ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರಿಸುವ ಲಕ್ಷಣಗಳು ಕಾಣಿಸುತ್ತಿದ್ದು, ಕರಾವಳಿ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಮುನ್ನೆಚ್ಚರಿಕೆ ನೀಡಲಾಗಿದೆ. ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಜು.31ರಿಂದ ಆಗಸ್ಟ್ 3 ವರೆಗೆ 6ರಿಂದ 11 ಸೆಂ.ಮೀ.ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು (ಜು.30): ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರಿಸುವ ಲಕ್ಷಣಗಳು ಕಾಣಿಸುತ್ತಿದ್ದು, ಕರಾವಳಿ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಮುನ್ನೆಚ್ಚರಿಕೆ ನೀಡಲಾಗಿದೆ. ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಜು.31ರಿಂದ ಆಗಸ್ಟ್ 3 ವರೆಗೆ 6ರಿಂದ 11 ಸೆಂ.ಮೀ.ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಲೆನಾಡು ಭಾಗದ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ಆಗಸ್ಟ್ 3ಕ್ಕೆ ‘ಯೆಲ್ಲೋ ಅಲರ್ಟ್’ ಎಚ್ಚರಿಕೆ ನೀಡಲಾಗಿದೆ.
ಉಳಿದಂತೆ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳ ಬಹುತೇಕ ಕಡೆ ಮುಂದಿನ ಒಂದು ವಾರ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ದಕ್ಷಿಣ ಕನ್ನಡದ ಸುಬ್ರಹ್ಮಣ್ಯದಲ್ಲಿ 5 ಸೆಂ.ಮೀ, ಕೊಲ್ಲೂರಿನಲ್ಲಿ 4 ಸೆಂ.ಮೀ. ಮಳೆಯಾಗಿದೆ. ಕ್ಯಾಸಲ್ ರಾಕ್, ಗೇರುಸೊಪ್ಪ, ಕಾರ್ಕಳ, ಬೆಳ್ತಂಗಡಿ, ಧರ್ಮಸ್ಥಳ, ಉಡುಪಿ, ಶೃಂಗೇರಿ, ತಾಳಗುಪ್ಪ, ಲಿಂಗನಮಕ್ಕಿ, ಉಪ್ಪಿನಂಗಡಿ, ಪುತ್ತೂರು, ಕುಂದಾಪುರ, ಕೋಟ, ಮಂಕಿ, ಶಿರಾಲಿ, ಸಿದ್ದಾಪುರ, ಲೋಂಡಾ, ಜಯಪುರ, ಎನ್.ಆರ್. ಪುರ, ಭಾಗಮಂಡಲದಲ್ಲಿ ತಲಾ 3 ಸೆಂ.ಮೀ ಮಳೆಯಾದ ವರದಿಯಾಗಿದೆ.
undefined
ಹವಾಮಾನ ಆಧಾರಿತ ಬೆಳೆ ಬಗ್ಗೆ ಜಾಗೃತಿ ಮೂಡಿಸಿ: ಶಾಸಕ ದರ್ಶನ್ ಪುಟ್ಟಣ್ಣಯ್ಯ
ಜಲಪಾತ ವೀಕ್ಷಣೆಗೆ ಅಧಿಕಾರಿಗಳ ನಿರ್ಬಂಧ: ಸತತ ಎರಡು ದಿನಗಳ ಕಾಲ ರಜೆ ಹಾಗೂ ವಾರಾಂತ್ಯವಿದ್ದರೂ ಕರಾವಳಿ ಕಡಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರು ಆಗಮಿಸುತ್ತಿದ್ದರೂ ಅಧಿಕಾರಿಗಳು ಅನುವು ಮಾಡುತ್ತಿಲ್ಲ. ಕಳೆದ ಕೆಲವು ದಿನಗಳ ಹಿಂದೆ ಸುರಿದ ಸತತ ಭಾರಿ ಮಳೆಯಿಂದಾಗಿ ನೆರೆ, ಪ್ರವಾಹ ಉಂಟಾಗಿದ್ದು, ವಾರಾಂತ್ಯ ಹಾಗೂ ಎರಡು ದಿನ ರಜೆಯಿದ್ದರೂ ಗೋಕರ್ಣ, ಮುರುಡೇಶ್ವರ ಒಳಗೊಂಡು ಪ್ರಮುಖ ಸ್ಥಳಗಳಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಮುರುಡೇಶ್ವರ, ಗೋಕರ್ಣ, ಅಪ್ಸರಕೊಂಡದ ಕಡಲ ತೀರಗಳಿಗೆ ಹಾಗೂ ದೇವರ ದರ್ಶನಕ್ಕೆ ವಾರಾಂತ್ಯದಲ್ಲಿ ಎರಡು-ಮೂರು ರಜೆ ಸಿಕ್ಕದರೆ ಸಾವಿರಾರು ಜನರು ಆಗಮಿಸುತ್ತಿದ್ದರು. ಆದರೆ ಮಳೆಗಾಲದ ಅವಧಿಯಲ್ಲಿ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡು ಅಲೆಗಳ ಅಬ್ಬರ ಹೆಚ್ಚಿರುವುದರಿಂದ ನೀರಿಗೆ ಇಳಿಯಲು ಬಿಡುವುದಿಲ್ಲ. ಕಾರಣ ಕರಾವಳಿ ಭಾಗದಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಿದೆ.
