ಸ್ಯಾಂಡಲ್‌ವುಡ್ ಸ್ಟಾರ್ ಧ್ರುವ ಸರ್ಜಾ, ನೇಹಾ ಹಿರೇಮಠ್ ಸಾವಿಗೆ ಕಂಬನಿ ಮಿಡಿದಿದ್ದಾರೆ. ಕಾಲೇಜು ಕ್ಯಾಂಪನ್‌ನಲ್ಲಿ ಆಗಿರುವ ಈ ಹತ್ಯೆ ಆತಂಕ ಮೂಡಿಸಿದೆ ಎಂದೂ ತಿಳಿಸಿದ್ದಾರೆ.
ಬೆಂಗಳೂರು (ಏ.19): ಮಾರ್ಟಿನ್ ಸಿನಿಮಾದ ಕೆಲಸಲ್ಲಿ ಬ್ಯುಸಿ ಇರುವ ಸ್ಯಾಂಡಲ್‌ವುಡ್ ಸ್ಟಾರ್ ಧ್ರುವ ಸರ್ಜಾ, ಹುಬ್ಬಳ್ಳಿಯ ಬಿವಿಬಿ ಕಾಲೇಜ್‌ನಲ್ಲಿ ದಾರುಣವಾಗಿ ಹತ್ಯೆಯಾದ ನೇಹಾ ಹೀರೇಮಠ್ ಸಾವಿಗೆ ಕಂಬನಿ ಮಿಡಿದ್ದಾರೆ. ಕಾಲೇಜು ಕ್ಯಾಂಪನ್‌ನಲ್ಲಿ ಆಗಿರುವ ಇಂಥ ಹತ್ಯೆ ಆತಂಕ ಮೂಡಿಸಿದೆ ಎಂದೂ ಅವರು ಟ್ವೀಟ್ ಮಾಡಿದ್ದಾರೆ. 'ಸಹೋದರಿ ನೇಹಾ ಹಿರೇಮಠ್‌ರ ಹತ್ಯೆ ಅತ್ಯಂತ ಹೀನ ಕೃತ್ಯ. ಕ್ಯಾಂಪಸ್‌ಲಿ ಹತ್ಯೆ ನಿಜಕ್ಕೂ ಆತಂಕ ಮೂಡಿಸುತ್ತದೆ. ಸರ್ಕಾರ ಶೀಘ್ರದಲ್ಲೇ ತ್ವರಿತಗತಿ ನ್ಯಾಯಾಲಯದಲ್ಲಿ ಈ ಕೇಸ್ ತೀರ್ಪು ಬರಲು ವರ್ಗಾಯಿಸಬೇಕು. ಹಾಗೂ ಇದನ್ನ ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಿ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡುವಂತಾಗಬೇಕು. ಜೈ ಆಂಜನೇಯ' ಎಂದು ಧ್ರುವ ಸರ್ಜಾ ಟ್ವೀಟ್ ಮಾಡಿದ್ದಾರೆ. ಇಲ್ಲಿಯವರೆಗೂ ನೇಹಾ ಹೀರೇಮಠ್ ಸಾವಿಗೆ ನ್ಯಾಯ ದೊರಕಿಸುವಂತೆ ಆಗ್ರಹಿಸಿ ಟ್ವೀಟ್ ಮಾಡಿದ ಮೊದಲ ಸ್ಯಾಂಡಲ್‌ವುಡ್ ಸೆಲೆಬ್ರಿಟಿ ಇವರಾಗಿದ್ದಾರೆ.
