ಆಟೋದಲ್ಲಿ ಕುಕ್ಕರ್ ಸ್ಫೋಟ: ಮಂಗಳೂರಿನಲ್ಲಿ ನಡೆದಿತ್ತಾ ಭಾರೀ ವಿಧ್ವಂಸಕ ಕೃತ್ಯಕ್ಕೆ ಸಂಚು?

By Govindaraj S  |  First Published Nov 20, 2022, 9:34 AM IST

ಶನಿವಾರ ಸಂಜೆ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಕುಕ್ಕರ್ ಸ್ಫೋಟದ ಬೆನ್ನಲ್ಲೇ ಆತಂಕ ಹೆಚ್ಚಾಗಿದ್ದು, ಮಂಗಳೂರಿನಲ್ಲಿ ಭಾರೀ ವಿಧ್ವಂಸಕ ಕೃತ್ಯಕ್ಕೆ ಸಂಚು ನಡೆದಿತ್ತಾ ಎಂಬ ಅನುಮಾನಗಳು ಮೂಡಿವೆ. 


ಮಂಗಳೂರು (ನ.20): ಶನಿವಾರ ಸಂಜೆ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಕುಕ್ಕರ್ ಸ್ಫೋಟದ ಬೆನ್ನಲ್ಲೇ ಆತಂಕ ಹೆಚ್ಚಾಗಿದ್ದು, ಮಂಗಳೂರಿನಲ್ಲಿ ಭಾರೀ ವಿಧ್ವಂಸಕ ಕೃತ್ಯಕ್ಕೆ ಸಂಚು ನಡೆದಿತ್ತಾ ಎಂಬ ಅನುಮಾನಗಳು ಮೂಡಿವೆ. ಆಟೋದಲ್ಲಿ ಫ್ರೆಶರ್ ಕುಕ್ಕರ್ ಬಾಂಬ್ ಸ್ಪೋಟವಾಯ್ತಾ? ಮುಂಬೈ, ಹೈದರಾಬಾದ್ ಮಾದರಿ ಕುಕ್ಕರ್ ಬಾಂಬ್ ಸ್ಪೋಟದ ಸಂಚಿನ ಶಂಕೆಯಿದ್ದು, ಆಟೋದಲ್ಲಿ ಪತ್ತೆಯಾದ ಕುಕ್ಕರ್‌ನಲ್ಲಿ ಬ್ಯಾಟರಿ ಸರ್ಕ್ಯೂಟ್‌ಗಳು ಪತ್ತೆಯಾಗಿವೆ. ಕುಕ್ಕರ್‌ಗೆ ರಬ್ಬರ್ ಮ್ಯಾಟ್‌ಗಳನ್ನ ಬಳಸಿ ಡ್ಯೂರಸೆಲ್ ಬ್ಯಾಟರಿ ಮೂಲಕ ಸ್ಪೋಟಕ್ಕೆ ಯತ್ನಿಸಿದ ಶಂಕೆ ವ್ಯಕ್ತವಾಗಿದೆ. ಕುಕ್ಕರ್‌ನಲ್ಲಿ ನಟ್-ಬೋಲ್ಟ್‌ಗಳನ್ನ ತುಂಬಿ ಸ್ಪೋಟಕ ತಯಾರಿಸಿರೋದು  ಹಲವು ಅನುಮಾನಕ್ಕೆ ಕಾರಣವಾಗಿದೆ. 

