ಗುಮ್ಮಟನಗರಿಯಲ್ಲಿ ಮತ್ತೆ ಕಂಪಿಸಿದ ಭೂಮಿ: ಬೆಚ್ಚಿ ಬಿದ್ದ ವಿಜಯಪುರ ಜಿಲ್ಲೆಯ ಜನ!

By Govindaraj S  |  First Published Aug 20, 2022, 10:57 PM IST

ವಿಜಯಪುರದಲ್ಲಿ ಮತ್ತೆ ಭೂಮಿ ಕಂಪಿಸಿದೆ. ಜಿಲ್ಲೆಯ ಜನರು ಬೆಚ್ಚಿಬಿದ್ದಿದ್ದಾರೆ. ಕಳೆದ ತಿಂಗಳಷ್ಟೆ ಭೂಕಂಪನ ಸಂಭವಿಸಿತ್ತು. ಈಗ ಮತ್ತೆ ಭೂಮಿ ಕಂಪಿಸಿದ್ದು ಸಹಜವಾಗಿಯೇ ಜನರಲ್ಲಿ ಭಯ ಮೂಡಿಸಿದೆ.


ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಆ.20): ವಿಜಯಪುರದಲ್ಲಿ ಮತ್ತೆ ಭೂಮಿ ಕಂಪಿಸಿದೆ. ಜಿಲ್ಲೆಯ ಜನರು ಬೆಚ್ಚಿಬಿದ್ದಿದ್ದಾರೆ. ಕಳೆದ ತಿಂಗಳಷ್ಟೆ ಭೂಕಂಪನ ಸಂಭವಿಸಿತ್ತು. ಈಗ ಮತ್ತೆ ಭೂಮಿ ಕಂಪಿಸಿದ್ದು ಸಹಜವಾಗಿಯೇ ಜನರಲ್ಲಿ ಭಯ ಮೂಡಿಸಿದೆ.

Tap to resize

Latest Videos

ನಗರದಾದ್ಯಂತ ಭೂಕಂಪನ ಅನುಭವ: ವಿಜಯಪುರ ನಗರದಾಧ್ಯಂತ ಭೂಕಂಪನ ಅನುಭವವಾಗಿದೆ. ಸರಿಯಾಗಿ ರಾತ್ರಿ 8.16 ನಿಮಿಷಕ್ಕೆ ಭೂಕಂಪನ ಅನುಭವವಾಗಿದೆ. ನಗರದ ಗೋಳಗುಮ್ಮಟ ಏರಿಯಾ, ಬಸವ ನಗರ, ಐಶ್ವರ್ಯ ನಗರ, ಠಕ್ಕೆ, ರಾಜಕುಮಾರ್‌ ಲೇಔಟ್‌ ಸೇರಿದಂತೆ ನಗರದಲ್ಲೆಡೆ ಭೂಕಂಪನ ಅನುಭವಾಗಿದೆ. ಮನೆಯಲ್ಲಿದ್ದವರಿಗೆ ಭೂಕಂಪನದ ಸ್ಪಷ್ಟ ಅನುಭವ ಉಂಟಾಗಿದೆ. ಅದ್ರಲ್ಲು ಎರಡಂತಸ್ಥಿನ ಮನೆಗಳಲ್ಲಿ ವಾಸವಿರುವವರಿಗೆ ಹೆಚ್ಚಿನ ಕಂಪನದ ಅನುಭವ ಉಂಟಾಗಿದೆ.

Vijayapura: ಮೈನವಿರೇಳಿಸಿದ ಟಗರಿನ ಕಾಳಗ: ವೀಕ್ಷಣೆಗೆ ಅಪಾರ ಜನಸ್ತೋಮ

ಮನೆಗಳಿಂದ ಹೊರ ಓಡಿ ಬಂದ ಜನ: ಭೂಕಂಫನ ಸಂಭವಿಸುತ್ತಿದ್ದಂತೆ ಜನರು ಮನೆಗಳಿಂದ ಓಡೋಡಿ ಹೊರ ಬಂದಿದ್ದಾರೆ. ಒಂದು ಕ್ಷಣ ಕುಳೀತ ಜಾಗ ನಡುಗಿದ ಅನುಭವ ಉಂಟಾಗಿದೆ. ಮನೆಗಳಲ್ಲಿ ಸೆಲ್ಫ್‌ನಲ್ಲಿದ್ದ ಸಾಮಾನುಗಳು ಅಲುಗಾಡಿದ ಅನುಭವಾಗಿದೆ. ಇದರಿಂದ ಹೆದರಿದ ಜನರು ಮನೆಗಳಿಂದ ಓಡೋಡಿ ಹೊರ ಬಂದಿದ್ದಾರೆ. ಸಂಬಂಧಿಕರಿಗೆ, ನೆಂಟರಿಗೆ ಕರೆ ಮಾಡಿ ಭೂಕಂಪನದ ಅನುಭವ ಹಂಚಿಕೊಂಡಿದ್ದಾರೆ.

