ಪುತ್ರ ರಾಕೇಶ್ ಸಮಾಧಿಗೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

By Govindaraj S  |  First Published Jul 29, 2023, 11:59 PM IST

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಟಿ.ಕಾಟೂರು ಬಳಿ ಇರುವ ತಮ್ಮ ತೋಟದಲ್ಲಿ ಪುತ್ರ ದಿ.ರಾಕೇಶ್‌ ಅವರ 7ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಸಮಾಧಿಗೆ ಪೂಜೆ ಸಲ್ಲಿಸಿದರು. 


ಮೈಸೂರು (ಜು.29): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಟಿ.ಕಾಟೂರು ಬಳಿ ಇರುವ ತಮ್ಮ ತೋಟದಲ್ಲಿ ಪುತ್ರ ದಿ.ರಾಕೇಶ್‌ ಅವರ 7ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಸಮಾಧಿಗೆ ಪೂಜೆ ಸಲ್ಲಿಸಿದರು. ದಿ.ರಾಕೇಶ್‌ ಅವರು 2016ರಲ್ಲಿ ಅಕಾಲಿಕ ಮರಣ ಹೊಂದಿದ್ದು, ನಂತರ ಪ್ರತಿವರ್ಷ ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ, ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ, ರಾಕೇಶ್‌ ಪತ್ನಿ ಸ್ಮಿತಾ ರಾಕೇಶ್‌, ಮಕ್ಕಳಾದ ಧವನ್‌ ರಾಕೇಶ್‌, ತನ್ಮಯಿ ರಾಕೇಶ್‌, ಸಿದ್ದರಾಮಯ್ಯ ಅವರ ಸಹೋದರ ಸಿದ್ದೇಗೌಡ ಕೂಡ ಹಾಜರಿದ್ದು, ಪೂಜೆ ಸಲ್ಲಿಸಿದರು.

ವರುಣ ಸರ್ಕಾರಿ ಶಾಲೆಗೆ ತಟ್ಟೆಲೋಟಗಳು ದೇಣಿಗೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮಾನಿ ಬಳಗ ಹಾಗೂ ಅಹಿಂದ ಸಂಘಟನೆ ವತಿಯಿಂದ ದಿ. ರಾಕೇಶ್‌ ಸಿದ್ದರಾಮಯ್ಯ ಸ್ಮರಣಾರ್ಥವಾಗಿ ಮೈಸೂರು ತಾಲೂಕು ವರುಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಉಚಿತವಾಗಿ ತಟ್ಟೆಮತ್ತು ಲೋಟಗಳನ್ನು ವಿತರಿಸಲಾಯಿತು. ಈ ವೇಳೆ ಕೆಪಿಸಿಸಿ ಸದಸ್ಯ ನಜರ್‌ಬಾದ್‌ ನಟರಾಜ್‌ ಮಾತನಾಡಿ, ರಾಕೇಶ್‌ ಸಿದ್ದರಾಮಯ್ಯ ಅವರು ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಜನಸೇವೆಯ ಮೂಲಕ ಯುವಕರಿಗೆ ಸ್ಪೂರ್ತಿಯಾಗಿ ರಾಜ್ಯದ ವಿವಿಧೆಡೆ ಲಕ್ಷಾಂತರ ಅಭಿಮಾನಗಳನ್ನು ಹೊಂದಿದ್ದರು. ಯಶಸ್ವಿ ರಾಜಕಾರಣಿಯಾಗುವ ಸಂಧರ್ಭದಲ್ಲಿ ಇಹಲೋಕ ತ್ಯಜಿಸಿದರು ಎಂದರು.

Latest Videos

undefined

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ: ಮಾಜಿ ಸಚಿವ ಸುಧಾಕರ್‌

ಕೆ.ಆರ್‌. ಬ್ಯಾಂಕ್‌ ಉಪಾಧ್ಯಕ್ಷ ಬಸವರಾಜ್‌ ಮಾತನಾಡಿ, ರಾಕೇಶ್‌ ಸಿದ್ದರಾಮಯ್ಯ ಅವರ ಸ್ಮರಣೆಯಲ್ಲಿ ಪ್ರತಿವರ್ಷ ಸಾಮಾಜಿಕ ಸೇವ ಕಾರ್ಯಗಳ ಮೂಲಕ ಸ್ಮರಿಸಲಾಗುತ್ತಿದೆ. ಸರ್ಕಾರಿ ಶಾಲೆ ಪ್ರಗತಿ ಕಂಡರೆ ಮಕ್ಕಳ ಶೈಕ್ಷಣಿಕ ಗುಣಮಟ್ಟಸುಧಾರಿಸುತ್ತದೆ. ಶಿಕ್ಷಣ ಉಣಬಡಿಸುವ ಶಾಲೆಗಳು ಅಭಿವೃದ್ಧಿ ಹೊಂದಿದ್ದರೆ, ನಗರ ಹಾಗೂ ಗ್ರಾಮದ ಅಭಿವೃದ್ಧಿಯಾದಂತೆ ಎಂದು ಹೇಳಿದರು. ಉದ್ಯಮಿ ರಾಜೇಶ್‌, ಮುಖಂಡರಾದ ಅನಿಲ್‌ರಾಜ್‌, ಲೋಕೇಶ್‌, ವರುಣ ಮಹದೇವ್‌, ಲೋಕೇಶ್‌, ಪವನ್‌ ಸಿದ್ದರಾಮ, ಕನಕಮೂರ್ತಿ, ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಇದ್ದರು.

click me!