ಕಡಿಮೆ ತೀವ್ರತೆಯ ಸ್ಪೋಟಕಗಳನ್ನು ಬಳಸಿರುವ ಬಗ್ಗೆ ಅನುಮಾನವಿದ್ದು, ಫ್ರೆಶರ್ ಕುಕ್ಕರ್‌ನ ಮುಚ್ಚಳ ಛಿದ್ರಗೊಂಡು ಕೆಳಭಾಗಕ್ಕೆ ಡ್ಯಾಮೇಜ್ ಆಗಿಲ್ಲ. ಆಟೋ ರಿಕ್ಷಾದ ಒಳಭಾಗದಲ್ಲಿ ಭಾರೀ ಪ್ರಮಾಣದ ಹಾನಿಯಾಗಿದ್ದು, ಪ್ರಯಾಣಿಕ ಮತ್ತು ಆಟೋ ಚಾಲಕನಿಗೆ ಗಂಭೀರ ಗಾಯವಾಗಿತ್ತು. KA19 AA 8471 ಸಂಖ್ಯೆಯ ದುರ್ಗಾಪರಮೇಶ್ವರಿ ಹೆಸರಿನ ಆಟೋ ರಿಕ್ಷಾದಲ್ಲಿ ನಿನ್ನೆ (ಶನಿವಾತ) ಸಂಜೆ 4.29ರ ಸುಮಾರಿಗೆ ಮಂಗಳೂರಿನ ‌ನಾಗುರಿ ಬಳಿ ಸ್ಪೋಟವಾಗಿತ್ತು. ಸ್ಪೋಟದ ತೀವ್ರತೆಗೆ ಭಾರೀ ಪ್ರಮಾಣದಲ್ಲಿ ಹೊಗೆಯು ಹಬ್ಬಿದ್ದು, ಪ್ರಯಾಣಿಕ ಮತ್ತು ಚಾಲಕನಿಗೆ ಖಾಸಗಿ ಆಸ್ಪತ್ರೆಯಲ್ಲಿ ‌ಚಿಕಿತ್ಸೆ ನೀಡಲಾಗುತ್ತಿದೆ. ಆಟೋದಲ್ಲಿ ನಿಗೂಢ ಪ್ರಯಾಣಿಕನ ಬಗ್ಗೆ ಅನುಮಾನ ಹೆಚ್ಚಾಗಿದ್ದು, ಆಟೋ ಪ್ರಯಾಣಿಕ ಉತ್ತರ ಪ್ರದೇಶದ ಕಾರ್ಮಿಕನಂತಿದ್ದ. ಪ್ರೇಮ್ ರಾಜ್ ಕನೋಗಿ ಎಂಬ ಹೆಸರಿ‌ನ ಐಡಿ ದಾಖಲೆ ಪತ್ತೆಯಾಗಿದ್ದು, ಆತನಲ್ಲಿದ್ದ ಬಾಕ್ಸ್ ಮತ್ತು ಬ್ಯಾಗ್‌ನಿಂದಲೇ ನಿಗೂಢ ಸ್ಪೋಟವಾಗಿದೆ. 

