ಕೊಡಗು ಜಿಲ್ಲೆಯಲ್ಲಿ ನಾಲ್ಕೇ ತಿಂಗಳಲ್ಲಿ 15 ಶಿಶು ಮರಣ; ಕಾರಣ ಹೀಗಿದೆ!

By Suvarna News  |  First Published Nov 29, 2024, 8:31 PM IST

ಕೊಡಗು ಎಂದರೆ ಅಭಿವೃದ್ಧಿ ಹೊಂದಿದ ಜಿಲ್ಲೆ, ಸಿರಿವಂತರಿರುವ ಜಿಲ್ಲೆ ಎಂದು ಹೊರ ಜಿಲ್ಲೆಯವರೇನೋ ಹೇಳಬಹುದು. ಆದರೆ ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 5 ವರ್ಷದ ಒಳಗಿನ 15 ಶಿಶುಗಳು ಮರಣ ಹೊಂದಿವೆ ಇನ್ನುವುದು ವಿಪರ್ಯಾಸದ ಸಂಗತಿ. 


ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ನ.29) : ಕೊಡಗು ಎಂದರೆ ಅಭಿವೃದ್ಧಿ ಹೊಂದಿದ ಜಿಲ್ಲೆ, ಸಿರಿವಂತರಿರುವ ಜಿಲ್ಲೆ ಎಂದು ಹೊರ ಜಿಲ್ಲೆಯವರೇನೋ ಹೇಳಬಹುದು. ಆದರೆ ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 5 ವರ್ಷದ ಒಳಗಿನ 15 ಶಿಶುಗಳು ಮರಣ ಹೊಂದಿವೆ ಇನ್ನುವುದು ವಿಪರ್ಯಾಸದ ಸಂಗತಿ. 

Tap to resize

Latest Videos

ಇದು ಈ ಜಿಲ್ಲೆಯ ಜನರ ಆರೋಗ್ಯದ ದುಃಸ್ಥಿತಿಗೆ ಹಿಡಿದ ಕೈಗನ್ನಡಿ. ಹೌದು ಕೊಡಗು ಜಿಲ್ಲೆಯಲ್ಲಿ ಕಳೆದ ಮಾರ್ಚ್ ತಿಂಗಳಿನಿಂದ ಅಕ್ಟೋಬರ್ ಅಂತ್ಯದವರೆಗೆ 28 ಮಕ್ಕಳು ಮರಣ ಹೊಂದಿದ್ದರೆ ಜುಲೈ ತಿಂಗಳಿನಿಂದ ಅಕ್ಟೋಬರ್ ಅಂತ್ಯದವರೆಗೆ ಅಂದರೆ ಕೇವಲ ನಾಲ್ಕೇ ತಿಂಗಳಲ್ಲಿ 15 ಮಕ್ಕಳು ಸಾವನ್ನಪ್ಪಿದ್ದಾರೆ. ಇನ್ನೂ ವಿಪರ್ಯಾಸವೆಂದರೆ ಮೃತಪಟ್ಟ ಈ 15 ಅಸುಗೂಸುಗಳಲ್ಲಿ 8 ಶಿಶುಗಳು ಅವಧಿ ಪೂರ್ವ ಪ್ರಸವದಿಂದ ಜನಿಸಿ ಮೃತಪಟ್ಟಿವೆ. ಅಂದರೆ ಈ 8 ಮಕ್ಕಳ ಸಾವನ್ನು ನಿಯಂತ್ರಿಸಲು ಅವಕಾಶವಿತ್ತು. ಆದರೂ ಅವಧಿಗೂ ಮುನ್ನವೇ ಈ ಮಕ್ಕಳು ಜನಿಸಿ ಮೃತಪಟ್ಟಿವೆ ಎನ್ನುವುದು ಕೊಡಗು ಜಿಲ್ಲೆಯಲ್ಲಿ ಜನರ ಅದರಲ್ಲೂ ಮಹಿಳೆಯರ ಆರೋಗ್ಯ ಸುಧಾರಣೆಯಾಗುವಲ್ಲಿ ಹಿಂದೆ ಬಿದ್ದಿದ್ದೇವೆ ಎಂದೇ ಅರ್ಥ. ಜೊತೆಗೆ ಇವರಿಗೆ ಸರಿಯಾದ ತಪಾಸಣೆ, ಚಿಕಿತ್ಸೆ ಮತ್ತು ಆರೈಕೆ ಇವರಿಗೆ ದೊರೆತಿದ್ದರೆ ಈ 8 ಶಿಶುಗಳ ಸಾವನ್ನು ನಿಯಂತ್ರಿಸಲು ಅಕಾಶವಿತ್ತು. ಇನ್ನು 7 ಮಕ್ಕಳು ಪೋಷಕರು ನಾಟಿ ಔಷಧಿಗಳ ಮೊರೆ ಹೋಗಿ ಸಾವನ್ನಪ್ಪಿವೆ. ಅಂದರೆ ಕೊಡಗು ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ಜಿಲ್ಲೆಯಾದರೂ ತೋಟಗಳಲ್ಲಿ ದುಡಿಯುವ ಕಾರ್ಮಿಕರು, ಬಡವರ ಬದುಕಿನ ಸ್ಥಿತಿ ಬದಲಾವಣೆಯಾಗಿಲ್ಲ ಎನ್ನುವುದನ್ನು ಸೂಚಿಸುತ್ತದೆ. ಹೀಗಾಗಿಯೇ ಅರಿವಿನ ಕೊರತೆಯಿಂದಾಗಿ ಜ್ವರ, ಕೆಮ್ಮು ಮುಂತಾದ ಕಾಯಿಲೆಗಳಾದ ಮಕ್ಕಳಿಗೆ ನಾಟಿ ಔಷಧಿ ಕೊಡಿಸುವುದರಿಂದ ಅವುಗಳು ನ್ಯುಮೋನಿಯಾದಂತ ಕಾಯಿಲೆಗಳಿಗೆ ಒಳಗಾಗಿ ಮೃತಪಟ್ಟಿವೆ. 

