ಹುಲಿಗಳ ಸಂಖ್ಯೆಯಲ್ಲಿ ರಾಜ್ಯದಲ್ಲೇ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ನಂಬರ್ ಒನ್ ಸ್ಥಾನ ಗಳಿಸಿದ್ದರೆ ನಾಗರಹೊಳೆ ಎರಡನೇ ಸ್ಥಾನ ಪಡೆದಿದೆ. ಇದರೊಂದಿಗೆ ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಬಂಡೀಪುರ ಹುಲಿಸಂರಕ್ಷಿತ ಪ್ರದೇಶಕ್ಕೆ ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ.
ವರದಿ: ಪುಟ್ಟರಾಜು.ಆರ್.ಸಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ (ಜು.30): ಹುಲಿಗಳ ಸಂಖ್ಯೆಯಲ್ಲಿ ರಾಜ್ಯದಲ್ಲೇ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ನಂಬರ್ ಒನ್ ಸ್ಥಾನ ಗಳಿಸಿದ್ದರೆ ನಾಗರಹೊಳೆ ಎರಡನೇ ಸ್ಥಾನ ಪಡೆದಿದೆ. ಇದರೊಂದಿಗೆ ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಬಂಡೀಪುರ ಹುಲಿಸಂರಕ್ಷಿತ ಪ್ರದೇಶಕ್ಕೆ ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಹುಲಿ ದಿನಚಾರಣೆ ಅಂಗವಾಗಿ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯಿಂದ 2022 ರ ಹುಲಿ ಗಣತಿ ವರದಿ ಬಿಡುಗಡೆ ಮಾಡಿದ್ದು ಬಂಡೀಪುರ ಹುಲಿಸಂರಕ್ಷಿತ ಪ್ರದೇಶ ಕರ್ನಾಟಕದಲ್ಲಿ ಮೊದಲ ಸ್ಥಾನದಲ್ಲಿದ್ದರೆ ರಾಷ್ಟ್ರ ಮಟ್ಟದಲ್ಲಿ ಎರಡನೇ ಸ್ಥಾನ ಪಡೆದಿದೆ.
undefined
ದೇಶದಲ್ಲೇ ಉತ್ತರಖಾಂಡ್‌ನ ಜಿಮ್ ಕಾರ್ಬೆಟ್ ಹುಲಿಸಂರಕ್ಷಿತ ಪ್ರದೇಶ 260 ಹುಲಿ ಗಳೊಂದಿಗೆ ಮೊದಲ ಸ್ಥಾನ ಗಳಿಸಿದೆ. ರಾಷ್ಟ್ರ ಮಟ್ಟದಲ್ಲಿ ಬಂಡೀಪುರ 250 ಹುಲಿಗಳೊಂದಿಗೆ ಎರಡನೇ ಸ್ಥಾನ ಪಡೆದಿದೆ. ದೇಶದಲ್ಲಿ ರಾಜ್ಯಗಳ ಪೈಕಿ ಮದ್ಯಪ್ರದೇಶ 785 ಹುಲಿಗಳೊಂದಿಗೆ ಮೊದಲ ಸ್ಥಾನ ಪಡೆದಿದಿದ್ದರೆ ಕರ್ನಾಟಕ 563 ಹುಲಿಗಳೊಂದಿಗೆ ಎರಡನೇ ಸ್ಥಾನ ಗಳಿಸಿದೆ. ರಾಜ್ಯದಲ್ಲಿ ಬಂಡೀಪುರ 250 ಹುಲಿಗಳು, ನಾಗರಹೊಳೆಯಲ್ಲಿ 241 ಹುಲಿಗಳು ಪತ್ತೆಯಾಗಿವೆ. ಇದರೊಂದಿಗೆ ಬಂಡೀಪುರ ಹುಲಿಗಳ ಸಂತತಿ ವೃದ್ಧಿಗೆ ಪೂರಕ ವಾತವರಣ ಹೊಂದಿದ ಪ್ರದೇಶ ವಾಗಿದ್ದು, ಹುಲಿ ಸಂರಕ್ಷಣೆಗೆ ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಯಿಂದ ಹಿಡಿದು ಹಿರಿಯ ಅಧಿಕಾರಿಗಳ ಶ್ರಮ ಕಾರಣವಾಗಿದೆ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ರಮೇಶ್‌ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ: ಮಾಜಿ ಸಚಿವ ಸುಧಾಕರ್
ಹುಲಿಗಳು ಭಾರತದಲ್ಲಿ ಅಳಿವಿನಂಚಿನಲ್ಲಿದ್ದ ಪ್ರಾಣಿ. ಆದ್ರೀಗಾ ಹುಲಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಚಾಮರಾಜನಗರ ಜಿಲ್ಲೆಯಲ್ಲೆ ಕಳೆದ 10 ವರ್ಷದಲ್ಲಿ 150 ಕ್ಕು ಹೆಚ್ಚು ಹುಲಿಗಳ ಸಂಖ್ಯೆ ಹೆಚ್ಚಾಗಿದ್ದು, ಅತಿಹೆಚ್ಚು ಹುಲಿಗಳ ಪೋಷಿಸುತ್ತಿರುವ ಜಿಲ್ಲೆ ಎಂಬ ಹೆಗ್ಗಳಿಕೆಗು ಪಾತ್ರವಾಗಿದೆ. ಜುಲೈ 29,ಈ ದಿನವನ್ನ ವಿಶ್ವ ಹುಲಿ ದಿನವಾಗಿ ಆಚರಣೆ ಮಾಡಲಾಗುತ್ತೆ. ಈ ಹುಲಿಗಳ ಉಳಿಸುವುದೆ ಹಿಂದೆ ದೊಡ್ಡ ಸವಲಾಗಿತ್ತು. ಆದ್ರೀಗಾ ಹುಲಿಗಳ ಸಂರಕ್ಷಣೆ ಉತ್ತಮವಾಗಿದ್ದು, ಹುಲಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಅದ್ರಲ್ಲೂ ಗಡಿ ಜಿಲ್ಲೆ ಚಾಮರಾಜನಗರ ಹುಲಿಗಳ ನಾಡು ಎಂದೆ ಹೆಸರು ಗಳಿಸಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಬಂಡೀಪುರ, ಬಿಳಿಗಿರಿ ರಕ್ಷಿತಾರಣ್ಯಗಳಿದೆ.ಹಾಗೇ ಮಲೈ ಮಹದೇಶ್ವರ ವನ್ಯಜೀವಿ ಧಾಮ ಕೆಲವೆ ದಿನಗಳಲ್ಲಿ ರಕ್ಷಿತಾರಣ್ಯ ಆಗುವ ನಿರೀಕ್ಷೆ ಕೂಡ ಇದೆ. ಮೊದಲಿಗೆ 1973 ರಲ್ಲಿ ಬಂಡೀಪುರ ಅರಣ್ಯ ಹುಲಿ ರಕ್ಷಿತಾರಣ್ಯ ಘೋಷಣೆಯಾಯ್ತು. ಹುಲಿ ರಕ್ಷಿತಾರಣ್ಯ ಎಂದು ಘೋಷಣೆಯಾದಾಗ ಕೇವಲ 12 ಹುಲಿಗಳಷ್ಟೆ ಇತ್ತು ಎಂದು ಅಂದಾಜು ಮಾಡಲಾಗಿತ್ತು.ಬಳಿಕ ದಿನ ಕಳೆದಂತೆ ಹುಲಿಗಳ ಸಂರಕ್ಷಣೆ ಹೆಚ್ಚಾಯ್ತು. ಇದೀಗಾ ಕಳೆದ ಹುಲಿ ಗಣತಿಯ ಪ್ರಕಾರ ಸುಮಾರು 140 ಕ್ಕು ಹೆಚ್ಚು ಹುಲಿಗಳಿರೋದು ಗೊತ್ತಾಗಿದೆ. ಅದೇ ರೀತಿ ಬಿಳಿಗಿರಿ ರಕ್ಷಿತಾರಣ್ಯದಲ್ಲು ಕೂಡ ಕಳೆದ ಗಣತಿಯಲ್ಲಿ 86 ಹುಲಿಗಳಿರೋದು ಕಂಡು ಬಂದಿದೆ.
