ಉತ್ತರ ಪ್ರದೇಶಕ್ಕೆ ಬಂದಿರುವ ಪಾಲು ನೋಡಿ. ನಮಗೆ ಬಂದಿರುವ ಪಾಲನ್ನೂ ನೋಡಿ. ಅವರಿಗೂ ನಮಗೂ ಎಷ್ಟು ವತ್ಯಾಸ ಇದೆ. ನಮಗೆ ತೆರಿಗೆ ಪಾಲಿನಲ್ಲಿ ಅನ್ಯಾಯ ಆಗಿದೆ ಅಂತ ಜನ ದನಿ ಎತ್ತಬೇಕು. ಬಿಜೆಪಿಯವರು ಕೇಂದ್ರ ಸರ್ಕಾರವನ್ನ ಸಮರ್ಥನೆ ಮಾಡ್ಕೊಂಡು ಮಾತಾಡೋದು ಕರ್ನಾಟಕದ ಜನರಿಗೆ ಮಾಡುವ ದ್ರೋಹವಾಗಿದೆ: ಸಿಎಂ ಸಿದ್ದರಾಮಯ್ಯ
ಮೈಸೂರು(ಅ.13): ಈ ಬಾರಿ ಹೆಚ್ಚು ಜನ ದಸರಾ ನೋಡಲು ಬಂದಿದ್ದಾರೆ. ಜಿಲ್ಲಾಡಳಿತ ಅದ್ಧೂರಿಯಾಗಿ ದಸರಾ ಆಚರಿಸಿದ್ದಾರೆ. ಮಳೆ ಬಂದಿದ್ದು ಬಿಟ್ರೆ, ಜನ ಖುಷಿಯಿಂದ ದಸರಾ ನೋಡಿದ್ದಾರೆ. ನಾಡ ಹಬ್ಬ ಆದ ಕಾರಣ ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ಜನ ಯಶಸ್ವಿ ಅಂದ್ರೆ ದಸರಾ ಯಶಸ್ವಿ ಅಂತಲೇ ಅರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕೇಂದ್ರದಿಂದ ತೆರಿಗೆ ಪಾಲು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಉತ್ತರ ಪ್ರದೇಶಕ್ಕೆ ಬಂದಿರುವ ಪಾಲು ನೋಡಿ. ನಮಗೆ ಬಂದಿರುವ ಪಾಲನ್ನೂ ನೋಡಿ. ಅವರಿಗೂ ನಮಗೂ ಎಷ್ಟು ವತ್ಯಾಸ ಇದೆ. ನಮಗೆ ತೆರಿಗೆ ಪಾಲಿನಲ್ಲಿ ಅನ್ಯಾಯ ಆಗಿದೆ ಅಂತ ಜನ ದನಿ ಎತ್ತಬೇಕು. ಬಿಜೆಪಿಯವರು ಕೇಂದ್ರ ಸರ್ಕಾರವನ್ನ ಸಮರ್ಥನೆ ಮಾಡ್ಕೊಂಡು ಮಾತಾಡೋದು ಕರ್ನಾಟಕದ ಜನರಿಗೆ ಮಾಡುವ ದ್ರೋಹವಾಗಿದೆ. ಇಷ್ಟೊಂದು ಜನ ಎಂಪಿ ಗೆಲ್ಲಿಸಿದ್ರೆ ರಾಜ್ಯದ ಪರ ದನಿ ಎತ್ತಬೇಕಲ್ವ?. ಇವತ್ತಿನವರಿಗೆ ದನಿ ಎತ್ತಿಲ್ಲ. ಕರ್ನಾಕಟಕ್ಕೆ 5 ವರ್ಷದಲ್ಲಿ 60 ಸಾವಿರ ಕೋಟಿ ನಷ್ಟ ಆಗಿದೆ ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ಸರ್ಕಾರವೂ ಮಹಿಷನ ರೀತಿ ಮರ್ಧನ ಆಗಲಿದೆ: ಎಂ.ಪಿ.ರೇಣುಕಾಚಾರ್ಯ
ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪ್ರಕರಣದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಬಿಜೆಪಿ ವಿರೋಧಕ್ಕೆ ತಿರುಗೇಟು ನೀಡಿದ ಸಿಎಂ, ಅವರು ಆರ್‌ಎಸ್‌ಎಸ್ ಮೇಲಿನ ಕೇಸ್ ವಾಪಸ್ ತಗೊಂಡ್ರಲ್ಲ. ಇದಕ್ಕೆ ಕಮಿಟಿ ರಚನೆ ಮಾಡಲಾಗಿತ್ತು. ಅದಕ್ಕೆ ಗೃಹ ಮಂತ್ರಿ ಅಧ್ಯಕ್ಷರು. ಕ್ಯಾಬಿನಟ್ ಮುಂದೆ ತಂದು ಒಪ್ಪಿಗೆ ಕೊಟ್ಟು ತೀರ್ಮಾನ ಆಗಿದೆ. ಇದು ಕೋರ್ಟ್‌ನಲ್ಲಿ ಸಲ್ಲಿಕೆ ಆಗಬೇಕು. ಕೋರ್ಟ್ ಒಪ್ಪಿಕೊಂಡಾಗ ಮಾತ್ರ ಇದು ವಾಪಸ್ ಪಡೆಯಲು ಸಾಧ್ಯ ಆಗುತ್ತೆ ಎಂದು ತಿಳಿಸಿದ್ದಾರೆ.