 

Kodagu |ಆಸ್ತಿ ಕಬಳಿಸಲು ತಹಶೀಲ್ದಾರ್ ಸಹಿ, ದಾಖಲೆಗಳನ್ನೇ ನಕಲಿ ಮಾಡಿದ ಭೂಪ!

ಕೊಡಗು ಜಿಲ್ಲೆಯ ಶಿಶು ಮರಣ ದರವನ್ನು ರಾಜ್ಯದ ಇತರೆ ಜಿಲ್ಲೆಗಳ ದರಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಶಿಶು ಮರಣ ಕಡಿಮೆಯೇ ಇದೇ ಎಂದು ಹೇಳಬಹುದು. ಆದರೂ ಕಳೆದ 4 ತಿಂಗಳಲ್ಲಿ ಬರೋಬ್ಬರಿ 15 ಶಿಶು ಮೃತಪಟ್ಟಿವೆ ಎನ್ನುವುದು ಜಿಲ್ಲಾಡಳಿತ ಯೋಚಿಸಬೇಕಾಗಿರುವ ಸಂಗತಿ. ಹೀಗಾಗಿ ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಅವರು ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ಕರೆದು ಶಿಶು ಮರಣ ದರವನ್ನು ನಿಯಂತ್ರಿಸಲು ಸೂಚಿಸಿದ್ದಾರೆ. ಶಿಶು ಮತ್ತು ತಾಯಿ ಆರೋಗ್ಯದ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಇರಬೇಕು. ಉತ್ತಮ ಆರೋಗ್ಯ ಇದ್ದಲ್ಲಿ ಕುಟುಂಬ ನಿರ್ವಹಣೆ ಚೆನ್ನಾಗಿರುತ್ತದೆ. ಇದರೊಂದಿಗೆ ಆರ್ಥಿಕ ವೆಳವಣಿಗೆಗೆ ಸಹಕಾರಿಯಾಗಲಿದೆ ಎಂದಿದ್ದಾರೆ. ಜೊತೆಗೆ ಇನ್ನಷ್ಟು ಜಾಗೃತಿ ಕಾರ್ಯಕ್ರಮ ಮಾಡಲು ಸೂಚಿಸಿದ್ದಾರೆ ಎಂದು ಕೊಡಗು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಸತೀಶ್ ಕುಮಾರ್ ಹೇಳಿದ್ದಾರೆ. 

ಬಿಜೆಪಿ-ಜೆಡಿಎಸ್ ಸರ್ವಾಧಿಕಾರಿ ನಡೆಯನ್ನು ಜನರು ತಿರಸ್ಕರಿಸಿದ್ದಾರೆ: ಸಚಿವ ಮಹದೇವಪ್ಪ

ಒಂದು ಸಮಾಧಾನದ ವಿಷಯವೆಂದರೆ ಕಳೆದ ವರ್ಷದಲ್ಲಿ ಮಕ್ಕಳ ಜೊತೆಗೆ 6 ತಾಯಿಯಂದಿರು ಮೃತಪಟ್ಟಿದ್ದರು. ಆದರೆ ಈ ಬಾರಿ ಒಬ್ಬರೂ ಆ ಸ್ಥಿತಿಗೆ ತಲುಪಲಿಲ್ಲ ಎನ್ನುವುದು ಒಂದಿಷ್ಟು ಸಮಾಧಾನದ ಸಂಗತಿ. ಏನೇ ಆಗಲಿ ರಾಜ್ಯದಲ್ಲಿ ಅತ್ಯಂತ ಕಡಿಮೆ ಶಿಶು ಮರಣ ದರ ಹೊಂದಿರುವ ಜಿಲ್ಲೆ ಎಂಬ ಖ್ಯಾತಿ ಹೊಂದಿದ್ದರೂ ಕಳೆದ 4 ತಿಂಗಳಲ್ಲಿ 15 ಶಿಶುಗಳು ಸಾವನ್ನಪ್ಪಿರುವುದು ಬೇಸರದ ವಿಷಯ.

click me!