Covid 19 Variant: ಕೊಡಗಿನ 32 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್!

By Suvarna News  |  First Published Dec 25, 2021, 1:24 PM IST

*ಕೊಡಗಿನ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಕೊರೊನಾ ಪಾಸಿಟಿವ್
*ಜ್ಞಾನ ಗಂಗಾ ಶಾಲೆಯ 26 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್
*ಕುಶಾಲನಗರ ತಾಲೂಕಿನ ಅತ್ತೂರು ವಿನಲ್ಲಿನ  ವಸತಿ ಶಾಲೆ
*ಪೊನ್ನಂಪೇಟೆಯ ಜೂನಿಯರ್ ಕಾಲೇಜ್‌ನ 6 ವಿದ್ಯಾರ್ಥಿಗಳಿಗೆ ಕೊರೋನಾ


ಕೊಡಗು(ಡಿ. 25): ಅತಿ ಅಪಾಯಕಾರಿ ಎಂದು ಬಣ್ಣಿಸಲಾಗಿರುವ ಒಮಿಕ್ರೋನ್‌ (Omicron)  ಕೋವಿಡ್‌ (Coronavirus) ರೂಪಾಂತರಿ ತಳಿ ಭಾರತದಲ್ಲಿ ಸ್ಫೋಟಗೊಳ್ಳುತ್ತಿದೆ. ಈ ಬೆನ್ನಲ್ಲೆ ಹಲವು ರಾಜ್ಯಗಳು ಈಗಾಗಲೇ ಕಠಿಣ ನಿರ್ಬಂಧಗಳನ್ನು ಹೇರಿವೆ. ರಾಜ್ಯದಲ್ಲಿ(Karnataka) ಕೋವಿಡ್‌-19 ಪ್ರಕರಣಗಳ ಹಬ್ಬುವಿಕೆ ನಿಯಂತ್ರಣದಲ್ಲಿದೆ. ಆದರೂ ಸರ್ಕಾರ ಗರಿಷ್ಠ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ರಾಜ್ಯ ಕೋವಿಡ್‌ ವಾರ್‌ ರೂಮ್‌ನ ಮುಖ್ಯಸ್ಥ ಮುನೀಶ್‌ ಮೌದ್ಗಿಲ್‌(Munish Moudgil) ಮಾಹಿತಿ ನೀಡಿದ್ದಾರೆ. 

ಕೊರೊನಾ ಆತಂಕ ತಗ್ಗಿದ ಹಿನ್ನೆಲೆಯಲ್ಲೇ ರಾಜ್ಯದ್ಯಂತ ಶಾಲಾ ಕಾಲೇಜುಗಳನ್ನು ಆರಂಭಿಸಲಾಗಿತ್ತು. ಈ ಬೆನ್ನಲ್ಲೇ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಸರ್ಕಾರ ಮತ್ತು ಸ್ಥಳಿಯ ಆಡಳಿತ ಹಲವು ಕ್ರಮಗಳನ್ನು ಕೈಗೊಂಡಿದೆ. ಆದಾಗ್ಯೂ ರಾಜ್ಯದ ವಿವಧ ಭಾಗಗಳಲ್ಲಿ ಶಾಲಾ ಮಕ್ಕಳು ಹಾಗೂ ಶಿಕ್ಷಕರಲ್ಲಿ ಸೋಂಕು ಕಾಣಿಸಿಕೊಂಡಿದೆ.  ಈಗ ಕೊಡಗಿನ ವಿದ್ಯಾರ್ಥಿಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿವೆ.  ಕೊಡಗಿನ ಜ್ಞಾನ ಗಂಗಾ ಶಾಲೆಯ 26 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಕುಶಾಲನಗರ ತಾಲೂಕಿನ ಅತ್ತೂರುವಿನಲ್ಲಿನ  ವಸತಿ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಪಾಸಿಟಿವ್‌ ಬಂದಿದೆ. ಜತೆಗೆ ಪೊನ್ನಂಪೇಟೆಯ ಜೂನಿಯರ್ ಕಾಲೇಜಿನಲ್ಲಿ 6 ವಿದ್ಯಾರ್ಥಿಗಳಿಗೆ ಕೊರೊನಾ ವಕ್ಕರಿಸಿದೆ.

