* ಕೆಲಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತ
* ಕೃಷಿಗೂ ಅಪಾರ ನಷ್ಟ
* ಒಟ್ಟಾರೆ 9 ಮನೆಗಳು ಕುಸಿದಿದ್ದು, 20ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿ
ಹುಬ್ಬಳ್ಳಿ(ಏ.30): ರಾಜ್ಯದ ಕೆಲಭಾಗಗಳಲ್ಲಿ ಅಕಾಲಿಕ ಮಳೆ(Untimely Rain) ಮುಂದುವರಿದಿದ್ದು ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಯ ಕೆಲಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತವಾಗುವುದರೊಂದಿಗೆ ಕೃಷಿಗೂ(Agriculture) ಅಪಾರ ನಷ್ಟವಾಗಿದೆ. ಒಟ್ಟಾರೆ 9 ಮನೆಗಳು ಕುಸಿದಿದ್ದು, 20ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ವಿಜಯನಗರ(Vijayanagara) ಜಿಲ್ಲೆಯ ಹೂವಿನ ಹಡಗಲಿ, ಹಗರಿಬೊಮ್ಮನಹಳ್ಳಿ, ಕೊಪ್ಪಳ ಜಿಲ್ಲೆಯ ಕಾರಟಗಿ, ಕನಕಗಿರಿ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಭತ್ತ ಮತ್ತು ತೋಟಗಾರಿಕಾ ಬೆಳೆಗಳಿಗೆ ತೀವ್ರ ಹಾನಿ ಸಂಭವಿಸಿದೆ. ಹೂವಿನಹಡಗಲಿ ಮತ್ತು ಹಿರೇಹಡಗಲಿಗಳಲ್ಲಿ ಭತ್ತ, ಬಾಳೆ, ದಾಳಿಂಬೆ ಹಾಗೂ ಪಪ್ಪಾಯಿ ಬೆಳೆಗಳು ಗಾಳಿಮಳೆಗೆ ನಾಶವಾಗಿವೆ. 9 ಮನೆಗಳು ಕುಸಿದಿದ್ದು 50ಕ್ಕೂ ಹೆಚ್ಚು ಗಿಡ ಮರಗಳು ನೆಲಕ್ಕುರಳಿವೆ. ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ 100ಕ್ಕೂ ಹೆಚ್ಚು ವಿದ್ಯುತ್ ಕಂಬಗಳು, 10ಕ್ಕೂ ಹೆಚ್ಚು ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿವೆ.
ಅಕಾಲಿಕ ಮಳೆಗೆ ನಲುಗಿದ ಬೆಳಗಾವಿ: ಸಂಕಷ್ಟದಲ್ಲಿ ಅನ್ನದಾತ
ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಆಲಿಕಲ್ಲು ಮಳೆ ಗಾಳಿಗೆ 40ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಕಟಾವಿನ ಹಂತಕ್ಕೆ ಬಂದಿರುವ ದಾಳಿಂಬೆ, ಮಾವು ಬೆಳೆ ನೆಲಕ್ಕಪ್ಪಳಿಸಿವೆ. ಇದರೊಂದಿಗೆ ಮೈಸೂರು ನಗರ ಸೇರಿದಂತೆ ಜಿಲ್ಲೆಯ ಕೆಲವೆಡೆ ಶುಕ್ರವಾರ ರಾತ್ರಿ ಗುಡುಗು ಸಹಿತ ಭಾರಿ ಮಳೆ ಬಿದ್ದಿದೆ. ಕೊಡಗಿನ ಕೆಲವೆಡೆಯೂ ತುಂತುರು ಮಳೆಯಾಗಿದೆ.