ಪ್ರವೇಶಕ್ಕೆ ನಿರ್ಬಂಧ: ಜೋಗ ಜಲಪಾತ, ಉಂಚಳ್ಳಿ, ವಿಭೂತಿ, ಸಾತೊಡ್ಡಿ, ಶಿರಲೆ, ಮಾಗೋಡ, ಹನುಮಾನಲಾಠಿ, ನಾಗರಮಡಿ ಒಳಗೊಂಡು ಹತ್ತುಹಲವು ಫಾಲ್ಸ್‌ಗಳು ಜಿಲ್ಲೆಯ ಮಲೆನಾಡು, ಕರಾವಳಿ ಭಾಗದಲ್ಲಿದ್ದು, ಕಳೆದ ವಾರ ಉತ್ತಮ ಮಳೆಯಾದ್ದರಿಂದ ಮೈದುಂಬಿ ಹರಿಯುತ್ತಿದೆ. ಆದರೆ ಜಿಲ್ಲಾಡಳಿತವು ಪ್ರವಾಸಿಗರ ಹಿತದೃಷ್ಟಿಯಿಂದ ಎಲ್ಲ ಜಲಪಾತಗಳಿಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಿದೆ. 2017ರಲ್ಲಿ ಕಾರವಾರ ತಾಲೂಕಿನ ನಾಗರಮಡಿ ಜಲಪಾತಕ್ಕೆ ಪಿಕ್‌ನಿಕ್‌ಗೆ ಬಂದಿದ್ದ ಗೋವಾದ ಪ್ರವಾಸಿಗರು ನೀರಿಗೆ ಇಳಿದಿದ್ದರು. ಏಕಾಏಕಿ ರಭಸದಿಂದ ನೀರು ಹರಿದುಬಂದ ಕಾರಣ ಆರು ಜನರು ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದರು. ಭಾರಿ ಮಳೆಯಾದಾಗ ಜಲಪಾತಗಳಿಗೆ ಏಕಾಏಕಿ ನೀರು ಹರಿದು ಬರುತ್ತದೆ. ಆದರೆ ಹೊರಗಿನಿಂದ ಆಗಮಿಸಿದವರಿಗೆ ಇದರ ಕಲ್ಪನೆ ಇಲ್ಲದೇ ನೀರಿಗಿಳಿದು ಜೀವಕ್ಕೆ ಅಪಾಯ ತಂದುಕೊಳ್ಳುತ್ತಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ: ಮಾಜಿ ಸಚಿವ ಸುಧಾಕರ್
ಶಿರಲೆಗೆ ಬಂದವರಿಗೆ ನಿರಾಸೆ: ಶಿರಲೆ ಫಾಲ್ಸ್‌ಗೆ 80ಕ್ಕೂ ಅಧಿಕ ಜನರು ಶನಿವಾರ ಆಗಮಿಸಿದ್ದು, ಆದರೆ ಯಾರನ್ನೂ ಒಳಕ್ಕೆ ಬಿಟ್ಟಿಲ್ಲ. ಇದಲ್ಲದೇ ಮಾಗೋಡ, ಸಾತೊಡ್ಡಿಗೂ ಪ್ರವಾಸಿಗರು ಆಗಮಿಸಿದ್ದು, ಅಧಿಕಾರಿಗಳು ವಾಪಸ್ ಕಳಿಸಿದ್ದಾರೆ. ವರ್ಷದ ಹಿಂದೆ ಶಿರಲೆ ಫಾಲ್ಸ್‌ನಲ್ಲಿ ದುರಂತ ಸಂಭವಿಸಿ ನಾಲ್ವರು ಸಾವಿಗೀಡಾಗಿದ್ದರು. ಮಳೆಗಾಲ ಅರಂಭವಾದಾಗಿನಿಂದಲೆ ಫಾಲ್ಸ್‌ಗೆ ಹೋಗುವುದನ್ನು ನಿಷೇಧಿಸಿ ಭದ್ರತೆ ಕಲ್ಪಿಸಲಾಗಿದೆ. ವೀಕೆಂಡ್‌ಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನಿಷೇಧ ಇರುವ ಕಾರಣ ವಾಪಸ್ ಹೋಗುವಂತಾಗಿದೆ.