Viral video: ಚಲಿಸುತ್ತಿರುವಾಗಲೇ ಕಳಚಿಬಿದ್ದ ಬಸ್‌ನ ಹಿಂದಿನ ಟೈರ್; ಪ್ರಯಾಣಿಕರು ಭಯಭೀತ!

By Ravi JanekalFirst Published Aug 20, 2023, 11:30 AM IST
Highlights

ಸಾರಿಗೆ ಬಸ್ ಚಲಿಸುತ್ತಿರುವಾಗಲೇ ಹಿಂದಿನ ಚಕ್ರ ಕಳಚಿಕೊಂಡು ರಸ್ತೆ ಪಕ್ಕಕ್ಕೆ ಉರುಳಿದ ಘಟನೆ ಗದಗ ತಾಲೂಕಿನ ತಗಡೂರು ಹಾಗೂ ಹೊಂಬಳ ಗ್ರಾಮದ ನಡುವೆ ನಡೆದಿದೆ.

ಗದಗ (ಆ.20): ಸಾರಿಗೆ ಬಸ್ ಚಲಿಸುತ್ತಿರುವಾಗಲೇ ಹಿಂದಿನ ಚಕ್ರ ಕಳಚಿಕೊಂಡು ರಸ್ತೆ ಪಕ್ಕಕ್ಕೆ ಉರುಳಿದ ಘಟನೆ ಗದಗ ತಾಲೂಕಿನ ತಗಡೂರು ಹಾಗೂ ಹೊಂಬಳ ಗ್ರಾಮದ ನಡುವೆ ನಡೆದಿದೆ.

ಗದಗ ಡಿಪೋಕ್ಕೆ ಸೇರಿದ ವಾಯವ್ಯ ಕರ್ನಾಟಕ ಸಾರಿಗೆ ಬಸ್. ಸುಮಾರು 50 ಜನ ಪ್ರಯಾಣಿಕರನ್ನು ಹೊತ್ತು ಗದಗನಿಂದ ನರಗುಂದದ ಕಡೆ ಹೊರಟಿತ್ತು.ಬಸ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳು ಇದ್ದರು. ಹಿಂದಿನ ಚಕ್ರ ಕಳುಚುತ್ತಿದ್ದಂತೆ ಸದ್ದಿಗೆ ಪ್ರಯಾಣಿಕರು ಭಯಾಭೀತರಾಗಿದ್ದಾರೆ. ಬಸ್‌ನ ಹಿಂದೆ ಹೋಗ್ತಿದ್ದ ಕಾರೊಂದಲ್ಲಿದ್ದ ಜನರು ಮೊಬೈಲ್‌ನಲ್ಲಿ ಸೆರೆಯಾಗಿರುವ ದೃಶ್ಯ ವೈರಲ್ ಆಗಿದೆ.

ಇತ್ತೀಚೆಗೆ ರಾಜ್ಯ ಸರಕಾರ ಶಕ್ತಿ ಯೋಜನೆ ಜಾರಿ ಬಳಿಕ ಬಸ್ ಸಾಮರ್ಥ್ಯಕ್ಕೂ ಮೀರಿ ಜನರು ಪ್ರಯಾಣಿಸುತ್ತಿದ್ದು, ಸರ್ಕಾರಿ ಬಸ್ ಬಸ್‌ಗಳು ತುಂಬಿತುಳುಕುತ್ತಿಇವೆ. ಈ ಭಾರಕ್ಕೆ ಬಸ್‌ನ ಒಂದೊಂದೇ ಭಾಗಗಳು ಕಳಚಿಬಿಳ್ತಿವೆ. ಬಹುತೇಕ ಸಾರಿಗೆ ಬಸ್‌ಗಳು ಡಕೋಟಾ ಬಸ್‌ಗಳಾಗಿ ಪರಿವರ್ತನೆಯಾಗ್ತಿರೋ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿಬಂದಿರುವ ಬೆನ್ನಲ್ಲೇ ಈ ಘಟನೆ ನಡೆದಿರುವುದು ಇಂಬು ಕೊಟ್ಟಂತಾಗಿದೆ.

ಅಮೇರಿಕಾದಲ್ಲಿ ಕನ್ನಡದ ಕುಟುಂಬ ದಾರುಣ ಸಾವು: ಗಂಡ, ಹೆಂಡ್ತಿ ಮಗು ಮೃತ


ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಬೈಕ್; ಓರ್ವ ಸಾವು

ವಿಜಯನಗರ : ಬೈಕ್ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದು ಯುವಕ ಸಾವನ್ನಪ್ಪಿದ ಘಟನೆ ಹೊಸಪೇಟೆ ತಾಲೂಕಿನ ಕಮಲಾಪುರ ಕೆರೆ ಏರಿ ಬಳಿ ನೆಡದಿದೆ.

ಮರಿಯಮ್ಮನ ಹಳ್ಳಿಯ ನಿವಾಸಿ ರವಿಕುಮಾರ್ (28) ಮೃತ ಯುವಕ. ಈ ವೇಳೆ ಹಿಂಬದಿಯಿದ್ದ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.ಆದರೆ ಯುವತಿಯ ಗುರುತು ಪತ್ತೆಯಾಗಿಲ್ಲ. ಹೊಸಪೇಟೆಯಿಂದ ಕಮಲಾಪುರದ ಕಡೆಗೆ ಹೊರಟಿದ್ದ ಬೈಕ್ ನಲ್ಲಿದ್ದ ಯುವಕ, ಯುವತಿ. ನಿಯಂತ್ರಣ ಕಳೆದುಕೊಂಡು ಕೆರೆಗೆ ಬಿದ್ದಿದ್ದರು. ಬಳಿಕ ಸ್ಥಳೀಯರಿಂದ ಅಗ್ನಿಶಾಮಕ ದಳಕ್ಕೆ ಮಾಹಿತಿ. ಸಿಬ್ಬಂದಿ ಯುವಕನ ಮೃತದೇಹ ಹೊರ ತೆಗೆದ ಪೊಲೀಸರು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.👇🏻

click me!