Tap to resize

Latest Videos

ಎಂಟರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಬೆನ್ನಲ್ಲೇ ಶಾಲೆಗೆ ಸ್ಯಾನಿಟೈಸ್ ಮಾಡಿ ಎಲ್ಲಾ ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ. ಶಿಕ್ಷಣ ಸಂಸ್ಥೆಗಳಿಗೆ ವೈದ್ಯಾಧಿಕಾರಿಗಳ ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. 30ಕ್ಕೂ ಅಧಿಕ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಬೆನ್ನಲ್ಲೆ ತಾಲೂಕಿನ ಜನರಲ್ಲಿ ಆತಂಕ ಮನೆ ಮಾಡಿದೆ.

 ಬೆಂಗಳೂರಿನಲ್ಲಿ ಮೂರು ತಿಂಗಳ ಬಳಿಕ 250+ ಕೊರೋನಾ ಕೇಸ್‌

ಬೆಂಗಳೂರು(Bengaluru) ನಗರದಲ್ಲಿ ಬರೋಬ್ಬರಿ ಮೂರು ತಿಂಗಳ ಬಳಿಕ ಅತೀ ಹೆಚ್ಚು ಕೊರೋನಾ(Coronavirus) ಪ್ರಕರಣಗಳು ವರದಿಯಾಗಿವೆ. ಶುಕ್ರವಾರ ಒಂದೇ ದಿನ 254 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.

ಸೆ.30ರಂದು ವರದಿಯಾಗಿದ್ದ 291 ಕೊರೋನಾ ಪ್ರಕರಣಗಳು ಈವರೆಗಿನ ಅತಿಹೆಚ್ಚು ಸೋಂಕಿತ ಪ್ರಕರಣವಾಗಿತ್ತು. ಆ ನಂತರ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಾ ಸಾಗಿ ಅ.18ರಂದು ಕೇವಲ 83 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದವು. ಕಳೆದ ಮೂರು ತಿಂಗಳಲ್ಲಿ 240ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರಲಿಲ್ಲ.

ನಗರದಲ್ಲಿ ಸದ್ಯ 5866 ಸಕ್ರಿಯ ಸೋಂಕಿತ ಪ್ರಕರಣಗಳು

ಹೊಸ ಪ್ರಕರಣಗಳ ಪತ್ತೆಯಿಂದ ಈವರೆಗಿನ ಸೋಂಕಿತರ ಸಂಖ್ಯೆ 12,61,156ಕ್ಕೆ ಏರಿಕೆಯಾಗಿದೆ. 128 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಬಿಡುಗಡೆಯಾದವರ ಸಂಖ್ಯೆ 12,38,908ಕ್ಕೆ ಏರಿಕೆಯಾಗಿದೆ. ಒಟ್ಟಮೃತರ ಸಂಖ್ಯೆ 16,381ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಸದ್ಯ 5866 ಸಕ್ರಿಯ ಸೋಂಕಿತ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ವರದಿ ಮಾಹಿತಿ ನೀಡಿದೆ.

ಕಳೆದ ಹತ್ತು ದಿನಗಳಲ್ಲಿ ಪಾಲಿಕೆ ವ್ಯಾಪ್ತಿಯ 10 ವಾರ್ಡ್‌ಗಳಲ್ಲಿ ನಿತ್ಯ ಸರಾಸರಿ 3ಕ್ಕಿಂತ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಬೆಳ್ಳಂದೂರು ವಾರ್ಡ್‌ನಲ್ಲಿ 9, ದೊಡ್ಡನೆಕ್ಕುಂದಿ, ಬೇಗೂರು, ಸಿಂಗಸಂದ್ರ, ಗೊಟ್ಟಿಗೆರೆ, ಹಗದೂರು, ರಾಜರಾಜೇಶ್ವರಿನಗರ, ಎಚ್‌ಎಸ್‌ಆರ್‌ ಲೇಔಟ್‌, ಉತ್ತರಹಳ್ಳಿ ವಾರ್ಡ್‌ಗಳಲ್ಲಿ ತಲಾ 4, ಕೋರಮಂಗಲ ವಾರ್ಡ್‌ನಲ್ಲಿ ತಲಾ 3 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ಇದನ್ನೂ ಓದಿ:

1) Omicron Threat: ಸಕ್ರಿಯ ಕೇಸ್‌: ಬೆಂಗ್ಳೂರು ದೇಶಕ್ಕೇ ನಂ.1..!

2) Omicron In India: ರೂಪಾಂತರಿ ಸ್ಫೋಟ ಒಂದೇ ದಿನ  122 ಕೇಸ್‌..ಫೆಬ್ರವರಿಗೆ ಘೋರ!

3) Omicron Threat: 'ರಾಜ್ಯದಲ್ಲಿ ಕೊರೋನಾ ನಿಯಂತ್ರಣ'

click me!