ಗಣನೀಯವಾಗಿ  HMPV ವೈರಸ್ ಸಂಖ್ಯೆ ಏರಿಕೆಯಾಗುತ್ತಿದೆ. ಇದರ ನಡುವೆ ಇಂದು(ಜ.06) ಬೆಂಗಳೂರಲ್ಲಿ ಎರಡು  HMPV ವೈರಸ್ ಪ್ರಕರಣ ಪತ್ತೆಯಾಗಿದೆ. ಎರಡೂ ಕೂಡ ಪಟ್ಟ ಕಂಮ್ಮಗಳಲ್ಲಿ ಪತ್ತೆಯಾಗಿದೆ. ಮೊದಲಿಗೆ 8  ತಿಂಗಳ ಮಗುವಿನಲ್ಲಿ  HMPV ವೈರಸ್ ಪತ್ತೆಯಾಗಿದ್ದರೆ, ಇದೀಗ 3 ತಿಂಗಳ ಹೆಣ್ಣು ಮಗುವಿನಲ್ಲಿ  HMPV ವೈರಸ್ ಪತ್ತೆಯಾಗಿದೆ. ಪ್ರಕರಣ ಪತ್ತೆಯಾದ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆ ಮಹತ್ವದ ಸೂಚನೆ ನೀಡಿದೆ. ರಾಜ್ಯದಲ್ಲಿ ಪತ್ತೆಯಾಗಿರುವ ವೈರಸ್ ಹೊಸದೇನಲ್ಲ. ಹೀಗಾಗಿ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದಿದೆ. ಇಷ್ಟೇ ಅಲ್ಲ ರಾಜ್ಯದ ಜನತೆಗೆ ಮಾರ್ಗಸೂಚಿ ಪ್ರಕಟಿಸಿದೆ.

ಇಂದು ಪತ್ತೆಯಾದ ಎರಡನೇ HMPV ವೈರಸ್ ಪ್ರಕರಣ 3 ತಿಂಗಳ ಹೆಣ್ಣು ಮಗುವಿನಲ್ಲಿ ಪತ್ತೆಯಾಗಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಈ ಪ್ರಕರಣ ಪತ್ತೆಯಾಗಿದೆ. ಇನ್ನು ಮಗುವಿಗೆ ಯಾವುದೇ ಟ್ರಾವಲ್ ಹಿಸ್ಟರಿ ಇಲ್ಲ. ಇಷ್ಟೇ ಮಗು ಆರೋಗ್ಯವಾಗಿದೆ. ಹೀಗಾಗಿ  ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದೆ. 3 ತಿಂಗಳ ಮಗುವಿಗೆ ಯಾವುದೇ ಟ್ರಾವಲ್ ಹಿಸ್ಟರಿ ಇಲ್ಲ. ಆದರೂ ವೈರಸ್ ಪತ್ತೆಯಾಗಿದೆ. ಇದಕ್ಕೂ ಮೊದಲು 8 ತಿಂಗಳ ಮಗುವಿನಲ್ಲಿ ವೈರಸ್ ಪತ್ತೆಯಾಗಿತ್ತು. ಜ್ವರ ಕಾಣಿಸಿಕೊಂಡ ಹಿನಲ್ಲೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಈ ವೇಳೆ ರಕ್ತ ಪರೀಕ್ಷೆಯಲ್ಲಿ HMPV ವೈರಸ್ ಪತ್ತೆಯಾಗಿತ್ತು.

Tap to resize

Latest Videos

ಬೆಂಗಳೂರಲ್ಲಿ 8 ತಿಂಗಳ ಮಗುವಿನಲ್ಲಿ HMPV ವೈರಸ್ ಪತ್ತೆ, ಭಾರತದಲ್ಲಿ ಮೊದಲ ಪ್ರಕರಣ

ಮೊದಲ ಪ್ರಕರಣ ಪತ್ತೆಯಾದ ಬೆನ್ನಲ್ಲೇ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತುರ್ತು ಸಭೆ ಕರೆದು ಚರ್ಚೆ ಮಾಡಿದ್ದಾರೆ. ಇದೇ ವೇಳೆ ರಾಜ್ಯದ ಜನತೆ ಏನು ಮಾಡಬೇಕು, ಏನು ಮಾಡಬಾರದು ಅನ್ನೋ ಕುರಿತು ಮಾರ್ಗೂಚಿಯನ್ನು ಪ್ರಕಟಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ದಿನೇಶ್ ಗುಂಡೂರಾವ್ ರಾಜ್ಯದ ಪ್ರಕರಣ ಕುರಿತು ಮಾತನಾಡಿದ್ದಾರೆ. ಚಳಿಗಾಲದಲ್ಲಿ ಈ ರೀತಿಯ ವೈರಸ್ ಕುರಿತು ಎಚ್ಚರಿಕೆ ಅಗತ್ಯ. ಇದು ಹೊಸದೇನಲ್ಲ. ಹಳೇ ವೈರಸ್. 2001ರಲ್ಲೇ ಈ ವೈರಸ್ ಪತ್ತೆಯಾಗಿದೆ. ಭಾರತದಲ್ಲೂ ಈ ವೈರಸ್ ಇದೆ. ಆದರೆ ಪರಿಣಾಕಾರಿಯಾಗಿಲ್ಲ. ಕೇವಲ ಶೇಕಡಾ 1 ರಷ್ಟು ಮಾತ್ರ ತೀವ್ರತೆ ಇದೆ ಅನ್ನೋ ಮಾಹಿತಿ ಇದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಇಮ್ಯುನಿಟಿ ಕಡಿಮೆ ಇರುವ ಮಕ್ಕಳಿಗೆ ಬೇಗನೆ ಈ ವೈರಸ್ ದಾಳಿ ಮಾಡಲಿದೆ. ಮಕ್ಕಳು ಹಾಗೂ ಹಿರಿಯರು ತೀವ್ರ ಮುಂಜಾಗ್ರತೆ ವಹಿಸಬೇಕು.  ಐಸಿಎಂಆರ್, ಕೇಂದ್ರದಿಂದ ಮಾಹಿತಿ ಪಡೆದು ಮುಂದೆ ಚರ್ಚೆ ಮಾಡ್ತೇವೆ, ಸದ್ಯ ರಾಜ್ಯದ ಪ್ರಕರಣದ ಸ್ಯಾಂಪಲ್ ಪುಣೆಗೆ ಕಳುಹಿಸುವ ಕುರಿತು ಚರ್ಚಿಸುತ್ತೇವೆ ಎಂದು ದಿನೇಶ್ ಗಂಡೂರಾವ್ ಹೇಳಿದ್ದಾರೆ. ಇದೇ ವೇಳೆ ಮಾರ್ಗಸೂಚಿ ಪ್ರಕಟಿಸಲಾಗಿದೆ ಎಂದಿದ್ದಾರೆ.

