ಮೃತಪಟ್ಟಿದ್ದಾನೆಂದು ಪೋಷಕರು ಅಂತ್ಯ ಸಂಸ್ಕಾರ ಮಾಡುವ ವೇಳೆ ಬಾಲಕ ಬದುಕಿ ಬಂದ ಅಚ್ಚರಿ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬಸಾಪುರ ಗ್ರಾಮದಲ್ಲಿ ನಡೆದಿದೆ.
ಹುಬ್ಬಳ್ಳಿ (ಆ.18): ಮೃತಪಟ್ಟಿದ್ದಾನೆಂದು ಪೋಷಕರು ಅಂತ್ಯ ಸಂಸ್ಕಾರ ಮಾಡುವ ವೇಳೆ ಬಾಲಕ ಬದುಕಿ ಬಂದ ಅಚ್ಚರಿ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬಸಾಪುರ ಗ್ರಾಮದಲ್ಲಿ ನಡೆದಿದೆ.
ಒಂದೂವರೆ ವರ್ಷದ ಬಸವರಾಜ ಪೂಜಾರಿ ಬದುಕಿ ಅಚ್ಚರಿ ಮೂಡಿಸಿರುವ ಬಾಲಕ. ಕೆಲ ದಿನಗಳ ಹಿಂದೆ ತೀವ್ರ ಅನಾರೋಗ್ಯದಿಂದಾಗಿ ನಗರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕ ಚಿಕಿತ್ಸೆಗೆ ಸ್ಪಂದಿಸದ್ದಿದ್ದರಿಂದ ಮೃತಪಟ್ಟಿದ್ದಾನೆಂದು ಪಾಲಕರು ಆಸ್ಸತ್ರೆಯಿಂದ ಮನೆಗೆ ಕರೆತಂದಿದ್ದರು. ಯಾವುದೇ ಉಸಿರಾಟ ಕ್ರಿಯೆ ಇಲ್ಲದ್ದಕ್ಕೆ ಮೃತಪಟ್ಟಿದೆಯೆಂದು ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದ ಪೋಷಕರು. ಈ ವೇಳೆ ಮಿಸುಕಾಡಿದ ಮಗು ಅಚ್ಚರಿ ಮೂಡಿಸಿತ್ತು. ಮೃತಪಟ್ಟ ಮಗು ಬದುಕಿನೆಂದು ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಮಾನ ಪತನದಲ್ಲೂ ಬದುಕುಳಿದ ಮಕ್ಕಳು, ಅಮೆಜಾನ್ ಕಾಡಿನಲ್ಲಿ 17 ದಿನದ ಬಳಿಕ ಪವಾಡ..!
ವೈದ್ಯರು ಹೇಳೋದೇನು?
ಈ ಘಟನೆ ಸಂಬಂಧ ಕಿಮ್ಸ್ ಆಸ್ಪತ್ರೆ ಅಧೀಕ್ಷ ವೈದ್ಯಾಧಿಕಾರಿ ಅರುಣ್ ಪ್ರತಿಕ್ರಿಯಿಸಿದ್ದು, ಇದೊಂದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ.
ನಮ್ಮ ಆಸ್ಪತ್ರೆಯಿಂದ ಬಿಡುಗಡೆಯಾದಾಗ ಬಾಲಕ ಇನ್ನೂ ಬದುಕೇ ಇದ್ದ.ಬಾಲಕ ಸಾವನ್ನಪ್ಪಿರುವ ಬಗ್ಗೆ ನಾವು ಹೇಳಿಲ್ಲ. ಆದರೆ ಬಾಲಕನ ಮೆದುಳಿನಲ್ಲಿ ನೀರು ತುಂಬಿಕೊಂಡಿತ್ತು. ಹೀಗಾಗಿ ಬಾಲಕ ಚಿಕಿತ್ಸೆ ಸ್ಪಂದಿಸುತ್ತಿರಲಿಲ್ಲ.ಬಾಲಕನ ಪರಿಸ್ಥಿತಿ ವಿವರಣೆ ಮಾಡಿ ಬದುಕುವುದು ಕಷ್ಟ ಅಂತ ಹೇಳಿದ್ದೆವು.ಹೀಗಾಗಿ ಸ್ವ ಇಚ್ಛೆಯಿಂದ ಬಾಲಕನ ಪಾಲಕರು ಆಸ್ಪತ್ರೆ ಕರೆದುಕೊಂಡು ಮನೆಗೆ ಹೋಗಿದ್ದರು.
Real Story: 'ನನ್ನ ಶವ ನನಗೆ ಕಾಣ್ತಿತ್ತು' ಸಾವು ಗೆದ್ದು ಬಂದವರು!
ಕೆಲ ಘಂಟೆಗಳ ಬಳಿಕ ಮತ್ತೆ ವಾಪಸು ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಬಂದಿದ್ದರು.ಆಗ ನಾವು ಅಡ್ಮಿಟ್ ಮಾಡುವಂತೆ ಹೇಳಿದ್ದೇವೆ. ಆದರೆ ಅವರು ಬೇಡ ಅಂತಾ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಕಿಮ್ಸ್ ಆಸ್ಪತ್ರೆಯಿಂದ ಬಾಲಕ ಬಿಡುಗಡೆಯಾದಾಗ ಮೃತಪಟ್ಟಿರಲಿಲ್ಲ ಎಂದು ವೈದ್ಯರ ಸ್ಪಷ್ಟನೆ ನೀಡಿದ್ದಾರೆ. ಒಟ್ಟಿನಲ್ಲಿ ಮಗು ಅದೆಷ್ಟು ಯಮಯಾತನೆ ಅನುಭವಿಸುತ್ತಿತ್ತೋ, ಪಾಲಕರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದೆ.