ನಿರಂತರ ಕೂಬಿಂಗ್ ಕಾರ್ಯಚರಣೆ ನಡೆಯುತ್ತಿದ್ದರೂ ನಕ್ಸಲರ ಸುಳಿವು ಮಾತ್ರ ಇಲ್ಲ, ಇತ್ತ ಕಾಡಂಚಿನ ಗ್ರಾಮಗಳಿಗೆ ಭೇಟಿ ನೀಡಿರುವ ವದಂತಿಯೂ ಇಲ್ಲ. ಹಾಗಾದ್ರೆ ನಕ್ಸಲರು ಇಲ್ಲಿಂದ ಕಾಲ್ಕಿತ್ತಾರಾ ಎನ್ನುವ ಪ್ರಶ್ನೆ ಉದ್ಬವವಾಗಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ನ.29) ::ಪಶ್ಚಿಮ ಘಟ್ಟ ಸಾಲಿನ ವ್ಯಾಪ್ತಿಯಲ್ಲಿ ನಿತ್ಯವೂ ನಕ್ಸಲರಿಗೆ ತೀವ್ರ ಶೋಧ ಕಾರ್ಯ ನಡೆಯುತ್ತಿದೆ.ಅದರಲ್ಲೂ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಅದಕ್ಕೆ ಅಂಟಿಕೊಂಡಿರೊ ಅರಣ್ಯದಲ್ಲಿ ನಕ್ಸಲ್ ಶೋಧ ನಡೆಯುತ್ತಲೇ ಇದೆ..ನಿರಂತರ ಕೂಬಿಂಗ್ ಕಾರ್ಯಚರಣೆ ನಡೆಯುತ್ತಿದ್ದರೂ ನಕ್ಸಲರ ಸುಳಿವು ಮಾತ್ರ ಇಲ್ಲ, ಇತ್ತ ಕಾಡಂಚಿನ ಗ್ರಾಮಗಳಿಗೆ ಭೇಟಿ ನೀಡಿರುವ ವದಂತಿಯೂ ಇಲ್ಲ. ಹಾಗಾದ್ರೆ ನಕ್ಸಲರು ಇಲ್ಲಿಂದ ಕಾಲ್ಕಿತ್ತಾರಾ ಎನ್ನುವ ಪ್ರಶ್ನೆ ಉದ್ಬವವಾಗಿದೆ.
ಮತ್ತೆ ಕೇರಳದತ್ತ ರಾಜ್ಯದ ನಕ್ಸಲರು?
ಒಂದು ದಶಕದಿಂದ ರಾಜ್ಯದ ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ನಕ್ಸಲರ ಸದ್ದೆ ಇರ್ಲಿಲ್ಲ.ಹೀಗಾಗಿ ಎಎನ್ ಎಫ್ ಪಡೆ ಯಾಕೆ ಅನ್ನೋ ಮಾತು ಕೇಳಿ ಬರ್ತಿತ್ತು..ಇದರ ಚರ್ಚೆ ನಡುವೆಯೇ ಏಕಾಏಕಿ ಒಂದೂವರೆ ತಿಂಗಳ ಹಿಂದೆ ಮೊಸ್ಡ್ ವಾಟೆಂಡ್ ನಕ್ಸಲರು ಕಾಣಿಸಿಕೊಂಡ್ರು..ಆದಾದ ನಂತ್ರ ನಕ್ಸಲ್ ನಾಯಕ ಅಂತಿದ್ದ ವಿಕ್ರಂ ಗೌಡನ ಎನ್ ಕೌಂಟರ್ ಅಯ್ತು..ಆದಾದ ನಂತ್ರ ಉಳಿದವರ ಹುಡುಕಾಟ ಚುರಕುಗೊಳ್ತು..ಮಾಸ್ ಕೂಬಿಂಗ್ ಕೂಡ ನಡೆಸಲಾಗ್ತಿದೆ. ಅದು ನಿರಂತರ 10 ದಿನದಿಂದ ಉಡುಪಿ ದಕ್ಷಿಣ ಕನ್ನಡ ಚಿಕ್ಕಮಗಳೂರು ಅಗುಂಬೆ ಭಾಗದಲ್ಲಿ ನಡೆಯುತ್ತಿದೆ..ವಿಕ್ರಂಗೌಡ ನ ಸಾವಿನ ನಂತ್ರ ಉಳಿದ ಮುಂಡುಗಾರು ಲತಾ, ಜಯಣ್ಣ, ವನಜಾಕ್ಷಿ,ಸುಂದರಿ ಸೇರಿ ಹಲವರಿಗಾಗಿ ತೀವ್ರ ಶೋಧ ನಡೆಯುತ್ತಿದೆ..ಅದ್ರೆ ನಕ್ಸಲರ ಸುಳಿವು ಮಾತ್ರ ಸಿಕ್ತಿಲ್ಲ..ಎನ್ ಕೌಂಟರ್ ನಂತ್ರ ಕೇರಳ ಕಡೆ ವಲಸೆ ಮತ್ತೇ ಹೋದ್ರಾ ಎಂಬ ಪ್ರಶ್ನೆ ಮೂಡಿದೆ.
ವಿಕ್ರಂಗೌಡ ಸಹಚರರು ಕೊಡಗಿನತ್ತ ಬಂದಿರುವ ಸಾಧ್ಯತೆ: ನಕ್ಸಲರಿಗಾಗಿ ತೀವ್ರ ಕೂಂಬಿಂಗ್
ಲತಾ ನೇತೃತ್ವದ ತಂಡದಿಂದ ಸಂದೇಶ ?
ಹೌದು ಈ ಪ್ರಶ್ನೆ ಕಾಡ್ತಿರೋಕೆ ಮೊದಲ ಕಾರಣವೇ ವಿಕ್ರಂಗೌಡ ಉಡುಪಿ ಭಾಗದಲ್ಲಿ ಕಾಣಿಸಿಕೊಂಡ್ರು ಅನ್ನೊ ವದಂತಿ ಹರಿಡಿತ್ತು..ಮುಂಡುಗಾರು ಲತಾ ಕೊಪ್ಪ ತಾಲೂಕಿನ ಕಡೆಗುಂದಿಯಲ್ಲಿ ಬೇಟಿ ಕೊಟ್ಟಾಗ್ಲೇ ಎಎನ್ಎಫ್ ಪಡೆಗೆ ಮಾಹಿತಿ ಸಿಕ್ಕಿತ್ತು. ವಿಕ್ರಂಗೌಡ ಎನ್ ಕೌಂಟರ್ ಅದ ನಂತ್ರ ವದಂತಿಗಳಂತೂ ಇಲ್ವೆ ಇಲ್ಲ. ಎಲ್ಲೂ ಬೇಟಿಯಾದ ಬಗ್ಗೆಯೂ ಮಾಹಿತಿ ಇಲ್ಲ. ಹಾಗಾದ್ರೆ ಕಾಡಿನೊಳಗೆಯೇ ಇದ್ದಾರಾ? ಕಷ್ಟ ಅದು ಕಾಡಿನೊಳಗೆ ಇರೋದು ಆಹಾರಕ್ಕಾಗಿಯಾದ್ರು ಎಲ್ಲಾದರೂ ಬರ್ಲೆ ಬೇಕು. ಇದು ಒಂದು ಆ್ಯಂಗಲ್ ಅದ್ರೆ ಮತ್ತೊಂದು ಅತೀ ಹೆಚ್ಚು ನಕ್ಸಲರು ಶರಣಾಗತಿಯಾಗಿದ್ದೇ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ.
ಛತ್ತೀಸ್‌ಗಢದ ಸುಕ್ಮಾದಲ್ಲಿ 10 ನಕ್ಸಲರನ್ನ ಬೀದಿ ಹೆಣ ಮಾಡಿದ ಭದ್ರತಾ ಪಡೆ!
ಎನ್ ಕೌಂಟರ್ ಕೂಬಿಂಗ್ ಜಾಸ್ತಿಯಾಗ್ತಾ ಇದ್ದಂತೆ ಶರಣಾಗತಿಯಾಗಬಹುದು ಎಂಬ ನಿರೀಕ್ಷೆ ಇತ್ತು.ಯಾಕೇಂದ್ರೆ ಸ್ಥಳೀಯ ಬೆಂಬಲವೂ ಸಿಕ್ಕಂಗೆ ಕಾಣಿಸ್ತಿರಲಿಲ್ಲ. ಮುಖ್ಯವಾಹಿನಿಗೆ ಕರ್ಕೊಂಡು ಬರೋ ಸಮಿತಿಯಂತೂ ಪುಲ್ ಅಕ್ಟೀವ್ ಇದೆ. ಕೆಲವೊಂದು ಪ್ರಯತ್ನವನ್ನು ಮಾಡಿದ್ದಾರೆ. ಇದರ ಫಲವಾಗಿ ಮುಂಡಗಾರು ಲತಾ ನೇತೃತ್ವದ ತಂಡದಿಂದ ಸಂದೇಶ ಪೊಲೀಸ್ ಇಲಾಖೆಗೆ ಸಿಕ್ಕಿದೆ. ಉನ್ನತ ಮೂಲಗಳ ಪ್ರಕಾರ ಕಾಡಿನಲ್ಲಿ ಸಾಯುತ್ತೇವೆ ಹೊರತು ಶರಣಾಗತಿ ಪ್ರಶ್ನೆ ಇಲ್ಲ ಎನ್ನುವುದು ಕೆಂಪು ಉಗ್ರರದ್ದು.ಒಟ್ಟಾರೆ ಎನ್ ಕೌಂಟರ್ ನಂತ್ರ ಕೂಬಿಂಗ್ ಮಾತ್ರ ಬಿಡದೇ ನಡೆಯುತ್ತಿದೆ..ದಿನದ 24 ಗಂಟೆಯೂ ಕಾಡಿನೊಳಗೆ ಹದ್ದಿನ ಕಣ್ಣಿಟ್ಟಿದೆ ಖಾಕೀ ಟೀಂ..ಅದ್ರು ಸದ್ದಿಲ್ಲ..ಕೇರಳ ಕಡೆ ಮುಖ ಮಾಡಿದ್ರಾ? ನೋ ಸರಂಡರ್ ಅಂತಾ ವಲಸೆ ಹೊರಟ್ರಾ? ನಕ್ಸಲ್ ಚಟುವಟಿಕೆ ಮಾಡೋಕೆ ಬಂದೋರಿಗೆ ಜನ್ರ ಬೆಂಬಲ ಸಿಗದೇ ಮತ್ತೇ ಕ್ಷೀಣಿಸಿದ್ರಾ ಕೆಂಪು ಉಗ್ರರು ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.