HMPV ವೈರಸ್ ಮಾರ್ಗಸೂಚಿ: ಏನುಮಾಡಬೇಕು, ಮಾಡಬಾರದು?
ಚೀನಾದಲ್ಲಿ ವರದಿಯಾಗಿರುವ HMPV ವೈರಸ್ ಪ್ರಕರಣದ ಹಿನ್ನಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ಹಾಗೂ ಕೇಂದ್ರ ಸರ್ಕಾರ ಮಹತ್ವದ ಸೂಚನೆ ನೀಡಿದೆ. ಉಸಿರಾಟ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗುವ HMPV ವೈರಸ್ ಸಾಮಾನ್ಯವಾಗಿ ಮಕ್ಕಳು ಹಾಗೂ ಹಿರಿಯಲ್ಲಿ ಹೆಚ್ಚಾಗಿ ಕಾಣಿಸಲಿದೆ. ಸದ್ಯದ ಪ್ರಕರಣಗಳ ಕುರಿತು ರಾಜ್ಯ ಆರೋಗ್ಯ ಸಚಿವಾಲಯ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ವೈರಸ್ ಕುರಿತು ಮುಂಜಾಗ್ರತೆಗಾಗಿ ಮಾರ್ಗಸೂಚಿ ಪ್ರಕಟಿಸಲಾಗಿದೆ ಎಂದು ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಏನು ಮಾಡಬೇಕು
ನೆಗಡಿ, ಕೆಮ್ಮು, ಶೀತದ ಸಂದರ್ಭದಲ್ಲಿ ಕರ್ಚೀಫ್, ಟಿಶ್ಯೂ ಪೇಪರ್ ಬಳಸಿ, ಕೆಮ್ಮುವಾಗ ಮೂಗು, ಬಾಯಿ ಮುಚ್ಚಿಕೊಳ್ಳಿ
ನಿಮ್ಮ ಕೈಗಳನ್ನು ಸೋಪ್‌ನಿಂದ ಶುಚಿಯಾಗಿ ತೊಳೆಯಿರಿ, ಅಥವಾ ಸ್ಯಾನಿಟೈಸರ್ ಬಳಸಿ
ಜನಸಂದಣಿ ಪ್ರದೇಶಗಳಿಂದ ದೂರವಿರಿ
ಜ್ವರ, ಶೀತ, ಕೆಮ್ಮು ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆಗಳಿದ್ದ ಜನರ ಸಂಪರ್ಕದಿಂದ ದೂರವಿರಿ
ಮುಚ್ಚಿದ ಕೋಣೆಗಳಿಂದ ತೆರೆದ, ಗಾಳಿ, ಬೆಳಕುವ ಇರುವ ಕೊಠಡಿಗಳಲ್ಲಿರಿ
ಆರೋಗ್ಯ ಸಮಸ್ಸೆಗಳಿದ್ದರೆ ಮನೆಯಲ್ಲೇ ಇರಿ, ಜನರ ಸಂಪರ್ಕ ಮಾಡಬೇಡಿ
ಚೆನ್ನಾಗಿ ನೀರು ಹಾಗೂ ಪೌಷ್ಠಿಕ ಆಹಾರ ಸೇವಿಸಿ

ಏನು ಮಾಡಬಾರದು?
ಬಳಸಿದ ಖರ್ಚೀಫ್, ಟಿಶ್ಯೂ ಪೇಪರ್ ಬಳಸಬೇಡಿ
ಶೀತ, ಜ್ವರ, ಕೆಮ್ಮು ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆ ಇದ್ದವರ ಜೊತೆ ಸಂಪರ್ಕ ಮಾಡಬೇಡಿ, ಟವೆಲ್ ಸೇರಿದಂತೆ ಇತರ ವಸ್ತುಗಳನ್ನು ಹಂಚಿಕೊಳ್ಳಬೇಡಿ
ಮೂಗು, ಬಾಯಿ, ಕಣ್ಣುಗಳನ್ನು ಕೈಗಳಿಂದ ಪದೇ ಪದೇ ಮುಟ್ಟಬೇಡಿ
ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳಬೇಡಿ
ವೈದ್ಯರ ಭೇಟಿ ಮಾಡದೆ ಔಷಧಿಗಳನ್ನು ತೆಗೆದುಕೊಳ್ಳಬೇಡಿ

ಮಲೆಷಿಯಾದಲ್ಲಿ HMPV ವೈರಸ್ ಭೀತಿಯಿಂದ ಮಾಸ್ಕ್ ಧರಿಸಲು ಸೂಚನೆ, ದಿಲ್ಲಿ ಜನತೆಗೂ ಅಲರ್ಟ್
 

click me!