ಸೂಕ್ತ ಸಮಯದಲ್ಲಿ ಮಳೆ ಬಾರದೇ ಈ ಭಾಗದ ರೈತರ ಪರಿಸ್ಥಿತಿ ಬಿಗಡಾಯಿಸಿದೆ. ಇದರ ಮಧ್ಯೆಯೇ ನಕಲಿ ಈರುಳ್ಳಿ ಬೀಜ ವಿತರಣೆ ಮಾಡಿದ್ದು ಅನ್ನದಾತರನ್ನು ಇನ್ನಷ್ಟು ಕಷ್ಟದ ಕೂಪಕ್ಕೆ ತಳ್ಳಿದಂತಾಗಿದೆ. ಸಾಲ ಮಾಡಿ ಜಮೀನುಗಳಲ್ಲಿ ಬೆಳೆದಿದ್ದ ಬೆಳೆ ನಾಶವಾಗಿರೋದ್ರಿಂದ ಕೋಟೆನಾಡಿನ ರೈತರು ಕಂಗಾಲಾಗಿ ಹೋಗಿದ್ದಾರೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಸೆ.17): ಸೂಕ್ತ ಸಮಯದಲ್ಲಿ ಮಳೆ ಬಾರದೇ ಈ ಭಾಗದ ರೈತರ ಪರಿಸ್ಥಿತಿ ಬಿಗಡಾಯಿಸಿದೆ. ಇದರ ಮಧ್ಯೆಯೇ ನಕಲಿ ಈರುಳ್ಳಿ ಬೀಜ ವಿತರಣೆ ಮಾಡಿದ್ದು ಅನ್ನದಾತರನ್ನು ಇನ್ನಷ್ಟು ಕಷ್ಟದ ಕೂಪಕ್ಕೆ ತಳ್ಳಿದಂತಾಗಿದೆ. ಸಾಲ ಮಾಡಿ ಜಮೀನುಗಳಲ್ಲಿ ಬೆಳೆದಿದ್ದ ಬೆಳೆ ನಾಶವಾಗಿರೋದ್ರಿಂದ ಕೋಟೆನಾಡಿನ ರೈತರು ಕಂಗಾಲಾಗಿ ಹೋಗಿದ್ದಾರೆ.
undefined
ಹೌದು, ಹೀಗೆ ನಕಲಿ ಈರುಳ್ಳಿ ಬೀಜದ ಪಾಕೆಟ್ ಗಳನ್ನು ಕೈಯಲ್ಲಿ ಹಿಡಿದು ಆಕ್ರೋಶ ವ್ಯಕ್ತಪಡಿಸ್ತಿರೋ ರೈತರು. ಮತ್ತೊಂದೆಡೆ ಸೂಕ್ತ ಬೆಳೆ ಬಾರದೇ ಕಳಪೆ ಬಿತ್ತನೆ ಬೀಜದಿಂದ ನಾಶವಾಗಿರೋ ಈರುಳ್ಳಿ ಬೆಳೆ. ಚಿತ್ರದುರ್ಗ ತಾಲ್ಲೂಕಿನ ಐನಹಳ್ಳಿ ಕುರುಬರಹಟ್ಟಿ ಗ್ರಾಮದ ರೈತರಿಗೆ ವಂಚಿಸಲಾಗಿದೆ. ಈಗಾಗಲೇ ಸೂಕ್ತ ಮಳೆ ಬಾರದೇ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಬರ ಆವರಿಸಿದೆ. ಜಮೀನುಗಳಲ್ಲಿ ರೈತರು ಹಾಕಿರುವ ಬೆಳೆ ಕೂಡ ಬಾರದೇ ನಾಶವಾಗಿ ಹೋಗಿವೆ. ಇದೆಲ್ಲದರ ನಡುವೆಯೂ ಗಾಯದ ಮೇಲೆ ಬರೆ ಎಳೆದಂತೆ, ನಕಲಿ ಈರುಳ್ಳಿ ಬೀಜ ವಿತರಣೆ ಮಾಡಿರುವ ಪರಿಣಾಮ ಹತ್ತಾರು ಎಕರೆಯಲ್ಲಿ ಬಿತ್ತನೆ ಮಾಡಿದ್ದ ಈರುಳ್ಳಿ ಬೆಳೆ ಸಂಪೂರ್ಣ ವಿಫಲವಾಗಿದೆ. ಇದ್ರಿಂದ ಆಕ್ರೋಶಗೊಂಡ ರೈತರು ಈರುಳ್ಳಿ ಬೀಜ ವಿತರಣೆ ಮಾಡಿದ ಫರ್ಟಿಲೈಸರ್ ವಿರುದ್ದ ರೈತರು ಕಿಡಿಕಾರಿದ್ದಾರೆ. ಅಲ್ಲದೇ ನಮಗೆ ಸೂಕ್ತ ನ್ಯಾಯ ಒದಗಿಸಿ, ನಾಶವಾಗಿರೋ ಬೆಳೆಗೆ ಪರಿಹಾರ ನೀಡಿ ಎಂದು ಆಗ್ರಹಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯಾದ್ಯಂತ ಹಲವೆಡೆ ದಾಳಿ: 12 ಪಿಒಪಿ ಗಣೇಶ ಮೂರ್ತಿ ವಶ
ಇನ್ನು ಈ ಭಾಗದ ರೈತರು ಅಷ್ಟಾಗಿ ಯಾರೂ ವಿದ್ಯಾವಂತರಲ್ಲ. ಬಿತ್ತನೆ ಮಾಡುವ ಸಮಯದಲ್ಲಿ ಬೀಜ ಯಾವುದಾದ್ರು ಸರಿ ತಂದು ತಮ್ಮ ಜಮೀನುಗಳನ್ನು ಬಿತ್ತನೆ ಮಾಡಿ ಬಿಡ್ತಾರೆ. ಆದ್ರೆ ಒಂದು ಎಕರೆ ಈರುಳ್ಳಿ ಬೆಳೆಯಬೇಕಂದ್ರೆ ಸಾವಿರಾರು ರೂಪಾಯಿ ಹಣ ಖರ್ಚಾಗುತ್ತೆ. ಈ ಬಾರಿ ಒಂದ್ಕಡೆ ಮಳೆ ಕೈ ಕೊಟ್ಟಿದ್ದರಿಂದ ಅರ್ಧ ಜನ ರೈತರು ಕಂಗಾಲಾಗಿದ್ದರು. ಹಿಂಗಾರು ಸಮಯದಲ್ಲಿ ಅಲ್ಪ ಸ್ವಲ್ಪ ಮಳೆ ಆಗಿದ್ದರಿಂದ ಖಾಲಿ ಜಮೀನು ಬಿಡಬಾರದು ಎಂಬ ಕಿಚ್ಚಿನಿಂದ ಜಮೀನಿಗೆ ವಿವಿಧ ಬೆಳೆ ಬಿತ್ತನೆ ಮಾಡಿದ್ದರು. ಅದ್ರಲ್ಲಂತೂ ಈ ಭಾಗದಲ್ಲಿ ಹೆಚ್ಚಿನ ರೈತರು ಈರುಳ್ಳಿ ಬಿತ್ತನೆ ಮಾಡಿದ್ದಾರೆ. ಆದ್ರೆ ಖಾಸಗಿ ಫರ್ಟಿಲೈಸರ್ ಕಂಪನಿಗಳು ವಿತರಣೆ ಮಾಡಿರೋ ನಕಲಿ ಈರುಳ್ಳಿ ಬೀಜದಿಂದ ಯಾವುದೇ ಬೆಳೆ ಆಗಿಲ್ಲ. ಕಳಪೆ ಹಾಗೂ ನಕಲಿ ಬೀಜಗಳನ್ನೇ ರೈತರು ಬಿತ್ತನೆ ಮಾಡಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಅಂತಾರೆ ಸ್ಥಳೀಯರು.
ನನ್ನಂತೆ ಬಾಲ್ಯದಲ್ಲಿಯೇ ಕುರಿ ಕಾಯಬೇಡವೆಂದು, ಬಾಲಕನನ್ನು ಶಾಲೆಗೆ ಸೇರಿಸಿದ ಸಿಎಂ ಸಿದ್ದರಾಮಯ್ಯ
ಅದೇನೆ ಇರ್ಲಿ ಬರದಿಂದ ಈಗಾಗಲೇ ಸಂಕಷ್ಟಕ್ಕೆ ಸಿಲುಕಿರೋ ರೈತರಿಗೆ ಈ ರೀತಿ ಅನ್ಯಾಯ ಆಗುತ್ತಿರುವುದು ತುಂಬಾ ನೋವಿನ ಸಂಗತಿ. ಇನ್ನಾದ್ರು ಸಂಬಂಧಪಟ್ಟ ಅಧಿಕಾರಿಗಳು ರೈತರ ಕಷ್ಟಕ್ಕೆ ಸ್ಪಂದಿಸಬೇಕಿದೆ.