Anti Conversion Bill: ಬೊಮ್ಮಾಯಿ ಒಬ್ಬ ಕೋಮುವಾದಿ ಸಿಎಂ: ನಟ ಚೇತನ್‌

By Suvarna News  |  First Published Dec 25, 2021, 12:56 PM IST

*   ಹೆದರಿಸಿ ಬೆದರಿಸಿ ಕಾಯ್ದೆ ತರುವುದು ಸರಿಯಲ್ಲ
*  ಶಕ್ತಿ ಪ್ರದರ್ಶನದಿಂದ ಬಂದ್ ಯಶಸ್ವಿ ಆಗೋದಿಲ್ಲ
*  ಎಂಇಎಸ್ ಹೋರಾಟವನ್ನು ನೆಗ್ಲೇಟ್ ಮಾಡಬೇಕು


ದಾವಣಗೆರೆ(ಡಿ.25):  ಶಾಲಾ ಮಕ್ಕಳಿಗೆ ಮೊಟ್ಟೆ(Eggs) ನೀಡುವ ಸರ್ಕಾರದ ನಿರ್ಧಾರಕ್ಕೆ ವಿರೋಧಿಸುವ ಸ್ವಾಮೀಜಿಗಳು ಬಸವತತ್ವದವರು ಅಲ್ಲ. ಕೆಲ ಸ್ವಾಮೀಜಿಗಳು(Swamjis) ಸಸ್ಯಹಾರಿಗಳಿಗೆ ಪ್ರತ್ಯೇಕ ಶಾಲೆಗಳನ್ನ ಕೇಳುತ್ತೀರುವುದು ಬೇಸರದ ವಿಚಾರವಾಗಿದೆ ಅಂತ ಸ್ಯಾಂಡಲ್‌ವುಡ್‌ ನಟ ಚೇತನ್(Chetan Kumar) ಹೇಳಿದ್ದಾರೆ. 

ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಮೊಟ್ಟೆ ತಿನ್ನುವವರ ಶಾಲೆ, ಮಟನ್(Mutton) ತಿನ್ನುವರ ಶಾಲೆ ಹೀಗೆ ಪ್ರತ್ಯೇಕ ಶಾಲೆಗಳಾಗಿ(Schools) ಭಾಗ ಮಾಡುವುದೇ ಸ್ವಾಮೀಜಿಗಳ ಉದ್ದೇಶವೇ?. ಅನುಭವ ಮಂಟಪದಲ್ಲಿ ಸಹ ಮಾಂಸಾಹಾರಿಗಳು ಇದ್ರು, ಇದನ್ನ ಸ್ವಾಮೀಜಿಗಳು ಅರಿತುಕೊಳ್ಳಬೇಕು. ಇಡಿ ರಾಜ್ಯವೇ ದೇಶಕ್ಕೆ ಮಾದರಿ ಆಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಅಂತ ತಿಳಿಸಿದ್ದಾರೆ.

Latest Videos

undefined

"

ಗಂಜಿ ಆಸೆಗೆ ಹೇಳಿಕೆ ಕೊಡೋರನ್ನು ಬಂಧಿಸಿ : ನಟ ಚೇತನ್ ವಿರುದ್ಧ ಸಚಿವ ಹೆಬ್ಬಾರ್ ಕಿಡಿ

ದೇವದಾಸಿಗಳು ಅಸ್ಪೃಶ್ಯರು ಅತ್ಯಂತ ಹೀನಾಯ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಇದನ್ನ ನೋಡುವಷ್ಟು ತಾಳ್ಮೆ ರಾಜಕಾರಣಿಗಳಿಗೆ(Politicians) ಇಲ್ಲ. ಬಸವರಾಜ ಬೊಮ್ಮಾಯಿ(Basavaraj Bommai) ಒಬ್ಬ ಕೋಮುವಾದಿ(Communalist Chief Minister) ಸಿಎಂ ಆಗಿದ್ದಾರೆ. ಯಾವ ಸಿಎಂ ಕೂಡ ಇಷ್ಟು ಕೋಮುವಾದಿಗಳು ಇರಲಿಲ್ಲ, ಎಲ್ಲರಿಗಿಂತ ಇವರು ಹೆಚ್ಚಿದ್ದಾರೆ. ಅವರ ತಂದೆ(ಎಸ್‌.ಆರ್‌. ಬೊಮ್ಮಾಯಿ) ಒಳ್ಳೆಯ ಪ್ರಗತಿಪರ ಮುಖ್ಯಮಂತ್ರಿ ಆಗಿದ್ದರು ಅಂತ ಹೇಳಿದ್ದಾರೆ. 

