ಸರ್ಕಾರಿ ಕಚೇರಿಯಲ್ಲಿ ಲಂಚ ಇಲ್ಲದೇ ಫೈಲ್ ಮೂವ್ ಆಗಲ್ಲ: ಹೈಕೋರ್ಟ್ ಕಳವಳ

By Suvarna NewsFirst Published Aug 20, 2022, 6:29 PM IST
Highlights

ಈಗಿನ ಕಾಲದಲ್ಲಿ ಲಂಚ ಕೊಡದಿದ್ದರೇ ಕೆಲಸಗಳು ಆಗುವುದು ಕಡಿಮೆ. ಪ್ರತಿಯೊಂದಕ್ಕೂ ಸರ್ಕಾರಿ ಕಚೇರಿಗಳಲ್ಲಿ ಲಂಚ-ಲಂಚ ತಾಂಡವವಾಡುತ್ತಿದೆ. ಇನ್ನು ಈ ಸರ್ಕಾರಿ ಕಚೇರಿಗಳಲ್ಲಿ ಲಂಚದ ಕರ್ನಾಟಕ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.

ವರದಿ: ರಮೇಶ್ ಕೆ.ಎಚ್‌

ಬೆಂಗಳೂರು, (ಆಗಸ್ಟ್.20):
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ ಲಂಚಾವತಾರ ಹೆಚ್ಚಾಗಿದೆ ಎಂದು ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಇಂಜಿನಯರ್ ಒಬ್ಬ ಸಲ್ಲಿಸಿದ್ದ ಜಾಮೀನು ಅರ್ಜಿಯ ತೀರ್ಪಿನಲ್ಲಿ ಹೈಕೋರ್ಟ್ ಈ ಬಗ್ಗೆ ಉಲ್ಲೇಖಿಸಿದೆ.ಒಂದೆಡೆ ಸರ್ಕಾರದ ವಿರುದ್ಧ 40 ಪರ್ಸೆಂಟ್ ಆರೋಪ ಕೇಳಿ ಬಂದಿದ್ದು. ಸರ್ಕಾರಿ ಅಧಿಕಾರಿಗಳು ಕೂಡ ಲಂಚ ನೀಡದೇ ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ನ್ಯಾಯಮೂರ್ತಿ ಕೆ.ನಟರಾಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಬಿಡಿಎ ಇಂಜಿನಿಯರ್ ಬಿ.ಡಿ.ರಾಜು ಎಂಬುವವರು 5 ಲಕ್ಷ ರೂಪಾಯಿ ಲಂಚ ಪಡೆಯುವಾಗಲೇ ಎಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡೆಂಡ್ ಆಗಿ ಸಿಕ್ಕಿಬಿದ್ದಿದ್ರು.
ದೂರುದಾರರ ಪರವಾಗಿ ಕೆಲಸ ಮಾಡಿಕೊಳ್ಳಲು ಇಂಜಿನಿಯರ್ ಬಿ.ಡಿರಾಜು 1ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ರು. ಕೊನೆಗೆ 60 ಲಕ್ಷ ರೂಪಾಯಿ ಲಂಚಕ್ಕೆ ಡೀಲ್ ಕುದುರಿತ್ತು. ಆದ್ರೆ ಲಂಚ ನೀಡಲು ಇಷ್ಟವಿಲ್ಲದ ದೂರುದಾರರು ಎಸಿಬಿಗೆ ದೂರು ನೀಡಿದ್ರು. 

ಗ್ರಾನೈಟ್‌ ಲಾರಿಗಳಿಂದ ಲಂಚ: 20 ಪೊಲೀಸರ ವಿರುದ್ಧ ಕೇಸ್‌

60 ಲಕ್ಷ ಲಕ್ಷದ ಪೈಕಿ 5 ಲಕ್ಷ ರೂಪಾಯಿ ನೀಡುವಾಗಲೇ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಇಂಜಿನಿಯರ್ ರಾಜು ಅವರನ್ನ ಅರೆಸ್ಟ್ ಮಾಡಿದ್ರು.
ಲಂಚ ಪಡೆಯುವಾಗಲೇ ಸಿಕ್ಕಿಬಿದ್ದು ಜೈಲು ಸೇರಿದ್ದ ಇಂಜಿನಿಯರ್ ರಾಜು ಜಾಮೀನು ಅರ್ಜಿಯನ್ನ ಲೋಕಾಯುಕ್ತ ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು. ಜಾಮೀನು ಕೋರಿ ರಾಜು ಹೈಕೋರ್ಟ್ ಮೊರೆ ಹೋಗಿದ್ರು. ಈ ಅರ್ಜಿ ವಿಚಾರಣೆ ವೇಳೆ ಇಂಜಿನಿಯರ್ ರಾಜು ಲಂಚಾವತಾರದ ಬಗ್ಗೆ ಎಸಿಬಿ ಪರ ವಕೀಲರು ಸ್ಪಷ್ಟವಾಗಿ ಹೈಕೋರ್ಟ್ಗೆ ಮನವರಿಕೆ ಮಾಡಿಕೊಟ್ಟಿದ್ರು.

ವಾದ ಪ್ರತಿವಾದ ಆಲಿಸಿ ಇಂಜಿನಯರ್ ಬಿ.ಡಿ.ರಾಜು ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾ.ಕೆ.ನಟರಾಜನ್ ಸರ್ಕಾರಿ ಕಚೇರಿಗಳಲ್ಲಿ ಲಂಚಾವತಾರದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಲಂಚ ನೀಡದೇ ಒಂದೇ ಒಂದೇ ಫೈಲ್ ಮೂವ್ ಆಗಲ್ಲ ಎಂಬ ಅಂಶವನ್ನೇ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

click me!