ಬೆಂಗಳೂರು ಮಾರಕ ವೈರಸ್‌ಗೆ ಬನ್ನೇರುಘಟ್ಟ ಜೈವಿಕ ಉದ್ಯಾನದ 7 ಚಿರತೆಗಳ ಸಾವು

By Sathish Kumar KH  |  First Published Sep 17, 2023, 5:54 PM IST

ಬೆಕ್ಕಿನಲ್ಲಿ ಕಾಣಿಸಿಕೊಳ್ಳುವ ಮಾರಕ ವೈರಸ್‌ಗೆ ಬೆಂಗಳೂರಿನ ಹೊರವಲಯದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿನ 7 ಚಿರತೆ ಮರಿಗಳು ಸಾವನ್ನಪ್ಪಿವೆ. 


ಬೆಂಗಳೂರು/ ಆನೇಕಲ್ (ಸೆ.17): ಬೆಕ್ಕಿನಲ್ಲಿ ಕಾಣಿಸಿಕೊಳ್ಳುವ ಮಾರಕ ವೈರಸ್‌ಗೆ ಬೆಂಗಳೂರಿನ ಹೊರವಲಯದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿನ 7 ಚಿರತೆ ಮರಿಗಳು ಸಾವನ್ನಪ್ಪಿವೆ.

ಕಳೆದ 15 ದಿನಗಳಲ್ಲಿ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಚಿರತೆ ಮರಿಗಳ ಸಾವನ್ನಪ್ಪಿವೆ. ಪೆಲಿನ್ ಪ್ಯಾನ್ಲೂಕೋಪೇನಿಯಾ ಎಂಬ ಮಾರಕ ವೈರಸ್‌ನಿಂದಾಗ 7 ಚಿರತೆಗಳ ಸಾವನ್ನಪ್ಪಿವೆ ಎಂದು ವೈದ್ಯರು ತಿಳಿಸಿದ್ದಾರೆ. ಬೆಕ್ಕಿನಿಂದ ಹರಡುವ‌ ಮಾರಕ ರೋಗ ಚಿರತೆಗಳಿಗೆ ಹರಡಿದೆ ಎಂಬ ಶಂಕೆಯಿದೆ. ಇನ್ನು ಚಿರತೆಗಳ ಸಪಾರಿಯಿಂದ ಆರಂಭವಾದ ರೋಗವು, ಕಳೆದ ತಿಂಗಳು ಆಗಸ್ಟ್ 22ರಂದು ಕಾಣಿಸಿಕೊಂಡಿತ್ತು.ಇನ್ನು ಸೆಪ್ಟೆಂಬರ್ 5ರ ವೇಳೆಗೆ 7 ಚಿರತೆಗಳ ಸಾವನ್ನಪ್ಪಿವೆ ಎಂದು ಜೈವಿಕ ಉದ್ಯಾನದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tap to resize

Latest Videos

undefined

ಅಳಿದಿದೆ ಎಂದು ನಂಬಲಾಗಿದ್ದ ಕೈಗಳಿರುವ ಅಪರೂಪದ ಮೀನು ಪತ್ತೆ

ಹೊಟ್ಟೆಯಲ್ಲಿ ಜೀರ್ಣಕ್ರಿಯೆ ನಡೆಯದೇ ರಕ್ತವಾಂತಿಯಿಂದ ಸಾವು: ಇನ್ನು  ರಾಜ್ಯ ವಿವಿಧೆಡೆ ರೆಸ್ಕ್ಯೂ ಮಾಡಿದ್ದ ಚರತೆ ಮರಿಗಳನ್ನು ಬನ್ನೇರುಘಟ್ಟದ ಜೈವಿಕ ಉದ್ಯಾನಕ್ಕೆ ತಂದು ಬಿಡಲಾಗಿತ್ತು. ಝೂ ಹಾಗೂ ಸಫಾರಿಯಲ್ಲಿ ಚಿರತೆ ಮರಿಗಳನ್ನ ಬಿಡಲಾಗಿತ್ತು. ಆದರೆ, ಮರಿಗಳಿಗೆ ಒಂದು ವರ್ಷದವರೆಗ ಯಾವುದೇ ವ್ಯಾಕ್ಸಿನೇಷನ್ ನೀಡುವಂತಿಲ್ಲ. ಆದ್ದರಿಂದ ಬೇಗನೇ ವೈರಸ್‌ ತಗುಲಿ ಸಾವನ್ನಪ್ಪುತ್ತಿವೆ ಎಂದು ತಿಳಿದುಬಂದಿದೆ. ಇನ್ನು ಚಿರತೆ ಮರಿಗಳ ಪೋಷಣೆಗೆ 11 ಜನರ ತಂಡವನ್ನು ಸಿದ್ಧಪಡಿಸಿ ಅವರಿಗೆ ಬೂಸ್ಟರ್ ಡೋಸ್ ನೀಡಿ ಕಂಟ್ರೋಲ್‌ ಮಾಡಲು ಸೂಚನೆ ನೀಡಲಾಗುದೆ. ಒಂದು ವೇಳೆ ಚಿರತೆಗೆ ಈ ಸೋಂಕು ತಗುಲಿದರೆ ಹೊಟ್ಟೆಯಲ್ಲಿ ಜೀರ್ಣಕ್ರಿಯೆ ಆಗದೇ ರಕ್ತ ವಾಂತಿ ಆರಂಭವಾಗುತ್ತದೆ. ಇದಾದ ಒಂದೆರಡು ದಿನದಲ್ಲಿ ಸೋಂಕಿತ ಚಿರತೆಗಳು ನಿತ್ರಾಣಗೊಂಡು ಸಾವನ್ನಪ್ಪುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ. 