ಹೆದರಿಸಿ ಬೆದರಿಸಿ ಕಾಯ್ದೆ ತರುವುದು ಸರಿಯಲ್ಲ

ಮತಾಂತರ ನಿಷೇಧ ಕಾಯ್ದೆಗೆ(Anti Conversion Bill) ಸಂಬಂಧಿಸಿದಂತೆ ಮಾತನಾಡಿದ ನಟ ಚೇತನ್‌ ಅವರು, ಇದೊಂದು ಸಂವಿಧಾನದ(Constitution) ವಿರೋಧ ನೀತಿಯಾಗಿದೆ. ಅಂಬೇಡ್ಕರ್(Dr BR Ambedkar), ಬಸವಣ್ಣನವರು(Basavanna) ಕೂಡ ಅವರಿಗೆ ಬೇಕಾದ ಧರ್ಮ(Religion) ಸ್ಥಾಪನೆ ಮಾಡಿದ್ದಾರೆ. ಜನರು ಅವರಿಗೆ ಬೇಕಾದ ಧರ್ಮಕ್ಕೆ ಸೇರಬಹುದು ಎನ್ನುವುದು ಸಂವಿಧಾನದಲ್ಲಿದೆ. ಬಲವಂತವಾಗಿ ಮತಾಂತರ ಮಾಡಿದರೆ ಅದಕ್ಕೆ ಬೇಕಾದ್ರೆ ಕ್ರಮ ಕೈಗೊಳ್ಳಲಿ. ಜನರನ್ನ ಹೆದರಿಸಿ ಬೆದರಿಸಿ ಕಾಯ್ದೆ ತರುವುದು ಸರಿಯಲ್ಲ. ಅಲ್ಪಸಂಖ್ಯಾತರು, ಕ್ರಿಶ್ಚಿಯನ್‌ರ ಮೇಲೆ ದಬ್ಬಾಳಿಕೆ ಮಾಡಿ ಕಾಯ್ದೆ ತರುವಂತಾಗಿದೆ ಅಂತ ರಾಜ್ಯ ಸರ್ಕಾರದ(BJP Government) ವಿರುದ್ಧ ಕಿಡಿ ಕಾರಿದ್ದಾರೆ. 

ಇನ್ನು ಕರ್ನಾಟಕ ಬಂದ್(Karnataka Bandh) ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಚೇತನ್, ಕನ್ನಡ ಚಿತ್ರರಂಗದಲ್ಲಿ(Sandalwood) ಎಲ್ಲರೂ ಬಂದ್‌ಗೆ ಬೆಂಬಲ ಕೊಡ್ತಾರೇ ಅಂತ ಹೇಳಲಾಗುವುದಿಲ್ಲ. ಕೆಲವರು ಕೊಡಬಹುದು ಕೆಲವರು ಕೊಡದೇ ಇರಬಹುದು. ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಬೇಕು. ಬಂದ್ ಹೆಸರಿನಲ್ಲಿ ಶಕ್ತಿ ಪ್ರದರ್ಶನದಿಂದ ಬಂದ್ ಯಶಸ್ಸು ಆಗೋದಿಲ್ಲ. ಎಲ್ಲಾ ಸಂಘಟನೆಗಳು ಯೋಚನೆ ಮಾಡಿ ಒಳ್ಳೆಯದು ಆಗುತ್ತೆ ಎಂದರೆ ಬಂದ್ ಮಾಡಲಿ. ಎಲ್ಲಾ ಸಂಘಟನೆಗಳ ಒಕ್ಕೂಟ ಆಗಬೇಕೆ ಹೊರತು ಕೆಲ ವ್ಯಕ್ತಿಗಳ ಶಕ್ತಿ ಪ್ರದರ್ಶನ ಆಗಬಾರದು. ಅದು ಬಂದ್‌ಗೆ ಒಳ್ಳೆಯದಲ್ಲ, ಕರ್ನಾಟಕಕ್ಕೂ(Karnataka) ಕೂಡ ಒಳ್ಳೆಯ ಹೆಸರು ಸಿಗೋದಿಲ್ಲ ಅಂತ ತಿಳಿಸಿದ್ದಾರೆ. 

