ದಸರಾ ಸ್ತಬ್ದಚಿತ್ರಗಳಲ್ಲಿ ಪೆರಿಯಾರ್‌ ಫೋಟೋ, ಆಸ್ತಿಕರ ಭಾವನೆಗೆ ಧಕ್ಕೆ: ಯತ್ನಾಳ್‌ ಆರೋಪ

By Santosh NaikFirst Published Oct 13, 2024, 1:48 PM IST
Highlights

ಹಿಂದೂ ಸಂಸ್ಕೃತಿ ವಿಜೃಂಭಿಸಬೇಕಾದ ದಸರಾ ಸ್ತಬ್ಧಚಿತ್ರಗಳಲ್ಲಿ ಹಿಂದೂ ವಿರೋಧಿ ಹಾಗೂ ದೇವರುಗಳನ್ನೇ ನಂಬದ ಪೆರಿಯಾರ್‌ ಫೋಟೋಗಳನ್ನು ಹಾಕಿದ್ದಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರು (ಅ.13): ಬುದ್ಧ, ಬಸವಣ್ಣರು ಹುಟ್ಟಿದ ನಾಡಿನಲ್ಲಿ ಆದರ್ಶ ವ್ಯಕ್ತಿಗಳ ಕೊರತೆ ಉಂಟಾಗಿದ್ಯಾ? ಇದಕ್ಕೆ ಕಾರಣವಾಗಿರುವುದು ರಾಜ್ಯ ಸರ್ಕಾರದ ಧೋರಣೆ. ದಸರಾ ಸಂಭ್ರಮದಲ್ಲಿ ಹಿಂದೂ ಸಂಸ್ಕೃತಿ, ವಿಜಯಗಳು ಹಾಗೂ ಕನ್ನಡ ಸಂಸ್ಕೃತಿಗಳ ಆಶೋತ್ತರಗಳನ್ನು ಬಿತ್ತರಿಸಬೇಕು. ಆದರೆ, ದಸರಾದ ಸ್ತಬ್ದಚಿತ್ರಗಳಲ್ಲಿ ಕರ್ನಾಟಕ ಹಾಗೂ ಕನ್ನಡಕ್ಕೆ ಸಂಬಂಧವೇ ಇರದ, ದೇವರುಗಳನ್ನೇ ನಂಬದ ಪೆರಿಯಾರ್‌ ಫೋಟೋಗಳನ್ನು ಹಾಕಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸರ್ಕಾರವನ್ನು ಪ್ರಶ್ನೆ ಮಾಡಿದ್ದು, ರಾಜ್ಯ ಸರ್ಕಾರ ಆಸ್ತಿಕರ ಭಾವನೆಗಳನ್ನು ಧಕ್ಕೆ ಮಾಡುವ ಕೆಲಸ ಮಾಡುತ್ತಿದೆ. ಪೆರಿಯಾರ್‌ನನ್ನು ಸಾಂಸ್ಕೃತಿಕ/ಸಾಮಾಜಿಕ ರಾಯಭಾರಿಯೆಂದಯ ತೋರಿಸುತ್ತಿರುವ ರಾಜ್ಯ ಸರ್ಕಾರ ಅದಕ್ಕೂ ಮುನ್ನ ಆತನ ಬಗ್ಗೆ ಸಂಶೋಧನೆ ಮಾಡಬೇಕಿತ್ತು ಎಂದು ಹೇಳಿದ್ದಾರೆ.ದಸರಾದಲ್ಲಿ ರಾಜ್ಯ ಸಂಸ್ಕೃತಿಗಳು ಬಿತ್ತರವಾಗಬೇಕೇ ಹೊರತು ಯಾವುದೇ ಪಕ್ಷದ/ವ್ಯಕ್ತಿಯ ಸಿದ್ಧಾಂತಗಳಲ್ಲ ಎಂದು ಕಿಡಿಕಾರಿದ್ದಾರೆ.

'ದಸರಾ ಸ್ತಬ್ದಚಿತ್ರಗಳ ಪ್ರದರ್ಶನದಲ್ಲಿ ಪೆರಿಯಾರ್ ಅವರ ಚಿತ್ರವನ್ನು ಪ್ರದರ್ಶನ ಮಾಡುವ ಮೂಲಕ ರಾಜ್ಯ ಸರ್ಕಾರ ಆಸ್ತಿಕರ ಭಾವನೆಗಳನ್ನು ಘಾಸಿಗೊಳಿಸಿದೆ. ಸ್ತಬ್ದಚಿತ್ರಗಳ ಪ್ರದರ್ಶನ ರಾಜ್ಯದ ಸಂಸ್ಕೃತಿಯನ್ನು ಪ್ರತಿಬಿಂಬಿಸಬೇಕೇ ಹೊರತು ಯಾವುದೇ ಪಕ್ಷದ/ವ್ಯಕ್ತಿಯ ಸಿದ್ದಾಂತಗಳನ್ನಲ್ಲ. 1971 ರಲ್ಲಿ ನಡೆದ ಸೇಲಂ ಪ್ರತಿಭಟನೆ (ಮೂಢನಂಬಿಕೆಗಳ ವಿರುದ್ಧ ನಡೆದ ಪ್ರತಿಭಟನೆ) ಯಲ್ಲಿ ಪೆರಿಯಾರ್ ಮತ್ತು ಆತನ ಸಂಗಡಿಗರು ಹಿಂದೂ ದೇವರುಗಳ ಮೂರ್ತಿಗಳನ್ನು ಭಗ್ನಗೊಳಿಸಿದರು' ಎಂದು ಹೇಳಿದ್ದಾರೆ.

Latest Videos

ಈ ಕೃತ್ಯವನ್ನು ತುಘಲಕ್ ಪತ್ರಿಕೆಯಲ್ಲಿ ಸಚಿತ್ರವಾಗಿ ಖಂಡಿಸಲಾಗಿತ್ತು. ಹಿಂದೂಗಳ ಆಚರಣೆಗಳನ್ನು, ಆಚಾರ-ವಿಚಾರ, ಸಂಸ್ಕೃತಿಯನ್ನು ವಿರೋಧ ಮಾಡುವ  ದ್ರಾವಿಡ ಮುನ್ನೇತ್ರ ಕಡಗಂ (ಡಿ.ಎಂ.ಕೆ) ಯ ಪತ್ರಿಕೆಯಾದ 'ದಿ ರೈಸಿಂಗ್ ಸನ್' ಸಹ ಹಿಂದೂ ದೇವರುಗಳನ್ನು ಭಗ್ನಗೊಳಿಸಿದ ಪೆರಿಯಾರ್ ಮತ್ತು ಸಂಗಡಿಗರ ವರದಿಯನ್ನು ಪ್ರಕಟ ಮಾಡಿತ್ತು. ಈತನನ್ನು ಸಾಂಸ್ಕೃತಿಕ/ಸಾಮಾಜಿಕ ರಾಯಭಾರಿಯೆಂದು ತೋರಿಸುತ್ತಿರುವ ರಾಜ್ಯ ಸರ್ಕಾರ ಕಿಂಚಿತ್ತಾದರೂ ಈತನ ಬಗ್ಗೆ ಸಂಶೋಧನೆ ಮಾಡುವ ಅವಶ್ಯಕತೆಯಿತ್ತು ಎಂದು ಹೇಳಿದ್ದಾರೆ.

ಹಿಂದೂ ವಿರೋಧಿಗಳನ್ನು ವೈಭವೀಕರಿಸುತ್ತಿರುವ ಸರ್ಕಾರದ ನಡೆ ಖಂಡನೀಯ. ಬಸವಣ್ಣ, ಪುರಂದರ ದಾಸರು, ಕನಕ ದಾಸರು, ಅಕ್ಕ ಮಹಾದೇವಿ, ರಾಣಿ ಚೆನ್ನಮ್ಮ, ಬ್ರಿಟಿಷರ ಹುಟ್ಟಡಗಡಿಸಿದ ರಾಯಣ್ಣ, ಕೋಟೆಯನ್ನು ಕಾಪಾಡಲು ಜೀವ ಕೊಟ್ಟ ಓಬ್ಬವ್ವ, ನಾಡನ್ನು ಬೆಳಗಿಸಿದ ಯದುವಂಶದ ಅರಸರು, ಸರ್.ಎಂ.ವಿಶ್ವೇಶ್ವರಯ್ಯನವರು, ಪೂಜ್ಯ ಸಿದ್ದೇಶ್ವರ ಸ್ವಾಮೀಜಿ, ನಡೆದಾಡುವ ದೇವರು; ತ್ರಿವಿಧ ದಾಸೋಹಿ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಹುಟ್ಟಿದ ನಾಡಿನಲ್ಲಿ ರಾಮಸ್ವಾಮಿ ಯಂತ ವ್ಯಕ್ತಿಯನ್ನು ಸ್ತಬ್ದಚಿತ್ರಗಳಲ್ಲಿ ತೋರಿಸಿದ್ದು ಈ ಸರ್ಕಾರದ ನೈತಿಕ ದಿವಾಳಿತನವನ್ನು ತೋರಿಸುತ್ತದೆ.