ಬೆಕ್ಕು ಸಾಕಿದ್ದ ಅನಿಮಲ್‌ ಕೀಪರ್‌ನಿಂದ ಸೋಂಕು ಹರಡಿಕೆ: ಪೆಲಿನ್ ಪ್ಯಾನ್ಲೂಕೋಪೇನಿಯಾ ಎಂಬ ಸೋಂಕು ಸಾಕು ಬೆಕ್ಕುಗಳಿಂದ ಹರಡಿರುವ ಸಾಧ್ಯತೆಯಿದೆ. ಬೆಕ್ಕು ಸಾಕಿದ್ದ ಅನಿಮಲ್ ಕೀಪರ್‌ನಿಂದ ಚಿರತೆಗಳಿಗೆ ಸೋಂಕು ಹರಡಿರುವ ಸಾಧ್ಯತೆಯಿದೆ. ಚಿರತೆ, ಹುಲಿ, ಸಿಂಹ ಸೇರಿದಂತೆ ಎಲ್ಲಾ ಕೇಜ್ ಗಳ ಬರ್ನಿಂಗ್ ಮಾಡಲು ಕ್ರಮವಹಿಸಲಾಗಿದೆ. ಜೊತೆಗೆ, ಬ್ಲೀಚಿಂಗ್ ಪೌಡರ್, ಔಷಧಿ ಸಿಂಪಡನೆ ಮಾಡಿ ಸ್ವಚ್ಚತೆ ಮಾಡಲಾಗಿದೆ. ವೈರಸ್ ಕಂಟ್ರೋಲ್ ಗಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾವೇರಿ ವನ್ಯಜೀವಿ ಧಾಮದಲ್ಲಿ ಬಿಳಿ ಕಡವೆ ಪತ್ತೆ: ವನ್ಯಜೀವಿ ತಜ್ಞರಿಗೆ ಆಶ್ಚರ್ಯ

ಬಾಕಿ ಚಿರತೆ ಮರಿಗಳು ಸೋಂಕುಮುಕ್ತವಾಗಿವೆ: ಮಾರಕ ವೈರಸ್‌ನಿಂದ ಚಿರತೆಗಳು ಸಾವನ್ನಪ್ಪಿದ ಬೆನ್ನಲ್ಲೇ, ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಚಿರತೆಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಡಾ. ರವಿಂದ್ರ ಹೆಗ್ಡೆ, ಡಾ.ಉಮಾಶಂಕರ್, ಮಂಜುನಾಥ್ ನೇತೃತ್ವದಲ್ಲಿ ಹೆಲ್ತ್‌ ಕಮಿಟಿ ರಚಿಸಲಾಗಿದೆ. ಈಗ ಬದುಕುಳಿದ ಚಿರತೆಗಳು ಮಾರಕ ವೈರಸ್ ನಿಂದ ಪಾರಾಗಿವೆ. ಇನ್ನಷ್ಟು ದಿನಗಳ ಕಾಲ ಚಿರತೆ ಮರಿಗಳ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾವಹಿಸಲಾಗುವುದು ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯ ಸೇನ್ ಮಾಹಿತಿ ನೀಡಿದ್ದಾರೆ.

click me!