ಭೂಕಂಪನ ಆಫ್‌ಗಳಲ್ಲು ಕಂಪನ ದಾಖಲು: ಭೂಕಂಪನದ ಅಪಡೇಟ್‌ ಹಾಗೂ ತೀವ್ರತೆಗಳ ಬಗ್ಗೆ ಮಾಹಿತಿ ನೀಡುವ ಆಫ್‌ಗಳಲ್ಲು ವಿಜಯಪುರ ಜಿಲ್ಲೆಯಲ್ಲಿ ಭೂಕಂಪನ ಸಂಭವಿಸಿದ್ದ ಬಗ್ಗೆ ದಾಖಲಾಗಿದೆ. ವಿಜಯಪುರ ನಗರ ಅಷ್ಟೇ ಅಲ್ಲದೆ ಬಸವನ ಬಾಗೇವಾಡಿ, ಇಂಡಿ, ಸಿಂದಗಿ ಭಾಗಗಳಲ್ಲು ಭೂಕಂಪನ ಉಂಟಾಗಿರುವ ಬಗ್ಗೆ ಆಫ್‌ಗಳಲ್ಲಿ ಮಾಹಿತಿ ಅಪಡೇಟ್‌ ಆಗಿದೆ.

ಹೊರ ಜಿಲ್ಲೆ, ಹೊರ ರಾಜ್ಯಗಳಲ್ಲು ಕಂಪನ?: ವಿಜಯಪುರ ಜಿಲ್ಲೆ ಅಷ್ಟೆ ಅಲ್ಲದೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ, ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯಲ್ಲು ಭೂಕಂಪನ ಸಂಭವಿಸಿದೆ ಎನ್ನಲಾಗಿದೆ. ಆದ್ರೆ ವಿಜಯಪುರ ಜಿಲ್ಲೆಯಲ್ಲಿ ಉಂಟಾದ ಭೂಕಂಪನಕ್ಕಿಂತಲು ತೀವ್ರತೆ ಕಮ್ಮಿ ಇರಬಹುದು ಎಂದು ಶಂಕಿಸಲಾಗಿದೆ.

3.2 ರಿಂದ 3.6 ತೀವ್ರತೆ ಇರುವ ಸಾಧ್ಯತೆ: ವಿಶ್ವದೆಲ್ಲೆಡೆ ಸಂಭವಿಸುವ ಭೂಕಂಪನಗಳ ಬಗ್ಗೆ ನಿಖರವಾದ ಮಾಹಿತಿ ನೀಡುವ ವೆಬ್‌ ಸೈಟ್‌, ಆಫ್‌ಗಳಲ್ಲಿ ವಿಜಯಪುರ ನಗರದಲ್ಲಿ ಉಂಟಾದ ಭೂಕಂಪನದ ಅಂದಾಜು ತೀವ್ರತೆಯನ್ನ ದಾಖಲಿಸಲಾಗಿದೆ. 3.2 ರಿಂದ 3.6 ರಷ್ಟು ತೀವ್ರತೆಯಲ್ಲಿ ಭೂಕಂಪನ ಉಂಟಾಗಿರಬಹುದು ಎಂದು ಅಂದಾಜು ಮಾಡಲಾಗಿದೆ.

ಜಿಲ್ಲಾಧಿಕಾರಿಗಳ ನಿರ್ದೇಶನ: ಆಗಸ್ಟ್‌ 22ರಂದು ಇಂಚಗೇರಿ ಮಠದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ

ಕಳೆದ ತಿಂಗಳು ಸಹ ಸಂಭವಿಸಿದ್ದ ಭೂಕಂಪನ: ಕಳೆದ ತಿಂಗಳು ಜುಲೈ 9ರಂದು ಸಹ ಭೂಕಂಪನ ಸಂಭವಿಸಿತ್ತು. ಅಂದು ಎರಡು ಬಾರಿ ಭೂಮಿ ಕಂಪಿಸಿತ್ತು. ಬೆಳಗಿನ ಜಾವ 6.22 ನಿಮಿಷಕ್ಕೆ 4.9 ರಷ್ಟು ತೀವ್ರತೆ ದಾಖಲಾಗಿತ್ತು. 6 ಗಂಟೆ 24 ನಿಮಿಷಕ್ಕೆ 4.6 ನಷ್ಟು ತೀವ್ರತೆ ದಾಖಲಾಗಿತ್ತು. ಹಾಗೇ ನೋಡಿದ್ರೆ ಕಳೆದ ವರ್ಷ ವಿಜಯಪುರದಲ್ಲಿ ಉಂಟಾದ ಭೂಕಂಪನಕ್ಕಿಂತಲು ನಡುಗಿದ ಪ್ರಮಾಣ ಹೆಚ್ಚಿತ್ತು ಎಂದು ಸಾರ್ವಜನಿಕರು ಆತಂಕ ವ್ಯಕ್ತ ಪಡೆಸಿದ್ದರು. ಮಹಾರಾಷ್ಟ್ರ ರಾಜ್ಯದ ಸಾಂಗಲಿ ಹಾಗೂ ಸೊಲ್ಲಾಪುರಗಳು ಭೂಕಂಪನ ಕೇಂದ್ರಗಳು ಎನ್ನಲಾಗಿತ್ತು.

click me!