ಕೇಂದ್ರ ಸರ್ಕಾರದಿಂದ 25 ಟವರ್‌ ಮಂಜೂರು: ಸಂಸದ ಬಿವೈ ರಾಘವೇಂದ್ರ

By Kannadaprabha News  |  First Published Jun 24, 2023, 8:36 PM IST

ಹಳ್ಳಿಹೊಳೆ, ಕಾಲ್ತೋಡು ಸೇರಿದಂತೆ ಬೈಂದೂರು ಕ್ಷೇತ್ರದ ಕುಗ್ರಾಮಗಳಿಗೆ ಈಗಾಗಲೇ 25 ಟವರ್‌ಗಳು ಕೇಂದ್ರ ಸರ್ಕಾರದಿಂದ ಮಂಜೂರಾಗಿದೆ. ಆದಷ್ಟುಬೇಗ ಕಾಮಗಾರಿ ಪೂರ್ಣಗೊಂಡು ಜನರಿಗೆ ಇದರ ಪ್ರಯೋಜನ ಸಿಗಲಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ ವೈ ರಾಘವೇಂದ್ರ ಹೇಳಿದರು.


ಕುಂದಾಪುರ (ಜೂ.24) ಹಳ್ಳಿಹೊಳೆ, ಕಾಲ್ತೋಡು ಸೇರಿದಂತೆ ಬೈಂದೂರು ಕ್ಷೇತ್ರದ ಕುಗ್ರಾಮಗಳಿಗೆ ಈಗಾಗಲೇ 25 ಟವರ್‌ಗಳು ಕೇಂದ್ರ ಸರ್ಕಾರದಿಂದ ಮಂಜೂರಾಗಿದೆ. ಆದಷ್ಟುಬೇಗ ಕಾಮಗಾರಿ ಪೂರ್ಣಗೊಂಡು ಜನರಿಗೆ ಇದರ ಪ್ರಯೋಜನ ಸಿಗಲಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ ವೈ ರಾಘವೇಂದ್ರ ಹೇಳಿದರು.

ಶುಕ್ರವಾರ ಹೆಮ್ಮಾಡಿಯ ಜಯಶ್ರೀ ಸಭಾಂಗಣದಲ್ಲಿ ನಡೆದ ಸಂಯುಕ್ತ ಸಮಾವೇಶದ ಬಳಿಕ ಸಂಸದರ ನಿಧಿಯಿಂದ ವಿಶೇಷಚೇತನರಿಗೆ ಸ್ಕೂಟರ್‌ ಕೀ ಹಸ್ತಾಂತರಿಸಿದ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

Tap to resize

Latest Videos

ದೇಶ ಕಟ್ಟುವಲ್ಲಿ ಯುವಜನತೆ ಜವಾಬ್ದಾರಿ ದೊಡ್ಡದು: ಸಂಸದ ಬಿ.ವೈ.ರಾಘವೇಂದ್ರ

ಬೈಂದೂರು ಕ್ಷೇತ್ರದಲ್ಲಿ ನೆಟ್‌ವರ್ಕ್ ಸಮಸ್ಯೆಯ ಕುರಿತು ಅನೇಕ ಬಾರಿ ಇಲ್ಲಿನ ಮುಖಂಡರು ನನ್ನ ಗಮನಕ್ಕೆ ತಂದಿದ್ದಾರೆ. ಜನರ ಸಮಸ್ಯೆಗಳನ್ನು ಈಡೇರಿಸುವುದು ನನ್ನ ಜವಾಬ್ದಾರಿ. ಇನ್ನು 25-30 ಟವರ್‌ಗೆ ಅನುದಾನ ಸಿಗುವ ನಿರೀಕ್ಷೆಯಿದ್ದು, ಮೊದಲ ಪಟ್ಟಿಯಲ್ಲಿ ತಪ್ಪಿ ಹೋದ ಗ್ರಾಮಗಳನ್ನು ಸೇರಿಸಲು ಅವಕಾಶವಿದೆ ಎಂದರು.

ಸರ್ಕಾರಿ ಶಾಲೆಗಳ ಶಿಕ್ಷಕರ ವರ್ಗಾವಣೆಯಿಂದ ಸಮಸ್ಯೆಗಳಾಗುತ್ತಿದೆ. ಪ್ರತೀ ವರ್ಷವೂ ಶಿಕ್ಷಕರ ಕೌನ್ಸೆಲಿಂಗ್‌ ನಡೆಯುತ್ತದೆ. ಆದರೆ ಪರ್ಯಾಯ ವ್ಯವಸ್ಥೆ ಮಾಡದೇ ಏಕಾಏಕಿ ವರ್ಗಾವಣೆ ಮಾಡುವುದು ಸರಿಯಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಗಮನಹರಿಸಬೇಕು ಎಂದರು.

ಸಾಕಾರಗೊಂಡ ಶಿವಮೊಗ್ಗ ಜನತೆಯ ರೈಲ್ವೆ ಕನಸು, ಶಿವಮೊಗ್ಗ-ಬೆಂಗಳೂರು ನಡುವೆ ಒಂದೇ ಭಾರತ ರೈಲು ಸೇವೆ

ಬೈಂದೂರಿನಲ್ಲಿ ಪ್ರಸ್ತಾವಿತ ಕಾಲು ಸಂಕಗಳು ಇನ್ನೂ ಪೂರ್ಣಗೊಳ್ಳದಿರುವ ಕುರಿತಂತೆ ಮಾತನಾಡಿದ ಸಂಸದರು, 10 ಕೋಟಿ ರು.. ವೆಚ್ಚದಲ್ಲಿ 102 ಕಾಲು ಸಂಕಗಳನ್ನು ಮಾಡುವ ಯೋಜನೆ ಕೈಗೊಳ್ಳಲಾಗಿತ್ತು. ಅದರಲ್ಲಿ ಕೆಲವು ಆಗಿದೆ. ಇನ್ನು ಕೆಲವು ಆಗಿಲ್ಲ. ಆದರೆ ಈಗ ಸರ್ಕಾರ ಎಲ್ಲ ಕಾಮಗಾರಿಗಳನ್ನು ತಡೆ ಹಿಡಿದಿದ್ದು, ಇದರಿಂದ ವಿಳಂಬವಾಗಿದೆ. ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದು, ಬಜೆಟ್‌ ಬಳಿಕ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಆ ಬಳಿಕ ಈ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.

ಈ ಸಂದರ್ಭ ಶಾಸಕ ಗುರುರಾಜ್‌ ಗಂಟಿಹೊಳೆ, ಮುಖಂಡರಾದ ಅತುಲ್‌ ಕುಮಾರ್‌ ಶೆಟ್ಟಿ, ಸಾಮ್ರಾಟ್‌ ಶೆಟ್ಟಿ, ವೆಂಕಟೇಶ ಕಿಣಿ, ಕೃಷ್ಣಪ್ರಸಾದ್‌ ಅಡ್ಯಂತಾಯ ಇದ್ದರು.

click me!