ಎಂಇಎಸ್‌ಗೆ(MES) ಹೋರಾಟಕ್ಕೆ ಹಕ್ಕು ಇದ್ದರೂ ಕೂಡ ಅವರದು ಯಾವುದೇ ಅರ್ಥಪೂರ್ಣ ಹೋರಾಟವಲ್ಲ. ಎಂಇಎಸ್ ಹೋರಾಟವನ್ನು ನಾವು ನೆಗ್ಲೇಟ್ ಮಾಡಬೇಕು. ಅವರಿಗೆ ಪ್ರಾಮುಖ್ಯತೆ ಕೊಟ್ಟಷ್ಟು, ನಾವು ಚಾಲ್ತಿಯಲ್ಲಿ ಇರಬೇಕು ಎನ್ನುವ ವಿಚಾರ ಬರುತ್ತದೆ ಅವರಿಗೆ. ಅವರನ್ನು ನೆಗ್ಲೇಟ್ ಮಾಡಿ ನಮ್ಮ ಕರ್ನಾಟಕದ ಅಭಿವೃದ್ಧಿಗೆ ಚಿಂತಿಸಬೇಕು ಅಂತ ಸಲಹೆ ನೀಡಿದ್ದಾರೆ. 

ಕೊರೋನಾ ವೈರಸ್‌: ಕಿಚ್ಚನಿಗೇ ಬುದ್ಧಿ ಹೇಳಿದ 'ಅ ದಿನಗಳು' ಚೇತನ್?

ನಟ ಚೇತನ್‌ರಿಂದ 1 ರು. ಮಾನನಷ್ಟ ಕೇಸ್‌: ಸಚಿವ ಹೆಬ್ಬಾರ್‌ಗೆ ನೋಟಿಸ್‌

ಬೆಂಗಳೂರು: ತಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ(Social Media) ಅಪಮಾನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ನಟ ಚೇತನ್‌ ಕುಮಾರ್‌ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆ ಸಂಬಂಧ ಕಾರ್ಮಿಕ ಸಚಿವ ಶಿವರಾಂ(Shivaram Hebbar) ಹೆಬ್ಬಾರ್‌ ಅವರಿಗೆ ನಗರದ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ(Court) ನೋಟಿಸ್‌ ಜಾರಿ ಮಾಡಿದ ಘಟನೆ ಜೂ.27 ರಂದು ನಡೆದಿತ್ತು.

ಚೇತನ್‌ ದಾಖಲಿಸಿರುವ 1 ರು.ಗಳ ಮಾನನಷ್ಟ(Defamation) ಮೊಕದ್ದಮೆ ವಿಚಾರಣೆ ನಡೆಸಿದ ನಗರದ 9ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಪಿ.ಪ್ರೀತಿ ಅವರು ನೋಟಿಸ್‌ ಜಾರಿ ಮಾಡಿದ್ದು, ಪ್ರಕರಣ ಸಂಬಂಧ ಜುಲೈ 14ರ ಒಳಗಾಗಿ ತಮ್ಮ ಹೇಳಿಕೆ ದಾಖಲಿಸಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿದ್ದಾರೆ. ಬ್ರಾಹ್ಮಣಕ್ಕೆ ಸಂಬಂಧಿಸಿದಂತೆ ಪೆರಿಯಾರ್‌ ಮತ್ತು ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಅಭಿಪ್ರಾಯಗಳನ್ನು ಉಲ್ಲೇಖಿಸಿ ಚೇತನ್‌ ಮಾಡಿದ್ದ ಟ್ವೀಟ್‌ಗೆ ಹೆಬ್ಬಾರ್‌ ಅಸಮಾಧಾನ ವ್ಯಕ್ತಪಡಿಸಿ, ಅವರ ಬಂಧನಕ್ಕೆ ಆಗ್ರಹಿಸಿದ್ದರು.
 

click me!