ಮೋದಿ ಬಗ್ಗೆ ಹಾಡು ಮಾಡ್ತೀಯಾ? ಅಲ್ಲಾ ಹೋ ಅಕ್ಬರ್ ಅಂತಾ ಹೇಳು ಎಂದು ದೈಹಿಕವಾಗಿ ಹಿಂಸೆ ಕೊಟ್ಟರು. ಯಾವಾಗ ನಾನು ಹೇಳಲ್ಲ ಎಂದಾಗ, ಟೀ ಶರ್ಟ್ ಹರಿದು, ಬಿಯರ್ ಸುರಿದು ಅದೇ ಬಾಟಲಿನಿಂದ ಹೊಡೆದರು. ನನ್ನ ಮೇಲೆ ಮೂತ್ರ ವಿಸರ್ಜನೆ ಮಾಡಿ ಸಿಗರೇಟಿನಿಂದ ಸುಟ್ಟು ಹಲ್ಲೆ ಮಾಡಿದ್ದಾರೆ. ನಂತರ ನನ್ನಮೇಲೆಯೇ ಅತ್ಯಾಚಾರ ಮಾಡಲು ಯತ್ನಿಸಿದಾಗ ತಪ್ಪಿಸಿಕೊಂಡು ಓಡಿ ಬಂದೆ ಎಂದು ಭಯಾನಕ ವಿಚಾರ ತಿಳಿಸಿದ ಹಲ್ಲೆಗೊಳಗಾದ ಯುವಕ.
ಮೈಸೂರು (ಏ.19): ನಾನು ಪ್ರಧಾನಿ ಮೋದಿ ಜೀವನ ಹಾಗೂ ಆಡಳಿತದ ಬಗ್ಗೆ ಹಾಡು ರಚನೆ ಮಾಡಿದ್ದೆ. ಮೊನ್ನೆ ಮೋದಿ ಮೈಸೂರಿಗೆ ಬಂದಿದ್ದಾಗ ಅದು ಪ್ರದರ್ಶನ ಆಯ್ತು. ಅದನ್ನು ಎಲ್ಲರಿಗು ತಲುಪಿಸುವ ಸಲುವಾಗಿ ಸಬ್‌ಸ್ಕ್ರೈಬ್ ಮಾಡಿಸುತ್ತಿದ್ದೆ. ಸರ್ಕಾರಿ ಅತಿಥಿ ಗೃಹದ ಬಳಿ ಸಿಕ್ಕ ವ್ಯಕ್ತಿ ಇದೇ ವಿಚಾರಕ್ಕೆ ಆತನ ಸ್ನೇಹಿತರ ಬಳಿ ಕರೆದುಕೊಂಡ ಹೋದ. ಕರೆದುಕೊಂಡು ಹೋಗುವ ಮೊದಲು ಆ ವ್ಯಕ್ತಿ ಮುಸ್ಲಿಂ ಅಂಥ ಮೊದಲು ಗೊತಿರಲಿಲ್ಲ. ಹತ್ತಿರ ಹೋಗುತ್ತಿದಂತೆ ಹಿಂದೆಯಿಂದ ಕೈ ಹಿಡಿದು ಏಕಾಏಕಿ ನನ್ನ ಮೇಲೆ ಹಲ್ಲೆ ಮಾಡಿದ್ರು ಎಂದು ಮೋದಿ ಹಾಡಿನ ವಿಚಾರಕ್ಕೆ ಹಲ್ಲೆಗೊಳಗಾದ ಲಕ್ಷ್ಮೀ ನಾರಾಯಣ್ ನಡೆದ ಘಟನೆ ಏಷಿಯಾನೆಟ್ ಸುವರ್ಣ ನ್ಯೂಸ್‌ಗೆ ಹಲ್ಲೆ ಘಟನೆ ಬಗ್ಗೆ ತಿಳಿಸಿದರು.
ಮೋದಿ ಬಗ್ಗೆ ಹಾಡು ಮಾಡ್ತೀಯಾ? ಅಲ್ಲಾ ಹೋ ಅಕ್ಬರ್ ಅಂತಾ ಹೇಳು ಎಂದು ದೈಹಿಕವಾಗಿ ಹಿಂಸೆ ಕೊಟ್ಟರು. ಯಾವಾಗ ನಾನು ಹೇಳಲ್ಲ ಎಂದಾಗ, ಟೀ ಶರ್ಟ್ ಹರಿದು, ಬಿಯರ್ ಸುರಿದು ಅದೇ ಬಾಟಲಿನಿಂದ ಹೊಡೆದರು. ನನ್ನ ಮೇಲೆ ಮೂತ್ರ ವಿಸರ್ಜನೆ ಮಾಡಿ ಸಿಗರೇಟಿನಿಂದ ಸುಟ್ಟು ಹಲ್ಲೆ ಮಾಡಿದ್ದಾರೆ. ನಂತರ ನನ್ನಮೇಲೆಯೇ ಅತ್ಯಾಚಾರ ಮಾಡಲು ಯತ್ನಿಸುವ ವೇಳೆ ತಪ್ಪಿಸಿಕೊಂಡು ಬಂದೆ ಎಂದು ಭಯಾನಕ ವಿಚಾರ ತಿಳಿಸಿದ ಯುವಕ ಲಕ್ಷ್ಮೀನಾರಾಯಣ್.
undefined
ಮೋದಿ ಕುರಿತು ಹಾಡು ಬರೆದಿದ್ದಕ್ಕೆ ಯುವಕನ ಮೇಲೆ ಅನ್ಯಕೋಮಿನ ಕಿಡಿಗೇಡಿಗಳಿಂದ ಹಲ್ಲೆ; ಎಫ್‌ಐಆರ್ ದಾಖಲು
ಹಲ್ಲೆ ಮಾಡಿದ ಪುಂಡರು ಉರ್ದು ಭಾಷೆಯಲ್ಲಿ ಮಾತನಾಡುತ್ತಿದ್ದಂತೆ ಮೂವರ ಹೆಸರು ತಿಳಿಯಿತು. ಅವರನ್ನ ಎಲ್ಲಿ ಬೇಕಾದರೂ ಪತ್ತೆ ಹಚ್ಚುತ್ತೇನೆ. ಪೊಲೀಸರು ನನಗ ಎಲ್ಲಾ ರೀತಿಯ ಸಹಕಾರ ಕೊಟ್ಟಿದ್ದರೆ. ಚುನಾವಣೆ ವೇಳೆ ಈ ಘಟನೆ ನಡೆದಿರುವುದು ಯಾಕೆ ಅಂಥ ಗೊತ್ತಿಲ್ಲ. ಮೋದಿ ಅವರ ಅಬಿರುಚಿ ಜನರಿಗೆ ತಿಳಿಸುವುದೇ ನನ್ನ ಗುರಿಯಾಗಿತ್ತು ಎಂದ ಯುವಕ.
ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ; ಚಿಂತಕ ಪ್ರೊ.ಮಹೇಶ ಚಂದ್ರ ಗುರು ವಿರುದ್ಧ ದೂರು ದಾಖಲು