* ಬಾಡಿ ವಾರಂಟ್ ಪಡೆದು ಬೆಂಗಳೂರಿಗೆ ಕರೆತಂದ ಪೊಲೀಸರು
* ಹಿಜಾಬ್ ತೀರ್ಪು ಸಂಬಂಧ ಕರ್ನಾಟಕ ಹೈಕೋರ್ಟ್ ಜಡ್ಜ್‌ಗೆ ಕೊಲೆ ಬೆದರಿಕೆ ಹಾಕಿದ್ದ ಪ್ರಕರಣ
* ತಂಜಾವೂರಿನ ಜಮಾಲ್ ಮಹಮ್ಮದ್ ಉಸ್ಮಾನಿ ಬಂಧಿತ ಆರೋಪಿ
ಬೆಂಗಳೂರು(ಮಾ.26): ಹಿಜಾಬ್ ತೀರ್ಪು(Hijab Verdict) ಸಂಬಂಧ ಕರ್ನಾಟಕ ಹೈಕೋರ್ಟ್(Highcourt of Karnatraka) ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ತಮಿಳುನಾಡು ಮೂಲದ ಮತ್ತೊಬ್ಬ ಆರೋಪಿಯನ್ನು ವಿಧಾನಸೌಧ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಡಿಸಿದ್ದಾರೆ.
ತಂಜಾವೂರಿನ ಜಮಾಲ್ ಮಹಮ್ಮದ್ ಉಸ್ಮಾನಿ (44) ಎಂಬಾತನನ್ನು ಬಾಡಿ ವಾರೆಂಟ್ ಮೇಲೆ ತಮಿಳುನಾಡಿನಿಂದ(Tamil Nadu) ಶುಕ್ರವಾರ ನಗರಕ್ಕೆ ಕರೆತಂದಿರುವ ಪೊಲೀಸರು(Police), ನ್ಯಾಯಾಲಯಕ್ಕೆ(Court) ಹಾಜರುಪಡಿಸಿ ಎಂಟು ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.
Hijab Verdict: ಜಡ್ಜ್‌ಗಳಿಗೆ ಜೀವ ಬೆದರಿಕೆ ಹಾಕಿದ್ದ ರೆಹಮತ್ ಉಲ್ಲಾ ಖಾಕಿ ವಶಕ್ಕೆ
ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ(Threat of Murder) ಹಾಕಿದ್ದ ಪ್ರಕರಣ ಸಂಬಂಧ ತಮಿಳುನಾಡಿನ ತೌಹೀದ್ ಜಮಾತ್ ಸಂಘಟನೆ ಮುಖಂಡ ರಹಮತ್ ಉಲ್ಲಾನನ್ನು ಮಾ.22ರಂದು ಬಾಡಿ ವಾರೆಂಟ್ ಮೇಲೆ ನಗರಕ್ಕೆ ಕರೆತಂದು ಎಂಟು ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮತ್ತೊಬ್ಬ ಆರೋಪಿ ಜಮಾಲ್‌ನನ್ನು ತಮಿಳುನಾಡಿನ ತಂಜಾವೂರಿನಿಂದ ಕರೆತಂದು ವಿಚಾರಣೆಗೆ ಒಳಪಡಿಸಿದ್ದಾರೆ.
ಶಾಲಾ-ಕಾಲೇಜು ತರಗತಿಯಲ್ಲಿ ಹಿಜಾಬ್ ಧರಿಸುವಂತಿಲ್ಲ ಎಂದು ಹೈಕೋರ್ಟ್ ತ್ರಿಸದಸ್ಯ ಪೀಠ ಆದೇಶಿಸಿತ್ತು. ಈ ಸಂಬಂಧ ತಮಿಳುನಾಡಿನ ಮದುರೈನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನ ತೌಹೀದ್ ಜಮಾದ್ ಮುಸ್ಲಿಂ ಸಂಘಟನೆ ಮುಖಂಡ ರೆಹಮತ್ ಉಲ್ಲಾ ಕರ್ನಾಟಕ ಹೈಕೋರ್ಟ್‌ನ ಹಿಜಾಬ್ ಕುರಿತು ತೀರ್ಪು ಉಲ್ಲೇಖಿಸಿ, ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೆ ಪರೋಕ್ಷವಾಗಿ ಬೆದರಿಕೆ ಹಾಕಿದ್ದ.
ಈ ಹೇಳಿಕೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೊ ಆಧರಿಸಿ ವಕೀಲ ಸುಧಾ ಖಟ್ವ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿತ್ತು. ಈ ಸಂಬಂಧ ತನಿಖೆಗೆ ಇಳಿದಿರುವ ಪೊಲೀಸರು ಸದ್ಯಕ್ಕೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.
ಹಿಜಾಬ್ ತಿರ್ಪು ನೀಡಿದ ಜಡ್ಜ್‌ಗೆ ಜೀವ ಬೆದರಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ
ಬೆಂಗಳೂರು: ಹಿಜಾಬ್ ತಿರ್ಪು ನೀಡಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆ ಹಾಕಿರುವ ಪ್ರಕರಣವನ್ನು ಕರ್ನಾಟಕ ಸರ್ಕಾರ (Karnataka Government) ಗಂಭೀರವಾಗಿ ಪರಿಗಣಿಸಿದೆ.
ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಿದವರು ಯಾರು ?ಅವರ ಹಿಂದೆ ಯಾವ ಸಂಘಟನೆ ಇದೆ ಇದ್ರೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು NIA ಗೆ ವಹಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಹಿಜಾಬ್ ವಿಚಾರದಲ್ಲಿ ನೀಡಿದ ತೀರ್ಪುಗೆ ಕೊಲೆ ಬೆದರಿಕೆ ಹಾಕ್ತಾರೆ ಅಂದ್ರೆ ಇದು ಯಾವ ಸಂದೇಶ ನೀಡಲಿದೆ.ಇದನ್ನ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಎಲ್ಲಾ ರೀತಿಯ ಕ್ರಮಕೈಗೊಳ್ಳಲು ಮುಂದಾಗಿದೆ. ಇದರ ಜೊತೆ NIA ನಿಂದಲ್ಲೂ ತೆನಿಖೆ ನಡೆಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ಸಹ ನಡೆಯುತ್ತಿದೆ.
ಈ ಪ್ರಕರಣವನ್ನ NIA ಗೆ ನೀಡುವ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra), ರಾಜ್ಯ ಸರ್ಕಾರ ಈ ವಿಷಯವನ್ನ ಗಂಭೀರವಾಗಿ ಪರಿಗಣಿಸಿದೆ. ಸಿಟ್ಟಿಂಗ್ ಜಡ್ಜ್ ಮೇಲೆ ಅವರು ಕೊಟ್ಟಂತ ತಿರ್ಪುಗೆ ಕೊಲೆ ಬೆದರಿಕೆ ಹಾಕ್ತಾರೆ ಅಂದ್ರೆ ಏನು ಅರ್ಥ. ಇದನ್ನ ಸಾಮಾನ್ಯವಾಗಿ ಪರಿಗಣಿಸೋದಿಲ್ಲ. ಇದರ ಬಗ್ಗೆ ಬೆಂಗಳೂರಲ್ಲಿ ಒಂದು ಕೇಸ್ ದಾಖಲಾಗಿದೆ. ತಮಿಳುನಾಡಿನಲ್ಲೂ ಕೇಸ್ ದಾಖಲಾಗಿದ್ದು ಇಬ್ಬರನ್ನ ವಶಕ್ಕೆ ಪಡೆಯಲಾಗಿದೆ ಎಂದರು.
Hijab Verdict ಜಡ್ಜ್‌ಗಳಿಗೆ ಜೀವ ಬೆದರಿಕೆ ಹಾಕಿದವರ ವಿರುದ್ಧ ಶ್ರೀರಾಮ ಸೇನೆ ದೂರು!
ಇನ್ಮೇಲೆ ಇಂಥವರ ಧ್ವನಿ ಬರೆದಿರೋ ರೀತಿ ಕ್ರಮ ಕೈಗೊಳ್ಳುತ್ತೇವೆ. ದೇಶದ ನ್ಯಾಯಂಗ ವ್ಯವಸ್ಥೆಯನ್ನೇ ಮೊಸಕುಗೊಳಿಸುವ ಪ್ರಯತ್ನ ಯಾರು ಮಾಡಬಾರದು. ತೀರ್ಪು ಅವರಿಗೆ ತೃಪ್ತಿ ತಂದಿಲ್ಲ ಅಂದ್ರೆ ಸುಪ್ರೀಂ ಕೋರ್ಟ್ ಗೆ ಹೋಗುವ ಅವಕಾಶ ಇದೆ. ತೀರ್ಪು ಕೊಟ್ಟಿದಕ್ಕೆ ಜೀವ ತಗೀತಿನಿ ಅಂದ್ರೆ ಏನ್ ಅರ್ಥ ಎಂದು ಹೇಳಿದರು.
ನ್ಯಾಯಾಂಗ ಶಕ್ತಿಯನ್ನ ಯಾರು ಕುಂದಿಸುವ ಪ್ರಯತ್ನ ಮಾಡ್ತಾರೆ ಅಂಥವರ ಶಕ್ತಿಯನ್ನ ನಾವು ಕುಂದಿಸುತ್ತೇವೆ. ಸರ್ಕಾರ ಸುಮ್ಮನೆ ಕುರೋದಿಲ್ಲ, ಅವರ ಮೇಲೆ ಸರಿಯಾದ ಅಕ್ಷನ್ ತಗೆದುಕೊಳ್ಳುತ್ತೇವೆ..ಈ ಪ್ರಕರಣವನ್ನ NIA ಗೆ ಕೊಡೋದಕ್ಕೆ ಸಾಧ್ಯವಾ ಅನ್ನೋದು ಚಿಂತನೆ ಇದೆ.. ಪೊಲೀಸರ ಇದ್ರ ಬಗ್ಗೆ ನಿರ್ಣಯ ತಗೆದುಕೊಳ್ತಾರೆ ಎಂದು ತಿಳಿಸಿದರು.