ಬಗೆದೆಷ್ಟು ಬಯಲಾಗ್ತಿದೆ ಕೆಐಎಡಿಬಿ ಅಧಿಕಾರಿಗಳ ಹಗರಣ, ಹೊಸದಾಗಿ ಬರೊಬ್ಬರಿ 13 ಮಂದಿ ವಿರುದ್ಧ ಎಫ್‌ಐಆರ್

By Suvarna News  |  First Published Aug 18, 2023, 12:54 PM IST

ರೈತರ ಹೆಸರಿನಲ್ಲಿ ಕೋಟ್ಯಂತರ ಲಪಟಾಯಿಸಿದ್ದ ಕೆಐಎಡಿಬಿ ಹಗರಣಗಳ ಸರಣಿ ಮತ್ತೆ ಮುಂದುವರಿದಿದೆ. ಮತ್ತೊಂದು ಹಗರಣ ಬೆಳಕಿಗೆ ಬಂದಿದ್ದು, 13 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.


ವರದಿ : ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್

ಧಾರವಾಡ (ಆ.18): ರೈತರ ಹೆಸರಿನಲ್ಲಿ ಕೋಟ್ಯಂತರ ಲಪಟಾಯಿಸಿದ್ದ ಕೆಐಎಡಿಬಿ ಹಗರಣಗಳ ಸರಣಿ ಮತ್ತೆ ಮುಂದುವರಿದಿದೆ. ಈಗಾಗಲೇ 20 ಕೋಟಿ ಮೊತ್ತದ ಹಗರಣದ ತನಿಖೆ ಸಿಐಡಿಯಲ್ಲಿ ಚಾಲ್ತಿಯಲ್ಲಿರುವಾಗಲೇ ಮತ್ತೊಂದು ಪ್ರಕರಣ ಇಲ್ಲಿನ ವಿದ್ಯಾಗಿರಿ ಠಾಣೆಯಲ್ಲಿ ದಾಖಲಾಗಿದೆ. ಇಟಿಗಟ್ಟಿಯ ಕರೆಪ್ಪ ಪೂಜಾರ ಎಂಬುವರು ತಮ್ಮ ಹೆಸರಿನಲ್ಲಿ ವಂಚನೆ ಮಾಡಲಾಗಿದೆ ಎಂದು ದೂರು ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಕೆಐಎಡಿಬಿಯ ಅಧಿಕಾರಿಗಳು ಶಾಮೀಲಾಗಿದ್ದು, ತಮ್ಮ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ 2.75 ಕೋಟಿ ಮೊತ್ತವನ್ನು ಪರಿಹಾರವಾಗಿ ಮಂಜೂರು ಮಾಡಿಕೊಳ್ಳುವ ಮೂಲಕ ನಷ್ಟ ಉಂಟು ಮಾಡಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದಾರೆ.

Tap to resize

Latest Videos

ಪ್ರಕರಣದಲ್ಲಿ ಒಟ್ಟು 13 ಜನರ ಮೇಲೆ ಕರೆಪ್ಪ ಪೂಜಾರ ದೂರು ದಾಖಲಿಸಿದ ಹಿನ್ನೆಲೆ, ಮೊದಲ ಆರೋಪಿಯಾಗಿ ಕೆ.ಎಲ್‌.ಆರ್‌. ವಿಭಾಗದ ನವೀನಕುಮಾರ್‌ ತಳವಾರ, ಗ್ರೇಡ್‌-ಉಪ ತಹಸೀಲ್ದಾರ್‌ ಪ್ರವೀಣ ಪೂಜಾರ, ವಿ.ಡಿ. ಸಜ್ಜನ, ಶಂಕರ ತಳವಾರ, ಮಹಾದೇವಪ್ಪ ಶಿಂಪಿ, ಹೇಮಚಂದ್ರ ಚಿಂತಾಮಣಿ, ಮುದ್ದಿ ಎಂಬುವರ ವಿರುದ್ಧ ದೂರು ದಾಖಲು ಆಗಿದೆ. ಅದೇ ರೀತಿ ಕೆಐಎಡಿಬಿ ಏಜೆಂಟ್‌ಗಳಾದ ಮೆಹಬೂಬ ಅಶ್ಫಾಕ್‌ ದುಂಡಸಿ, ರವಿ ಕುರಬೆಟ್ಟ, ರೈತನ ಸಂಬಂಧಿಗಳಾದ ತುಕಾರಾಂ ಬೀರಪ್ಪ ಪೂಜಾರ, ಕರಿಯಪ್ಪ ಭೀಮಪ್ಪ ಪೂಜಾರ, ರಾಮಪ್ಪ ಭೀಮಪ್ಪ ಪೂಜಾರ, ಫಕೀರಪ್ಪ ಭೀಮಪ್ಪ ಪೂಜಾರ ವಿರುದ್ಧ ದೂರು ದಾಖಲಾಗಿದೆ.

ಬೀಗ ತೆಗೆಯದ ಭ್ರಷ್ಟ ಅಧಿಕಾರಿ ಮನೆ ಸೀಜ್‌, ಪುತ್ರನ ಕೈಯಲ್ಲಿ ಕೀ ಕೊಟ್ಟು ಕಳುಹಿಸಿದ ಬಳಿಕ

ಈಗಾಗಲೇ .20 ಕೋಟಿ ಹಗರಣದಲ್ಲಿ ಕೆಐಎಡಿಬಿಯ ನಿವೃತ್ತ ಅಧಿಕಾರಿ ವಿ.ಡಿ. ಸಜ್ಜನ, ಮ್ಯಾನೇಜರ್‌ ಶಂಕರ ತಳವಾರ, ಎಜೆಂಟ್‌ ಮೆಹಬೂಬ್‌ ಅಲಿಯಾಸ್‌ ಅಶ್ಪಾಕ್‌ ದುಂಡಸಿಯನ್ನು ಬಂಧಿಸಿ ಕಾರಾಗೃಹಕ್ಕೆ ಕಳಿಸಿದ್ದಾರೆ. ಈಗ ಪ್ರಕರಣದಲ್ಲಿ ಮೂವರನ್ನು ಮಾತ್ರ ಬಂಧಿಸಲಾಗಿದ್ದು, ಇತರ ಬಂಧನ ಆಗುವುದೇ ಕಾಯ್ದು ನೋಡಬೇಕಿದೆ.

ಏನಿದು ಪ್ರಕರಣ : ಧಾರವಾಡ ತಾಲೂಕಿನ ಇಟಿಗಟ್ಟಿ ಗ್ರಾಮದ ರೈತ ಕರೆಪ್ಪ ಪೂಜಾರ ಎಂಬುವರು ಸುಮಾರು 4.ಎಕರೆ 39 ಗುಂಟೆ ಜಮಿನನ್ನ‌ ಕಳೆದ 10 ವರ್ಷದಿಂದ. ಕೆ ಐ ಎ ಡಿ ಬಿ ಇಲಾಖೆ ರೈತರ ಜಮೀನನ್ನ‌ ಭೂ ಸ್ವಾಧಿನ ಪಡಿಸಿಕ್ಕೊಂಡಿರುತ್ತದೆ. ಆದರೆ ಕರೆಪ್ಪ ಪೂಜಾರ ಅವರಿಗೆ ಬರಬೇಕಿದ್ದ ಪರಿಹಾರದ 2 ಕೋಟಿ 75 ಲಕ್ಷ ಪರಿಹಾರದ ಹಣವನ್ನ‌ಅವರ ಸಂಭಂದಿಕರಾದ ತುಕಾರಾಂ ಪೂಜಾರ, ರಾಮಪ್ಪ ಪೂಕಾರ, ಪಕ್ಕಿರಪ್ಪ ಪೂಜಾರ ಈ ಮೂವರ ಹೇಸರಿಗೆ ಬರೊಬ್ಬರಿ ಎರಡು ಕೋಟಿ 75 ಲಕ್ಷ ಹಣವನ್ನ‌ ಕೆ ಐ ಎ ಡಿ ಬಿ ಅಧಿಕಾರಿಗಳು ಅನ್ಯಾಯಕ್ಕೊಳಗಾದ ರೈತ ಕರೆಪ್ಪ ಪೂಜಾರ ಗೆ ಮೋಸ್ ಮಾಡಿ ಕರೆಪ್ಪ ಪೂಜಾರ ಗೆ ಬರಬೇಕಿದ್ದ ಪರಿಹಾರದ ಹಣವನ್ನ ಅಧಿಕಾರಿಗಳು ಈ ಮೂವರಿಗೆ ವರ್ಗಾವಣೆ ಮಾಡಲು ಸಹಕಾರಿ ಮಾಡಿ ಆ ಮೂವರಿಂದ ಕಿಕ್‌ಬ್ಯಾಕ್‌ಪಡೆದುಕ್ಕೊಂಡಿದ್ದಾರೆ. ಜೊತೆಗೆ ಅನ್ಯಾಯಕ್ಕೊಳಗಾದ ರೈತ ಸದ್ಯ ಧಾರವಾಡ ವಿದ್ಯಾಗಿರಿ ಪೋಲಿಸ್ ಠಾಣೆಯಲ್ಲಿ ಬರೊಬ್ಬರಿ 13 ಜನರ ವಿರುದ್ದ ಪ್ರಕರಣವನ್ನ ದಾಖಲು ಮಾಡಿದ್ಧಾರೆ.

ಕೆಐಎಡಿಬಿಯಲ್ಲಿ ದಲ್ಲಾಳಿಗಳ ವಿರುದ್ಧ ಕಠಿಣ ಕ್ರಮ: ಸಚಿವ ಎಂ.ಬಿ.ಪಾಟೀಲ್‌ 

 ಒಟ್ಡು 4 ಎಕರೆ 39 ಗುಂಟೆ ಜಮೀನಿನಲ್ಲಿ ಭಾರಿ ಅವ್ಯವಹಾರ ವಾಗಿದ್ದು ಇನ್ನು ಈ ಕುರಿತು ದೂರು ದಾಖಲಾದ ಬಳಿಕ ಉಪ ತಹಶಿಲ್ದಾರ ಪ್ರವೀಣ ಪೂಜಾರ, ಮತ್ತು‌ ಕೆ‌ಎಲ್ ಆರ್‌ ವಿಬಾಗದ ನವೀನ್ ಕುಮಾರ, ಇನ್ನು ಕೆಐಎಡಿಬಿ ಅಧಿಕಾರಿಗಳು ಶಾಮಿಲಾಗಿ ಸದ್ಯ ರೈತ ಕರೆಪ್ಪ ಪೂಜಾರ ಎಂಬುವರಿಗೆ ಅನ್ಯಾಯವಾಗಿದೆ

ನೊಂದ ರೈತನಿಗೆ ಸಿಗದ ಪರಿಹಾರ ಇಂತಹ ಅಧಿಕಾರಿಗಳ ಮೆಲೆ‌ ಕ್ರಮ‌ ಆಗುತ್ತಾ?
ಜಿಲ್ಲಾಧಿಕಾರಿಗಳೆ ಇಂತಹ ಅಧಿಕಾರಿಗಳ ಮೆಲೆ‌ ಎನ್ ಕ್ರಮ ಕೈ ಗೊಳ್ತಿರಾ? ಅಧಿಕಾರಿಗಳ ಮೆಲೆ‌ ಕ್ರಮ ಆಗಬೇಕು, ನಮಗೆ ಬರಬೇಕಿದ್ದ ಎರಡು ಕೋಟಿ, 75 ಲಕ್ಷ ಪರಿಹಾರದ ಹಣ ನೀಡಬೇಕು ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಮುಂದೆ ಧರ್ಮರಾಜ್ ಪೂಜಾರ  ಅಳಲು ತೋಡಿಕೊಂಡಿದ್ದಾರೆ.

click me!