ಅಯನೂರು ಮಂಜುನಾಥ ಕಾಂಗ್ರೆಸ್ ಸೇರ್ಪಡೆ: ಯಾವ ಮುಖ ಇಟ್ಕೊಂಡು ಬರ್ತಾರೆ? -ಎಚ್‌ಸಿ ಯೋಗೇಶ್ ಕಿಡಿ

By Ravi Janekal  |  First Published Aug 20, 2023, 1:03 PM IST

 ಕಾಂಗ್ರೆಸ್‌ನಲ್ಲಿ ಘರ್‌ ವಾಪಸಿ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಶಿವಮೊಗ್ಗ ಜಿಲ್ಲೆಯಲ್ಲಿ ರಾಜಕೀಯ ಧ್ರುವೀಕರಣ ಆರಂಭವಾಗಿದೆ. ಬಿಜೆಪಿಯ ಮಾಜಿ ಎಂಎಲ್‌ಸಿ, ಹಾಲಿ ಜೆಡಿಎಸ್‌ನಲ್ಲಿರುವ ಆಯನೂರು ಮಂಜುನಾಥ್‌ ಹಾಗೂ ಶಿಕಾರಿಪುರದಲ್ಲಿ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನಾಗರಾಜ್‌ ಕಾಂಗ್ರೆಸ್‌ಗೆ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದೆ.


ಶಿವಮೊಗ್ಗ (ಆ.20) :  ಕಾಂಗ್ರೆಸ್‌ನಲ್ಲಿ ಘರ್‌ ವಾಪಸಿ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಶಿವಮೊಗ್ಗ ಜಿಲ್ಲೆಯಲ್ಲಿ ರಾಜಕೀಯ ಧ್ರುವೀಕರಣ ಆರಂಭವಾಗಿದೆ. ಬಿಜೆಪಿಯ ಮಾಜಿ ಎಂಎಲ್‌ಸಿ, ಹಾಲಿ ಜೆಡಿಎಸ್‌ನಲ್ಲಿರುವ ಆಯನೂರು ಮಂಜುನಾಥ್‌ ಹಾಗೂ ಶಿಕಾರಿಪುರದಲ್ಲಿ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನಾಗರಾಜ್‌ ಕಾಂಗ್ರೆಸ್‌ಗೆ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದೆ.

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಅನ್ಯಪಕ್ಷಗಳ ಮುಖಂಡರು ಹಾಗೂ ವಿಧಾನಸಭೆ ಚುನಾವಣೆಗೂ ಮುನ್ನ ಪಕ್ಷ ತೊರೆದವರನ್ನು ಕಾಂಗ್ರೆಸ್‌ ಸೆಳೆಯುವ ಪ್ರಯತ್ನ ಜೋರಾಗಿದೆ. ಅದರ ಭಾಗವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ, ಜೆಡಿಎಸ್‌ನಲ್ಲಿನ ನಾಯಕರೊಂದಿಗೆ ಮಾತುಕತೆ ನಡೆಸಲಾಗುತ್ತಿದ್ದು, ಶೀಘ್ರದಲ್ಲಿ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ.

Latest Videos

undefined

ಅದರಲ್ಲೂ ಚುನಾವಣೆಗೂ ಮುನ್ನ ಬಿಜೆಪಿ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾಗಿ ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಆಯನೂರು ಮಂಜುನಾಥ್‌ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರುವುದು ಬಹುತೇಕ ಖಚಿತವಾಗಿದೆ. 

ಬಿಜೆಪಿ ಬಿಟ್ಟು ಜೆಡಿ​ಎಸ್‌ ಸೇರಿದ್ದ ಆಯನೂರು ಮಂಜುನಾಥ್‌ ಈಗ ಕಾಂಗ್ರೆಸ್‌ಗೆ?

ಕಾಂಗ್ರೆಸ್ ಅಭ್ಯರ್ಥಿ ಎಚ್‌ಸಿ ಯೋಗೇಶ್ ವಿರೋಧ:

ಆಯನೂರು ಮಂಜುನಾಥ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿರುವುದಕ್ಕೆ ಶಿವಮೊಗ್ಗದಲ್ಲಿ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಎಚ್ ಸಿ ಯೋಗೇಶ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಚಳಿಗಾಲದಲ್ಲಿ ಬಿಜೆಪಿಯಲ್ಲಿದ್ದರು, ಬೇಸಿಗೆ ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಬಾಗಿಲು ತಟ್ಟಿದರು. ನಂತರ ಜೆಡಿಎಸ್ ಸೇರಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದರು, ಇದೀಗ ಪುನಃ ಕಾಂಗ್ರೆಸ್ ಪಕ್ಷದ ಬಾಗಿಲು ತಟ್ಟುತ್ತಿರುವ ಆಯನೂರು ಮಂಜುನಾಥ್ ರಿಗೆ ನಮ್ಮ ಧಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರಾದ ಸಿ ಕೆ ಸಂಗಮೇಶ್,  ಬೇಳೂರ್ ಗೋಪಾಲಕೃಷ್ಣ,  ಜಗದೀಶ್ ಶೆಟ್ಟರ್,  ಎಂ ಬಿ ಪಾಟೀಲ್ ಮೊದಲಾದವರ ಬಳಿ ಹೋಗಿ ಕಾಂಗ್ರೆಸ್ ಸೇರ್ಪಡೆಯಾಗುತ್ತೇನೆ ಎಂದು ಹೇಳುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 8863 ಮತಗಳನ್ನು ಪಡೆದು  ಡಿಪಾಸಿಟ್ ಪಡೆಯಲು ಯೋಗ್ಯತೆ ಇಲ್ಲದ ಆಯನೂರು ಮಂಜುನಾಥ್.ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಕೇವಲ 5% ಮತಗಳನ್ನು ಮಾತ್ರ ತೆಗೆದುಕೊಂಡಿದ್ದಾರೆ. ನಮ್ಮ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಸಿಎಂ ಸಿದ್ದರಾಮಯ್ಯ ಎಲ್ಲರಿಗೂ ವೈಯಕ್ತಿಕವಾಗಿ ಟೀಕೆ ಮಾಡಿದ್ದಾರೆ ಎಂದು ಈ ಎಲ್ಲಾ ನಾಯಕರ ವಿರುದ್ಧ ಆಯನೂರು ಮಂಜುನಾಥ್ ನೀಡಿರುವ ಹೇಳಿಕೆಗಳ ವಿಡಿಯೋ ಪ್ರದರ್ಶನ ಮಾಡಿದರು.

