* ಕೋವಿಡ್ ಸೋಂಕಿನ ಪ್ರಮಾಣವು ಸಾರ್ವಕಾಲಿಕ ಕನಿಷ್ಠ
* ಕಳೆದ ಆರು ದಿನಗಳಿಂದ ಎರಡಂಕಿ ದಾಟಿದ ಕೋವಿಡ್ ಪ್ರಕರಣ
* ಪಾಸಿಟಿವಿಟಿ ದರ ಶೇ.0.12ಕ್ಕೆ ಕುಸಿತ
ಬೆಂಗಳೂರು(ಮಾ.31): ರಾಜ್ಯದಲ್ಲಿ ಬುಧವಾರ ಕೇವಲ 35 ಜನರಲ್ಲಿ ಕೋವಿಡ್(Covid-19) ಕೇಸು ಪತ್ತೆಯಾಗಿದ್ದು, ಓರ್ವ ಸೋಂಕಿತ ಸಾವನ್ನಪ್ಪಿದ್ದಾರೆ. ಕೋವಿಡ್ ಸೋಂಕಿನ ಪ್ರಮಾಣವು ಸಾರ್ವಕಾಲಿಕ ಕನಿಷ್ಠವಾಗಿದೆ. ರಾಜ್ಯದಲ್ಲಿ ಕೋವಿಡ್ ಅಬ್ಬರದ ಆರಂಭದಲ್ಲಿ ಅಂದರೆ 2020ರ ಮೇ 14ಕ್ಕೆ 28 ಪ್ರಕರಣ ವರದಿಯಾದ ಬಳಿಕದ ಅತ್ಯಂತ ಕಡಿಮೆ ಪ್ರಕರಣ ಪತ್ತೆಯಾಗಿದೆ. ಕಳೆದ ಆರು ದಿನಗಳಿಂದ ರಾಜ್ಯದ ದೈನಂದಿನ ಕೋವಿಡ್ ಪ್ರಕರಣ ಎರಡಂಕಿ ದಾಟಿಲ್ಲ. 27,577 ಕೋವಿಡ್ ಪರೀಕ್ಷೆ ನಡೆದಿದ್ದು ಪಾಸಿಟಿವಿಟಿ ದರ(Positivity Rate) ಶೇ.0.12ಕ್ಕೆ ಕುಸಿದಿದೆ. ಇದು ಸಾರ್ವಕಾಲಿನ ಕನಿಷ್ಠ ಪಾಸಿಟಿವಿಟಿ ದರ.
ಬೆಂಗಳೂರು(Bengaluru) ನಗರದಲ್ಲಿ 25, ರಾಮನಗರ, ಕೋಲಾರ ತಲಾ 2, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಕ್ಷಿಣ ಕನ್ನಡ, ಕಲಬುರಗಿ ಮತ್ತು ಉಡುಪಿಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.
ಬೆಂಗಳೂರು ಗ್ರಾಮಾಂತರದಲ್ಲಿ ರಾಜ್ಯದ ಏಕೈಕ ಸಾವು(Death) ದಾಖಲಾಗಿದೆ. ಕಳೆದ ಐದು ದಿನದಿಂದ ರಾಜ್ಯದಲ್ಲಿ ಪ್ರತಿದಿನ ಒಂದು ಸಾವು ಮಾತ್ರ ವರದಿ ಆಗುತ್ತಿದೆ. 105 ಮಂದಿ ಚೇತರಿಸಿಕೊಂಡಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 1,585 ಇದೆ. ಬೀದರ್, ದಾವಣಗೆರೆ, ಧಾರವಾಡ, ಗದಗ, ಹಾಸನ, ಹಾವೇರಿ, ಕೊಪ್ಪಳ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳಿಲ್ಲ. ರಾಜ್ಯದಲ್ಲಿ ಈವರೆಗೆ 39.45 ಲಕ್ಷ ಮಂದಿಯಲ್ಲಿ ಕೋವಿಡ್ ಪತ್ತೆಯಾಗಿದ್ದು 39.03 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 40,053 ಮಂದಿ ಮರಣವನ್ನಪ್ಪಿದ್ದಾರೆ.
undefined
ಚೀನಾದಲ್ಲಿ ಮತ್ತೆ ಕೊರೋನಾರ್ಭಟ: ಕರ್ನಾಟಕದಲ್ಲೂ ಮುಂಜಾಗ್ರತಾ ಕ್ರಮ
ಬೆಂಗಳೂರಲ್ಲಿ ನಿನ್ನೆ ಕೋವಿಡ್ ಸೋಂಕಿಗೆ ಒಂದೂ ಸಾವಿಲ್ಲ
ರಾಜ್ಯ ರಾಜಧಾನಿಯಲ್ಲಿ ಬುಧವಾರ ಕೋವಿಡ್ ಸಾವು ವರದಿಯಾಗಿಲ್ಲ. ಆದರೆ 25 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 78 ಮಂದಿ ಚೇತರಿಸಿಕೊಂಡಿದ್ದಾರೆ.