ಮಲೈ ಮಹದೇಶ್ವರ ವನ್ಯಜೀವಿಧಾಮದಲ್ಲಿ 15 ಕ್ಕು ಹೆಚ್ಚು ಹುಲಿಗಳಿದ್ದು, ಇದೀಗಾ ಅದರ ಸಂಖ್ಯೆ 25 ರಿಂದ 30 ಕ್ಕೆ ಏರಿಕೆಯಾಗಿದೆ ಎಂದು ಅಂದಾಜಿಸಲಾಗಿದೆ. ಸದ್ಯ ಗಣತಿಯ ಪ್ರಕಾರವೇ ಕಳೆದ 10 ವರ್ಷದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ 150 ಕ್ಕು ಹೆಚ್ಚು ಹುಲಿಗಳು ಹೆಚ್ಚಾಗಿದ್ರೆ, ಸದ್ಯ ಜಿಲ್ಲೆಯ ಕಾಡಿನಲ್ಲಿ 250 ಕ್ಕು ಹೆಚ್ಚು ಹುಲಿಗಳಿದೆ. ಇನ್ನು ಹುಲಿಗಳ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣ ಅಂದ್ರೆ ಸಂರಕ್ಷಣೆ ವಿಚಾರವಾಗಿ ಅರಣ್ಯ ಇಲಾಖೆ ತೆಗೆದುಕೊಂಡ ಹೆಜ್ಜೆಗಳು. ಈ ಹಿಂದೆ ಹುಲಿಗಳ ಹಾಗೂ ವನ್ಯಜೀವಿ ಬೇಟೆಗಾರರು ಮೇಲೆ ಇಲಾಖೆ ಸಾಕಷ್ಟು ನಿಗ ಇಟ್ಟಿತು.
ಮಲೆನಾಡಿನಲ್ಲಿ ಮುಂಗಾರು ಮಳೆ ಬಿಡುವು: ಜನ ಜೀವನ ಸಹಜ ಸ್ಥಿತಿಯತ್ತ
ಇದ್ರಿಂದ ಹುಲಿಗಳ ಸಂಖ್ಯೆ ಹೆಚ್ಚಾಯ್ತು. ಅದ್ರಲ್ಲು ಹುಲಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಜಿಲ್ಲೆಗೆ ವಿಶೇಷ ಗರಿಮೂಡಿದಂತಾಗಿದೆ. ಈ ಮೂಲಕ ಪ್ರವಾಸೋದ್ಯಮ ಚಟುವಟಿಕೆ ಕೂಡ ಹೆಚ್ಚಾಗಿದೆ. ದೇಶ ವಿದೇಶದಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ. ಅದೇ ರೀತಿ ಕಾಡಿನ ಸಂರಕ್ಷಣೆಯಲ್ಲು ಹುಲಿಗಳ ಪಾತ್ರ ವಹಿಸಿದೆ.ಇದೇ ಕಾರಣದಿಂದ್ಲೇ ಪ್ರಧಾನಿ ಮೋದಿ ಬಂಡೀಪುರಕ್ಕೆ ಆಗಮಿಸಿ ಸಫಾರಿ ನಡೆಸಿದ್ದು, ಒಟ್ಟಾರೆ, ಹಿಂದೆ ಕಾಡಲ್ಲಿ ಸಫಾರಿ ಮಾಡಿದ್ರು ಹುಲಿ ಸಿಗಲ್ಲ ಅಂತಿದ್ರು. ಆದ್ರೀಗಾ ಹುಲಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿರೋದ್ರಿಂದ ಪ್ರವಾಸಿಗರಿಗು ಕೂಡ ಹುಲಿಗಳು ದರ್ಶನ ನೀಡ್ತಿದೆ. ಇದರ ಜೊತೆ ಅತಿ ಹೆಚ್ಚು ಹುಲಿಗಳ ಪೋಷಣೆ ಮಾಡ್ತಿರೋದ್ರಿಂದ ಚಾಮರಾಜನಗರ ಹುಲಿಗಳ ನಾಡು ಎಂದೆ ಪ್ರಖ್ಯಾತಿ ಹೊಂದುತ್ತಿದೆ.