ಗೃಹಲಕ್ಷ್ಮೀ ಹಣದಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗ್ರಂಥಾಲಯ ಕಟ್ಟಿಸಿದ ತಾಯಿ!

ರಾಮಸ್ವಾಮಿಯ ಚಿತ್ರ ತೋರಿಸುವುದು ಹಿಂದೂಗಳ ಮಾಡಿದ ಅಪಮಾನವಷ್ಟೇ ಅಲ್ಲ, ನಾಡದೇವತೆ ಚಾಮುಂಡಮ್ಮನಿಗೆ ಮಾಡಿದ ಅಪಮಾನವೂ ಹೌದು. ಕರ್ನಾಟಕ - ದಾಸರ, ಶರಣರ ನಾಡೇ ಹೊರತು ಮೂರ್ತಿ ಭಂಜಕರ ನಾಡಲ್ಲ. ಯಾರನ್ನೋ ಮೆಚ್ಚಿಸುವ ಭರದಲ್ಲಿ ದಸರೆಯ ಪಾವಿತ್ರ್ಯತೆಯನ್ನು, ಸಂಸ್ಕೃತಿಯನ್ನು ಹಾಳುಗೆಡವಿದ ಸರ್ಕಾರದ ನಡೆಗೆ ಧಿಕ್ಕಾರವಿರಲಿ. ಕನ್ನಡ ಸಂಸ್ಕೃತಿ ಸಚಿವರು, ಮಾನ್ಯ ಮುಖ್ಯ ಮಂತ್ರಿಗಳು ಇದರ ಬಗ್ಗೆ ಸ್ಪಷ್ಟೀಕರಣವನ್ನು ರಾಜ್ಯದ ಜನತೆಗೆ ನೀಡಬೇಕು ಎಂದು ಯತ್ನಾಳ್‌ ಆಗ್ರಹ ಮಾಡಿದ್ದಾರೆ.

ಕಣ ಕಣದಲ್ಲೂ ಕೇಸರಿ; ವಿಮಲ್‌ ಪ್ಯಾಕೆಟ್‌ನಲ್ಲಿ ಸತ್ತ ಕಪ್ಪೆ ಮರಿ!

➥ದಸರಾ ಸ್ತಬ್ದಚಿತ್ರಗಳ ಪ್ರದರ್ಶನದಲ್ಲಿ ಪೆರಿಯಾರ್ ಅವರ ಚಿತ್ರವನ್ನು ಪ್ರದರ್ಶನ ಮಾಡುವ ಮೂಲಕ ರಾಜ್ಯ ಸರ್ಕಾರ ಆಸ್ತಿಕರ ಭಾವನೆಗಳನ್ನು ಘಾಸಿಗೊಳಿಸಿದೆ.

➥ಸ್ತಬ್ದಚಿತ್ರಗಳ ಪ್ರದರ್ಶನ ರಾಜ್ಯದ ಸಂಸ್ಕೃತಿಯನ್ನು ಪ್ರತಿಬಿಂಬಿಸಬೇಕೇ ಹೊರತು ಯಾವುದೇ ಪಕ್ಷದ/ವ್ಯಕ್ತಿಯ ಸಿದ್ದಾಂತಗಳನ್ನಲ್ಲ. 1971 ರಲ್ಲಿ ನಡೆದ ಸೇಲಂ ಪ್ರತಿಭಟನೆ (ಮೂಢನಂಬಿಕೆಗಳ… pic.twitter.com/P2R3xWz6Zu

— Basanagouda R Patil (Yatnal) (@BasanagoudaBJP)
click me!