ಬಿಬಿಎಂಪಿ(BBMP) ವ್ಯಾಪ್ತಿಯಲ್ಲಿ ಒಟ್ಟು 1,450 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 18 ಮಂದಿ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಲಹಂಕ ಮತ್ತು ಬೆಂಗಳೂರು ಪೂರ್ವ ವಲಯದಲ್ಲಿ ಮಾತ್ರ ಕೋವಿಡ್ ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದ ಆರು ವಲಯದಲ್ಲಿನ ಸೋಂಕಿತರು ಮನೆ ಆರೈಕೆಯಲಿದ್ದಾರೆ. ನಗರದಲ್ಲಿ ಸದ್ಯ ಯಾವುದೇ ಕಂಟೈನ್ಮೆಂಟ್ ವಲಯಗಳಿಲ್ಲ. ಹೊರವಲಯದ ವಾರ್ಡ್‌ಗಳಲ್ಲಿ ಹೆಚ್ಚು ಪ್ರಕರಣಗಳಿವೆ. ಇನ್ನು ಬುಧವಾರ 18,719 ಮಂದಿ ಕೋವಿಡ್ ಲಸಿಕೆ(Vaccine) ಪಡೆದಿದ್ದಾರೆ.
1233 ಕೋವಿಡ್ ಕೇಸು, 31 ಸಾವು: ಸಕ್ರಿಯ ಕೇಸು 14,704ಕ್ಕೆ ಇಳಿಕೆ
ನವದೆಹಲಿ: ದೇಶದಲ್ಲಿ(India) ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತಷ್ಟು ಇಳಿಕೆಯಾಗಿದ್ದು, ಬುಧವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ 1,233 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇದೇ ವೇಳೆ 31 ಸೋಂಕಿತರು ಸಾವಿಗೀಡಾಗಿದ್ದಾರೆ.
Covid Crisis: ಶಾಂಘೈ ಲಾಕ್‌ಡೌನ್: ನಾಯಿ ಜತೆಗೂ ಹೊರಬರುವಂತಿಲ್ಲ..!
ಸಕ್ರಿಯ ಪ್ರಕರಣಗಳ ಸಂಖ್ಯೆ 14,704ಕ್ಕೆ ಕುಸಿದಿದೆ. ದೇಶದಲ್ಲಿ ಕೋವಿಡ್ ಚೇತರಿಕೆ ದರವು ಶೇ. 98.75ಕ್ಕರ ಏರಿಕೆಯಾಗಿದೆ. ದೈನಂದಿನ ಪಾಸಿಟಿವಿಟಿ ದರವು ಶೇ. 0.20 ರಷ್ಟಿದ್ದು, ವಾರದ ಪಾಸಿಟಿವಿಟಿ ದರವು ಶೇ. 0.25 ರಷ್ಟಿದೆ. ಈವರೆಗೆ ದೇಶದಲ್ಲಿ 183.82 ಕೋಟಿ ಡೋಸು ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ.
ಏಷ್ಯಾದಲ್ಲಿ 10 ಕೋಟಿ ದಾಟಿದ ಕೋವಿಡ್ ಕೇಸ್, ಕೆಲ ಭಾಗದಲ್ಲಿ ಲಾಕ್‌ಡೌನ್!
ನವದೆಹಲಿ: ಬಿಎ.2 ಒಮಿಕ್ರೋನ್ ಕೊರೋನಾ(Coronavirus) ರೂಪಾಂತರಿ ವೇಗವಾಗಿ ಹರಡುತ್ತಿರುವ ಪರಿಣಾಮ ಬುಧವಾರ ಏಷ್ಯಾದಲ್ಲಿ(Asia) ಕೊರೋನಾ ಸೋಂಕಿನ ಪ್ರಕರಣಗಳು 10 ಕೋಟಿ ಗಡಿ ದಾಟಿದೆ. ಏಷ್ಯಾದಲ್ಲಿ ಪ್ರತಿ 2 ದಿನಕ್ಕೆ ಸರಾಸರಿ 10 ಲಕ್ಷ ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿದ್ದು, ಜಗತ್ತಿನ ಒಟ್ಟು ಸೋಂಕಿತರ ಪೈಕಿ ಶೇ.21ರಷ್ಟುಮಂದಿ ಏಷ್ಯಾದವರಾಗಿದ್ದಾರೆ. ಈ ಪೈಕಿ ಭಾರತ(India) ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ದಕ್ಷಿಣ ಕೊರಿಯಾ, ಜಪಾನ್ ಮತ್ತು ವಿಯೆಟ್ನಾಂ ಇವೆ. ಇನ್ನು ಚೀನಾದ ಕೆಲ ಭಾಗಗಳಲ್ಲಿ ಇತ್ತೀಚೆಗೆ ಮತ್ತೆ ಕೊರೋನಾ ಸೋಂಕು ಏರಿಕೆಯಾಗುತ್ತಿದ್ದು, ಕೆಲ ಭಾಗಗಳಲ್ಲಿ ಲಾಕ್‌ಡೌನ್(Lockdown ಜಾರಿ ಮಾಡಿದೆ. ಇನ್ನು ಭಾರತದಲ್ಲಿ ಸೋಂಕು ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದೆ. ಏಷ್ಯಾದಲ್ಲಿ ಈವರೆಗೆ 10 ಲಕ್ಷ ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.