ತನ್ನ ಪ್ರೀತಿಯನ್ನು ನಿರಾಕರಿಸಿದಳು ಎನ್ನುವ ಏಕೈಕ ಕಾರಣಕ್ಕೆ ಮುಸ್ಲಿಂ ಯುವಕ ಫಯಾಜ್, ನೇಹಾಳ ಕುತ್ತಿಗೆಗೆ ಕಾಲೇಜಿನ ಕ್ಯಾಂಪಸ್‌ನಲ್ಲಿಯೇ ಮನಬಂದಂತೆ ಚುಚ್ಚಿದ್ದ. ಒಟ್ಟು 9 ಬಾರಿ ಚಾಕುವಿನಿಂದ ಈತ ಚುಚ್ಚಿದ್ದ ಎನ್ನಲಾಗಿದೆ. ನೇಹಾ ಹೀರೇಮಠ್ ಅವರ ತಂದೆ ನಿರಂಜನ್ ಹೀರೇಮಠ ಹುಬ್ಬಳ್ಳಿಯ ಕಾಂಗ್ರೆಸ್ ಕಾರ್ಪೋರೇಟರ್ ಆಗಿದ್ದಾರೆ. ರಾಜಕಾರಣಿಯ ಮಕ್ಕಳಿಗೂ ರಾಜ್ಯದಲ್ಲಿ ಭದ್ರತೆ ಇಲ್ಲದೇ ಇರುವ ವಾತಾವರಣ ನಿರ್ಮಾಣವಾಗಿದೆ. ನೇಹಾ ಹೀರೇಮಠ್ ಅವರ ಸಾವಿನ ಬೆನ್ನಲ್ಲಿಯೇ ಸರ್ಕಾರದ ಹಿರಿಯ ಸಚಿವರು ಹಾಗೂ ಸ್ವತಃ ಮುಖ್ಯಮಂತ್ರಿ ಅವರ ಹೇಳಿಕೆಯೂ ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
undefined
ಕಾರ್ಪೋರೇಟರ್ ಪುತ್ರಿ ಹತ್ಯೆ: ನ್ಯಾಯಾಂಗ ಬಂಧನದಲ್ಲಿರೋ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಮುಸ್ಲಿಮರ ಪ್ರತಿಭಟನೆ
ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದ ಮಹಿಳೆಯರು, ನಮಗೆ ಯಾವುದೇ ಗ್ಯಾರಂಟಿಗಳೂ ಬೇಡ, ನಮ್ಮ ಮನೆಯ ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡಿ ಸಾಕು ಎಂದು ಸರ್ಕಾರಕ್ಕೆ ಜಾಡಿಸಿದ್ದಾರೆ. ಇನ್ನೊಂದೆಡೆ ಗೃಹ ಸಚಿವ ಡಾ. ಜಿ ಪರಮೇಶ್ವರ್, ಫಯಾಜ್ ಹಾಗೂ ನೇಹಾ ಇಬ್ಬರೂ ಪ್ರೀತಿ ಮಾಡುತ್ತಿದ್ದರು. ಇದು ಲವ್ ಜಿಹಾದ್ ಅಲ್ಲ ಎಂದು ಹೇಳುವ ಮೂಲಕ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ. ಮತ್ತೊಂದೆಡೆ ಸಿಎಂ ಸಿದ್ಧರಾಮಯ್ಯ, ಇದು ವೈಯಕ್ತಿಕ ದ್ವೇಷದಿಂದ ಮಾಡಿರುವ ಕೊಲೆ ಎಂದು ಹೇಳಿದ್ದಾರೆ.
ನೇಹಾ ಹಿರೇಮಠ ಕೊಲೆ ಪ್ರಕರಣ: ಮತಾಂತರ ಮಾಡಲೆಂದೇ ಲವ್ ಜಿಹಾದ್ -ಸಿಟಿ ರವಿ ಆಕ್ರೋಶ
ಸಹೋದರಿ ನೇಹಾ ಹಿರೇಮಠ್ ರ ಹತ್ಯೆ ಅತ್ಯಂತ ಹೀನ ಕೃತ್ಯ.ಕ್ಯಾಂಪಸ್ ಲಿ ಹತ್ಯೆ ನಿಜಕ್ಕೂ ಆತಂಕ ಮೂಡಿಸುತ್ತದೆ.ಸರ್ಕಾರ ಶೀಘ್ರದಲ್ಲೇ ತ್ವರಿತಗತಿ ನ್ಯಾಯಾಲಯದಲ್ಲಿ ಈ ಕೇಸ್ ತೀರ್ಪು ಬರಲು ವರ್ಗಾಯಿಸಬೇಕು.ಹಾಗು ಇದನ್ನ ಎಲ್ಲಾ ಆಯಮದಲ್ಲೂ ತನಿಖೆ ನಡೆಸಿ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡುವಂತಾಗಬೇಕು 🙏
ಜೈ ಆಂಜನೇಯ 🙏 pic.twitter.com/z1gkJkEETU