Tap to resize

Latest Videos

Mangaluru: ಚಲಿಸುತ್ತಿದ್ದ ಆಟೋದಲ್ಲಿ ನಿಗೂಢ ಸ್ಫೋಟ, ಇಬ್ಬರಿಗೆ ಗಾಯ

ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಬರುತ್ತಿದ್ದ ಆಟೋ ಹತ್ತಿದ್ದ ವ್ಯಕ್ತಿಯು, ಘಟನಾ ಸ್ಥಳದ 1 ಕಿ.ಮೀ ದೂರದ ನಾಗುರಿ ಬಳಿ ಆಟೋ ಹತ್ತಿದ್ದ. ಇನ್ನು ಸ್ಪೋಟದ ತೀವ್ರತೆಗೆ ಪ್ರಯಾಣಿಕನ ದೇಹದ ಅರ್ಧ ಭಾಗ ಸುಟ್ಟ ಗಾಯವಾಗಿದ್ದು, ಸದ್ಯ ಗಂಭೀರ ಸ್ಥಿತಿಯಲ್ಲಿ 50% ಸುಟ್ಟ ಗಾಯಗಳೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾನೆ. ಆಟೋದಲ್ಲಿದ್ದ ನಿಗೂಢ ವ್ಯಕ್ತಿ ಪೊಲೀಸರ ತನಿಖೆಗೆ ಸ್ಪಂದಿಸುತ್ತಿಲ್ಲ. ಆತನಿಗೆ ಕುಕ್ಕರ್‌ನಲ್ಲಿ ಸ್ಪೋಟಕ ಇದ್ದ ಬಗ್ಗೆ ಮಾಹಿತಿ ಇತ್ತೆ? ಅಥವಾ ಬೇರೆ ಯಾರಾದರೂ ಕಳುಹಿಸಿ ಕೊಟ್ಟರೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಆಟೋ ಚಾಲಕನಿಗೂ ಗಾಯಗಳಾಗಿರೋ ಹಿನ್ನೆಲೆ ಚಿಕಿತ್ಸೆ ಕೊಡಲಾಗುತ್ತಿದೆ. ಆಟೋದ ಹಿಂಬದಿ ಬೆಂಕಿ ಕಾಣಿಸಿಕೊಂಡ ಬಗ್ಗೆಯಷ್ಟೇ ಚಾಲಕ ಮಾಹಿತಿ ನೀಡಿದ್ದಾನೆ. ಘಟನಾ ಸ್ಥಳದಿಂದ ಆಟೋ ರಿಕ್ಷಾವನ್ನು ಪೊಲೀಸರು ಕಂಕನಾಡಿ ಪೊಲೀಸ್ ಠಾಣೆಗೆ ಶಿಫ್ಟ್ ಮಾಡಿದ್ದು, ನೀಲಿ ಬಣ್ಣದ ಟರ್ಪಾಲ್ ಹಾಕಿ ಮುಚ್ಚಿದ್ದಾರೆ. 

ಮಂಗಳೂರು ಆಟೋ ಸ್ಪೋಟದ ತನಿಖೆಗೆ ಎನ್.ಐ.ಎ ಟೀಂ? ಇಂದು ಮಂಗಳೂರಿಗೆ ಆಗಮಿಸುವ ಸಾಧ್ಯತೆಯಿದ್ದು, ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿ ಘಟನಾ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. ನಿನ್ನೆ ಸಿಎಂ ಬೊಮ್ಮಾಯಿ ಮಂಗಳೂರು ಭೇಟಿ ಬೆನ್ನಲ್ಲೇ ಸ್ಪೋಟವನ್ನ ರಾಜ್ಯ ಗೃಹ ಇಲಾಖೆಯು ಗಂಭೀರವಾಗಿ ಪರಿಗಣಿಸಿದೆ. ಬೆಂಗಳೂರಿನಿಂದ ಮತ್ತಷ್ಟು ಬಾಂಬ್ ತಜ್ಞರ ತಂಡವೂ ಆಗಮಿಸಲಿದ್ದು, ಇಡೀ ಘಟನೆ ಬಗ್ಗೆ ಕೂಲಂಕುಶ ತನಿಖೆಗೆ ಮಂಗಳೂರು ಪೊಲೀಸರು ಇಳಿದಿದ್ದಾರೆ.ಇನ್ನು ಉಗ್ರ ಕೃತ್ಯದ ಆಯಾಮದಲ್ಲಿ ಎನ್.ಐ.ಎ ತನಿಖೆ ನಡೆಸಲಿದೆ. ಆಟೋ ಪ್ರಯಾಣಿಕನ ತನಿಖೆ ವೇಳೆ ಅಸ್ಪಷ್ಟ ಮಾಹಿತಿ ನೀಡಿದ್ದು, ಪೊಲೀಸರ ಎದುರು ಗೊಂದಲಕಾರಿ ಹೇಳಿಕೆಯನ್ನು ಪ್ರಯಾಣಿಕ ನೀಡುತ್ತಿದ್ದಾನೆ.ಒಮ್ಮೆ ತಾನು ಮೈಸೂರಿನಿಂದ ಬಂದಿದ್ದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದು, ಅಣ್ಣ ಬಾಬುರಾವ್‌ಗೆ ಕರೆ ಮಾಡಿ ಅಂತ ಪ್ರಯಾಣಿಕ ನಂಬರ್ ನೀಡಿದ್ದ. 

