35 ವರ್ಷದಲ್ಲಿ ಒಮ್ಮೆಯೂ ಅಪಘಾತ ಮಾಡದ ಬಿಎಂಟಿಸಿ ಚಾಲಕನಿಗೆ ಪ್ರಶಸ್ತಿ

By Kannadaprabha NewsFirst Published Apr 18, 2023, 7:15 AM IST
Highlights

ನವದೆಹಲಿಯ ಎಎಸ್‌ಆರ್‌ಟಿಯು ಸಂಸ್ಥೆ ಅಪಘಾತ ರಹಿತ ಚಾಲಕರಿಗೆ ನೀಡುವ ‘ಹೀರೋಸ್‌ ಆನ್‌ ದ ರೋಡ್‌’ ರಾಷ್ಟ್ರದ ಮಟ್ಟದ ಪ್ರಶಸ್ತಿಗೆ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸಂಸ್ಥೆಯ ಮೂವರು ಚಾಲಕರು ಭಾಜನರಾಗಿದ್ದಾರೆ.

ಬೆಂಗಳೂರು (ಏ.18) : ನವದೆಹಲಿಯ ಎಎಸ್‌ಆರ್‌ಟಿಯು ಸಂಸ್ಥೆ ಅಪಘಾತ ರಹಿತ ಚಾಲಕರಿಗೆ ನೀಡುವ ‘ಹೀರೋಸ್‌ ಆನ್‌ ದ ರೋಡ್‌’ ರಾಷ್ಟ್ರದ ಮಟ್ಟದ ಪ್ರಶಸ್ತಿಗೆ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸಂಸ್ಥೆಯ ಮೂವರು ಚಾಲಕರು ಭಾಜನರಾಗಿದ್ದಾರೆ.

ಕೆಎಸ್‌ಆರ್‌ಟಿಸಿ ಮೈಸೂರು ವಿಭಾಗ(KSRTC Mysore Division)ದ ಎಜಾಜ್‌ ಅಹಮದ್‌ ಷರೀಫ್‌, ಇಶಾಕ್‌ ಶರೀಫ್‌ ಮತ್ತು ಬಿಎಂಟಿಸಿಯ ಲಕ್ಷ್ಮಣ್‌ ರೆಡ್ಡಿ(BMTC Laxmanreddy) ಅವರು ‘ಹೀರೋಸ್‌ ಆನ್‌ ದ ರೋಡ್‌’(Heroes on the Road) ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.

Bengaluru: ಬಸ್ ಹತ್ತುವಾಗ ಬಿದ್ದ ವ್ಯಕ್ತಿ: ಚಕ್ರ ಹರಿದು 2 ಕಾಲು ಜಖಂ

ಲಕ್ಷ್ಮಣ್‌ ರೆಡ್ಡಿ ಅವರು ಸುಮಾರು 35 ವರ್ಷ ಬಿಎಂಟಿಸಿ ಸಂಸ್ಥೆಯ ಬಸ್‌ ಚಾಲಕರಾಗಿ ಸೇವೆ ಆರಂಭಿಸಿದ್ದು, ಈವರೆಗೂ ಯಾವುದೇ ಅಪಘಾತ ಮಾಡಿಲ್ಲ. ಅದೇ ರೀತಿ ಎಜಾಜ್‌ ಅಹಮದ್‌ ಷರೀಫ್‌, ಇಶಾಕ್‌ ಶರೀಫ್‌ ಅವರು ಕಳೆದ 33 ವರ್ಷಗಳಿಂದ ಕೆಎಸ್‌ಆರ್‌ಟಿಸಿ ಬಸ್‌ ಚಾಲಕರಾಗಿದ್ದು ನಗರ, ಗ್ರಾಮಾಂತರ ಮತ್ತು ಅಂತರ್‌ ನಗರ ಸಂಚಾರ ಸಾರಿಗೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದುವರೆಗೂ ಅಪಘಾತ ರಹಿತ ಬಸ್‌ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

IPL 2023: ಆರ್‌ಸಿಬಿ ಪಂದ್ಯ ಹಿನ್ನೆಲೆ ಬಿಎಂಟಿಸಿ ಹಾಗೂ ಮೆಟ್ರೋ ಅವಧಿ ವಿಸ್ತರಣೆ

ಈ ಮೂವರು ಅಪಘಾತ ರಹಿತ ಚಾಲಕರಾಗಿ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿರುವ ಎಎಸ್‌ಆರ್‌ಟಿಯು ಸಂಸ್ಥೆ ‘ಹೀರೋಸ್‌ ಆನ್‌ ದ ರೋಡ್‌’ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಏಪ್ರಿಲ್‌ 18ರಂದು ನವದೆಹಲಿಯಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಮೂವರು ಚಾಲಕರಿಗೂ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಕೆಎಸ್‌ಆರ್‌ಟಿಸಿ ಮಾಹಿತಿ ನೀಡಿದೆ.

click me!