ಬಂಟ್ವಾಳ ಕೋಟಿ ಮೌಲ್ಯದ ಪಡಿತರ ಅಕ್ಕಿ ನಾಪತ್ತೆ: ತನಿಖೆಗೆ ಶಾಸಕರ ಪತ್ರ!

By Ravi Janekal  |  First Published Aug 18, 2023, 12:28 PM IST

ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಡಿತರ ಚೀಟಿದಾರರಿಗೆ ವಿತರಣೆಯಾಗಲು ಭಾರತೀಯ ಆಹಾರ ಇಲಾಖೆ ನೀಡಿದ ಅಕ್ಕಿಯಲ್ಲಿ  ಕೋಟ್ಯಂತರ ರೂ. ಮೌಲ್ಯದ  ಗೋಲ್ ಮಾಲ್ ನಡೆದಿದ್ದು, ಈ ಬಗ್ಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ‌ನೀಡಿ ತನಿಖೆ ನಡೆಸುತ್ತಿದ್ದಾರೆ.


ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ಆ.18): ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಡಿತರ ಚೀಟಿದಾರರಿಗೆ ವಿತರಣೆಯಾಗಲು ಭಾರತೀಯ ಆಹಾರ ಇಲಾಖೆ ನೀಡಿದ ಅಕ್ಕಿಯಲ್ಲಿ  ಕೋಟ್ಯಂತರ ರೂ. ಮೌಲ್ಯದ  ಗೋಲ್ ಮಾಲ್ ನಡೆದಿದ್ದು, ಈ ಬಗ್ಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ‌ನೀಡಿ ತನಿಖೆ ನಡೆಸುತ್ತಿದ್ದಾರೆ.

Tap to resize

Latest Videos

ಸುಮಾರು 1 ಕೋಟಿ 32 ಲಕ್ಷದ 36 ಸಾವಿರದ 30 ರೂ ಮೌಲ್ಯದ 3892.95.450 ಕ್ವಿಂಟಾಲ್ ಅಕ್ಕಿಯ ಕೊರತೆ ಕಂಡು ಬಂದಿದ್ದು, ಇಲ್ಲಿ ಅವ್ಯವಹಾರ ನಡೆದಿದೆ ಎಂದು ಕರ್ನಾಟಕ ಆಹಾರ ಮತ್ತು ಸರಬರಾಜು ನಿಗಮ(Karnataka Food and Supplies Corporation)ದ ಕಚೇರಿ ವ್ಯವಸ್ಥಾಪಕ ಶರತ್ ಕುಮಾರ್ ಹಾಂಡ ಬಂಟ್ವಾಳ ನಗರ ಪೋಲೀಸ್(Bantwal police station) ಠಾಣೆಯಲ್ಲಿ ದೂರು ನೀಡಿದ್ದಾರೆ. 

BPL ಕಾರ್ಡ್‌ದಾರರಿಗೆ ಮತ್ತೊಂದು ಶಾಕ್: ಸರ್ಕಾರದಿಂದ ಸರ್ವೆ ಆರಂಭ !

ಬಂಟ್ಬಾಳ ತಾಲೂಕಿನ ಬಿ.ಸಿ.ರೋಡಿನ(BC Road) ಕೆಎಸ್‌ಆರ್‌ಟಿಸಿ ಡಿಪೋದ ಮುಂಭಾಗದಲ್ಲಿರುವ ಗೋದಾಮಿನಲ್ಲಿ ದಾಸ್ತಾನು ಇಡಲಾಗಿದ್ದ ಅಕ್ಕಿಯ ಲೆಕ್ಕಾಚಾರದಲ್ಲಿ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ತನಿಖೆಗಾಗಿ ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋದಾಮು ಮೇಲ್ವಿಚಾರಕ ವಿಜಯ್ ಎಂಬಾತನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ವಶಕ್ಕೆ ಪಡೆದಿದ್ದಾರೆ. ಉಳಿದಂತೆ ವಿಜಯ್ ನೀಡಿದ ಮಾಹಿತಿ ಆಧರಿಸಿ ಈ ಪ್ರಕರಣದಲ್ಲಿ ಶಾಮೀಲಾಗಿರುವ ಎಲ್ಲಾ ಆರೋಪಿಗಳನ್ನು ಬಂಧಿಸುವ ಬಗ್ಗೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.
  
ಜಿಲ್ಲಾಧಿಕಾರಿಗೆ ಬಿಜೆಪಿ ಶಾಸಕ ರಾಜೇಶ್ ನಾಯ್ಕ್ ಪತ್ರ!

ಬಂಟ್ವಾಳ ತಾಲೂಕಿನ ಪಡಿತರ ಚೀಟಿ(Ration card)ದಾರರಿಗೆ ವಿತರಿಸಲು ಭಾರತೀಯ ಆಹಾರ ನಿಗಮದಿಂದ ವಿತರಣೆಯಾದ ಅಕ್ಕಿ ಅವ್ಯವಹಾರವಾಗಿರುವ ಬಗ್ಗೆ ಸಾರ್ವಜನಿಕ ದೂರುಗಳು ಕೇಳಿ ಬಂದಿದ್ದು, ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಶಾಸಕ ರಾಜೇಶ್ ನಾಯ್ಕ್(Rajesh naik MLA) ಅವರು ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆದಿದ್ದಾರೆ. 

Vijayapura: ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯ 11.94 ಲಕ್ಷ ಪಡಿತರ ಸದಸ್ಯರಿಗೆ ಹಣ ಸಂದಾಯ!

ಸಂಬಂದಪಟ್ಟ ಬಂಟ್ವಾಳ ತಾಲೂಕಿನ ಪಡಿತರದಾರರಿಗೆ ವಿತರಿಸಲು ಭಾರತೀಯ ಆಹಾರ ನಿಗಮದಿಂದ ಸರಬರಾಜಾದ ಪಡಿತರ ಅಕ್ಕಿಯು ಗೋದಾಮಿನಲ್ಲಿ ದುರುಪಯೋಗ ನಡೆದು ಅವ್ಯವಹಾರ ಆಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಗುಮಾನಿ ಇದೆ. ಈ ಕುರಿತು ನನಗೆ ದೂರುಗಳು ಬಂದಿರುತ್ತವೆ‌. ಆದುದರಿಂದ ತಾವು ತಕ್ಷಣ ಈ ಕುರಿತು ವೈಯಕ್ತಿಕ ಗಮನ ಹರಿಸಿ ಅಕ್ಕಿ ದಾಸ್ತಾನು ಪರಿಶೀಲಿಸಿ ತಪ್ಪಿತಸ್ಥರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

click me!