ಆ ನಂಬರ್‌ಗೆ ಕರೆ ಮಾಡಿದಾಗ ಆತ ತನ್ನ ಸಂಬಂಧಿಕನೇ ಅಲ್ಲ ಅಂದಿದ್ದು, ಆತ ತನ್ನ ರೂಮ್‌ನಲ್ಲಿದ್ದ, ಬೆಂಗಳೂರಿಗೆ ಹೋಗ್ತೇನೆಂದು ಹೋಗಿದ್ದ ಎಂದು ವ್ಯಕ್ತಿ ಹೇಳಿದ್ದ. ಅಲ್ಲದೇ ಆತನ ಬಗ್ಗೆ ಬೇರೆ ಗೊತ್ತಿಲ್ಲ ಅಂದಿದ್ದ ಫೋನ್‌ನಲ್ಲಿ ಮಾತನಾಡಿದ್ದ ವ್ಯಕ್ತಿ. ಆಟೋದಲ್ಲಿದ್ದ ಪ್ರಯಾಣಿಕ ಹಿಂದಿ ಭಾಷೆ ಮಾತನಾಡುತ್ತಿದ್ದ ಬಗ್ಗೆ ಮಾಹಿತಿಯಿದ್ದು, ಆತನ ಐಡಿ ದಾಖಲೆಯಲ್ಲಿ ಪ್ರೇಮ್ ರಾಜ್ ಎಂಬ ಹೆಸರು ಉಲ್ಲೇಖವಾಗಿದೆ. ಇನ್ನು ಆಟೋ ರಿಕ್ಷಾವನ್ನ ಪೊಲೀಸರು ಮತ್ತೆ ನಾಗುರಿ ಬಳಿಯ ಘಟನಾ ಸ್ಥಳಕ್ಕೆ ತಂದಿದ್ದು, ಆಟೋದ ಸುತ್ತ ಟೇಪ್ ಕಟ್ಟಿ ಪೊಲೀಸರು ಭದ್ರಪಡಿಸಿದ್ದಾರೆ. ಸದ್ಯ ಈ ಸ್ಪೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಪ್ರತ್ಯಕ್ಷದರ್ಶಿ ಸುಭಾಶ್ ಶೆಟ್ಟಿ ಹೇಳಿಕೆ ನೀಡಿದ್ದಾರೆ. 

ನಿನ್ನೆ 4:30ರಿಂದ 5 ಗಂಟೆಗೆ ಈ ಘಟನೆ ನಡೆದಿದೆ. ಬಾಂಬ್ ಸ್ಪೋಟದ ಮಾದರಿಯಲ್ಲಿ ಭಾರೀ ಪ್ರಮಾಣದ ಶಬ್ದ ಕೇಳಿ ಬಂದಿತ್ತು. ನಾವು ಬಂದು ನೋಡುವಾಗ ಭಾರೀ ಪ್ರಮಾಣದ ಹೊಗೆ ಆವರಿಸಿತ್ತು. ಆಗ ನಾವು ತಕ್ಷಣ ಅದರೊಳಗೆ ಯಾರೆಲ್ಲಾ ಇದಾರೆ ಅಂತ ನೋಡಿದೆವು. ಆಗ ಒಬ್ಬ ಪ್ರಯಾಣಿಕ ಮತ್ತು ಸ್ಥಳೀಯ ಪರಿಚಯದ ಆಟೋ ಚಾಲಕ ಇದ್ದರು. ಪ್ರಯಾಣಿಕ ಸುಟ್ಟು ಹೋಗಿದ್ದು, ಅವನು ಎರಡು ಅಂಗಿ ಹಾಕಿದ್ದ. ಅದರಲ್ಲಿ ಒಂದು ಅಂಗಿ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಆಟೋ ಚಾಲಕನ ತಲೆ ಮತ್ತು ಬೆನ್ನಿನ ಭಾಗ ಸುಟ್ಟು ಹೋಗಿತ್ತು. ಆ ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ರಿಕ್ಷಾವನ್ನ ಪಕ್ಕಕ್ಕೆ ಸರಿಸಿದೆವು. ಅದರಲ್ಲಿ ಕುಕ್ಕರ್, ವಯರ್ ಹಾಗೂ ಕೆಲ ಬೋಲ್ಟ್ ನಟ್ ಇತ್ತು ಎಂದು ತಿಳಿಸಿದ್ದಾರೆ. ನಾಗುರಿ ಬಳಿಯ ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಆಗಮಿಸಿದ್ದು, ಘಟನಾ ಸ್ಥಳದ ಸುತ್ತಮುತ್ತ ಶ್ವಾನ ದಳದ ಪರಿಶೀಲನೆ ನಡೆಸಲಾಗಿದೆ. 

ಮಂಗಳೂರು: ಬಸ್‌ನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಆರೋಪಿ ವಶಕ್ಕೆ

ಮೆಟಲ್ ಡಿಟೆಕ್ಟರ್ ‌ಮೂಲಕ ಸ್ಪೋಟದ ಸ್ಥಳದ ಸುತ್ತಮುತ್ತ ಪರಿಶೀಲನೆ ನಡೆಸಲಾಗುತ್ತಿದ್ದು, ಯಾವುದಾದರೂ ಲೋಹದ ವಸ್ತುಗಳು ಸಿಗುತ್ತಾ ಅಂತ ಪತ್ತೆ ಕಾರ್ಯವನ್ನು ಮಾಡಿದ್ದಾರೆ. ಅಲ್ಲದೇ ರಸ್ತೆ ಬದಿಯ ಹಳ್ಳ, ಪೊದೆಗಳಲ್ಲಿ ತಂಡದಿಂದ ಹುಡುಕಾಟ ನಡೆಸಲಾಗುತ್ತಿದೆ.  ಮಂಗಳೂರು ಆಟೋ ರಿಕ್ಷಾ ಸ್ಪೋಟದ ಬೆನ್ನಲ್ಲೇ ಪೊಲೀಸರು ಅಲರ್ಟ್ ಆಗಿದ್ದು, ಫಾರೆನ್ಸಿಕ್ ತಂಡದಿಂದ ರಾತ್ರಿ ಪೂರ್ತಿ ಸಾಕ್ಷ್ಯ ಸಂಗ್ರಹಿಸಲಾಗಿದೆ. ಯಾವ ರೀತಿಯ ಸ್ಪೋಟಕ ಎಂಬ ಬಗ್ಗೆ ಫಾರೆನ್ಸಿಕ್ ಟೀಂ ಪರಿಶೀಲನೆ ನಡೆಸಿದ್ದು,  ಸ್ಪೋಟದ ಸ್ಥಳದ ಪುಡಿಗಳು ಹಾಗೂ ಕಣಗಳನ್ನು ತಂಡ ಸಂಗ್ರಹಿಸಿದೆ. ಬಾಂಬ್ ನಿಷ್ಕ್ರಿಯ ದಳದಿಂದಲೂ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದು, ಕುಕ್ಕರ್ ‌ಬಾಂಬ್ ಶಂಕೆ ಹಿನ್ನೆಲೆ ಟೆರರ್ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ. ಸುಧಾರಿತ ಸ್ಪೋಟಕವಾ ಅಥವಾ ಬೇರೆಯಾ ಎಂಬ ಬಗ್ಗೆ ಪರಿಶೀಲನೆ ಮಾಡಿದ್ದು, ರಾಜ್ಯ ಪೊಲೀಸ್ ಉನ್ನತಾಧಿಕಾರಿಗಳ ಸೂಚನೆ ಬೆನ್ನಲ್ಲೇ ಹೈ ಅಲರ್ಟ್ ಘೋಷಿಸಲಾಗಿದೆ. ಮಂಗಳೂರು ನಗರದಾದ್ಯಂತ ಪೊಲೀಸರು ಅಲರ್ಟ್ ಆಗಿದ್ದು, ಇಂದು ಮಂಗಳೂರಿಗೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡುವ ಸಾಧ್ಯತೆಯಿದೆ.

click me!