ಆಲಿಕಲ್ಲು ಮಳೆಗೆ ದ್ರಾಕ್ಷಿಬೆಳೆಗೆ ಹಾನಿ
ತಿಕೋಟಾ: ತಿಕೋಟಾ(Tikota) ತಾಲ್ಲೂಕಿನ ಘೋಣಸಗಿ ಕಳ್ಳಕವಟಗಿ, ಸೋಮದೇವರಹಟ್ಟಿ, ಹೊನವಾಡ ಗ್ರಾಮಗಳಲ್ಲಿ ಗುರುವಾರ ಮಧ್ಯಾಹ್ನ ಸುರಿದ ಅಕಾಲಿಕ ಮಳೆಗೆ ಕಟಾವು ಮಾಡಿದ ದ್ರಾಕ್ಷಿ ಬೆಳೆಯ(Grape Crop) ಚಿಗುರೊಡೆಯುತ್ತಿರುವ ಎಳೆಯ ಕಡ್ಡಿಗಳು ಅಕಾಲಿಕವಾಗಿ ಸುರಿದ ಅಲಿಕಲ್ಲು ಮಳೆಯ ಹೊಡತಕ್ಕೆ ಮುರಿದು ಬಿದ್ದಿದೆ ಇಇದರಿಂದ ದ್ರಾಕ್ಷಿ ಬೆಳೆಗಾರನಿಗೆ ವರ್ಷದ ಆರಂಭದಲ್ಲಿ ಸಂಕಷ್ಟಪ್ರಾರಂಭವಾಗಿದೆ,
ಕರ್ನಾಟಕದ 11 ಜಿಲ್ಲೆಗಳಲ್ಲಿ ಭಾರೀ ಮಳೆ: ಸಿಡಿಲು ಬಡಿದು ಐವರು ಸಾವು
ಕೃಷಿಕರು ಹೇಳುವುದಾದರೆ ಚಿಗುರೊಡೆಯುವ ದ್ರಾಕ್ಷಿ ಕಡ್ಡಿಗೆ ಅಲಿಕಲ್ಲು ಮಳೆ ಬಡಿದು ಹಾಳಾದಾಗ, ಮತ್ತೋಂದು ಕಡ್ಡಿ ಚಿಗೊರೊಡೆದಾಗ ಕಡ್ಡಿಗೆ ಪೆಟ್ಟು ಬಿದ್ದಿದರಿಂದ ಲವಣಾಂಶಗಳು ಸರಿಯಾಗಿ ಮುಟ್ಟದೇ ಹೊಸ ಕಡ್ಡಿಗೆ ಶಕ್ತಿ ಇಲ್ಲದಂತಾಗಿ ಮುಂದಿನ ಇಳುವರಿ ಕಮ್ಮಿಯಾಗುತ್ತದೆ. ಮತ್ತೊಂದು ಕಡ್ಡಿ ಚಿಗಯರೊಡೆಯಲು ಸಮಯ ಬೇಕಾಗಿರುವದರಿಂದ ಮುಂದಿನ ದಿನಗಳಲ್ಲಿ ಹೂವು ಬಿಡಲು ಉತ್ತಮ ವಾತಾವರಣ ಇಲ್ಲದಂತಾಗುತ್ತದೆ,
ವಿಜಯಪುರ(Vijayapura) ಜಿಲ್ಲೆಯೂ ಅತೀ ಹೆಚ್ಚು ದ್ರಾಕ್ಷಿ ಬೆಳೆಯವು ಕ್ಷೇತ್ರವಾಗಿದೆ. ಎರಡು ಮೂರು ವರ್ಷಗಳಲ್ಲಿ ದ್ರಾಕ್ಷಿ ಕ್ಷೇತ್ರ ತಿಕೋಟಾ ತಾಲ್ಲೂಕಿನ ಹೆಚ್ಚುವಾಗಿದೆ. ಕ್ಷೇತ್ರದ ಶಾಸಕ ಎಂ.ಬಿ.ಪಾಟೀಲರು(MB Patil) ಮಾಡಿದ ನೀರಾವರಿ ಯೋಜಿನೆಗಳು ಮುಖಂತರ ದ್ರಾಕ್ಷಿ ಕ್ಷೇತ್ರ ಹೆಚ್ಚುವಾಗಿದೆ. ಆದರೆ, ಒಂದಿಲ್ಲೊಂದು ಕಾರಣಕ್ಕೆ ದ್ರಾಕ್ಷಿಬೆಳೆಗೆ ಹಾನಿಯಾಗಿ ರೈತರು(Farmers) ಮೇಲಿಂದ ಮೇಲೆ ತೊಂದರೆಗೆ ಸಿಲುಕುತ್ತಿದ್ದಾರೆ.