ಈ ಹಿಂದೆ ಸಿದ್ದರಾಮಯ್ಯ ಅವರಿಗೆ ದಮ್ಮಿದ್ರೆ ಚುನಾವಣೆ ಗೆಲ್ಲಲಿ ಎಂದಿದ್ದರು. ಈಗ ಎರಡನೇ ಬಾರಿ ಸಿಎಂ ಆಗಿದ್ದಾರೆ. ನಾಲ್ಕು ಮನೆಗಳಿಗೆ ಹೋಗಿ ಬಂದ ನಿಮ್ಮ ಸಂದೇಶ ಯುವಕರಿಗೆ ಏನಿದೆ ಹೇಳಿ ಮರದಿಂದ ಮರಕ್ಕೆ ಮಂಗ ಹಾರಿದಂತೆ ಪಕ್ಷಾಂತರ ಮಾಡಿದ್ದೀರಾ? ಹೆಚ್ ಡಿ ಕುಮಾರಸ್ವಾಮಿ ಅವರನ್ನೇ ಬ್ಲಾಕ್ ಮೇಲರ್ ಎಂದಿದ್ದ ಮಂಜುನಾಥ್ ಅವರ ಪಕ್ಷಕ್ಕೆ ಹೋಗಿ ಅಭ್ಯರ್ಥಿಯಾಗಿ ಕೈ ತುಂಬಾ ಸಂಪನ್ಮೂಲ ಪಡೆದಿದ್ದರು. ತಮ್ಮ ಜೊತೆಗೆ ಕೆಬಿ ಪ್ರಸನ್ನ ಕುಮಾರ್ ರನ್ನು ಕರೆದುಕೊಂಡು ಹೋಗಿದ್ದರು ಅವರನ್ನು ಜೆಡಿಎಸ್ ನಲ್ಲಿ ಕೈ ಬಿಟ್ಟಿದ್ದಾರೆ 

ಬಿಜೆಪಿ ಬಿಟ್ಟು ಜೆಡಿ​ಎಸ್‌ ಸೇರಿದ್ದ ನಾಯಕ ಈಗ ಕಾಂಗ್ರೆಸ್‌ಗೆ?

ಆಯನೂರು ಮಂಜುನಾಥ್ ಇರುವ ಮನೆಯಲ್ಲಿ ಇದ್ದು ಪಕ್ಷ ಉದ್ಧಾರ ಮಾಡಲಿ ನಮ್ಮ ಮನೆಗೆ ಬರುವುದು ಬೇಡ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಯನೂರು ಮಂಜುನಾಥ್ ನಾಲ್ಕನೇ ಅಭ್ಯರ್ಥಿ ವೆಂಕಟೇಶ ಪೈಪೋಟಿ ನಡೆಸಿದ್ರು. ಹೆಚ್ಚು ಕಡಿಮೆ ಆಗಿದ್ದರೆ ನೋಟಾ ಮತ್ತು ಆಯನೂರು ಮಂಜುನಾಥ್ ಮಧ್ಯೆ ಪೈಪೋಟಿ ಇತ್ತು  ಎ ಐ ಸಿ ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ಸುರ್ಜೆವಾಲ , ಕೆಪಿಸಿಸಿ ಅಧ್ಯಕ್ಷ  ಡಿಕೆ ಶಿವಕುಮಾರ್,  ಸಿಎಂ ಸಿದ್ದರಾಮಯ್ಯ ಎಲ್ಲರಿಗೂ ಮಂಜುನಾಥ್ ಸೇರ್ಪಡೆಗೆ ವಿರೋಧವಿದೆ ಎಂಬುದನ್ನು ತಿಳಿಸಿದ್ದೇವೆ  ಲೋಕಸಭೆಯಾಗಲಿ, ವಿಧಾನ ಪರಿಷತ್ ಆಗಲಿ ಯಾವುದೇ ಚುನಾವಣೆಯಲ್ಲೂ  ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗಲ್ಲ ಹೀಗಾಗಿ ಇಂಥವರು ಕಾಂಗ್ರೆಸ್ ಸೇರ್ಪಡೆಯಾದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

click me!