100 ಅಡಿ ಏಕಶಿಲಾ ಕೆಂಪೇಗೌಡರ ಕಲ್ಲಿನ ಪ್ರತಿಮೆ: ಸಚಿವ ಮುನಿರತ್ನ

By Kannadaprabha News  |  First Published Mar 24, 2023, 5:42 AM IST

ಯಲಹಂಕ ವ್ಯಾಪ್ತಿಯ ಬೆಟ್ಟಹಲಸೂರಿನಲ್ಲಿ 184 ಎಕರೆ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಉದ್ಯಾನದಲ್ಲಿ ನಾಡಪ್ರಭು ಕೆಂಪೇಗೌಡ ಅವರ 100 ಅಡಿಗಿಂತ ಹೆಚ್ಚಿನ ಎತ್ತರದ ಕಲ್ಲಿನ ಪ್ರತಿಮೆ ಸ್ಥಾಪಿಸಲು ಉದ್ದೇಶಿಸ ಲಾಗಿದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ತಿಳಿಸಿದ್ದಾರೆ.


ಬೆಂಗಳೂರು (ಮಾ.24): ಯಲಹಂಕ ವ್ಯಾಪ್ತಿಯ ಬೆಟ್ಟಹಲಸೂರಿನಲ್ಲಿ 184 ಎಕರೆ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಉದ್ಯಾನದಲ್ಲಿ ನಾಡಪ್ರಭು ಕೆಂಪೇಗೌಡ ಅವರ 100 ಅಡಿಗಿಂತ ಹೆಚ್ಚಿನ ಎತ್ತರದ ಕಲ್ಲಿನ ಪ್ರತಿಮೆ ಸ್ಥಾಪಿಸಲು ಉದ್ದೇಶಿಸ ಲಾಗಿದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ತಿಳಿಸಿದ್ದಾರೆ. ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ದೇಶಿತ ಉದ್ಯಾನವನದ ಜಾಗ ಸಂಪೂರ್ಣವಾಗಿ ಸರ್ಕಾರಕ್ಕೆ ಸೇರಿದೆ. ಯಾವುದೇ ಖಾಸಗಿ ಭೂಮಿಯನ್ನು ಪಡೆದುಕೊಂಡಿಲ್ಲ. ಕಂದಾಯ ಇಲಾಖೆಗೆ ಸೇರಿದ ಜಾಗವನ್ನು ತೋಟಗಾರಿಕೆ ಇಲಾಖೆಗೆ ನೀಡಲು ನಿರ್ಧರಿಸಿದೆ. 

ಈ ಜಾಗದಲ್ಲಿ ತೋಟಗಾರಿಕೆ ಇಲಾಖೆಯಿಂದ ಉದ್ಯಾನ ನಿರ್ಮಿಸಲಾಗುವುದು. ಬೆಟ್ಟಹಲಸೂರು ಸುತ್ತ ಇರುವ ಕಲ್ಲಿನ ಬೆಟ್ಟದಲ್ಲಿ ಸುಮಾರು 100 ಅಡಿಗಿಂತ ಹೆಚ್ಚಿನ ಎತ್ತರದ ಶಿಲೆ ಇದೆ. ಅದನ್ನು ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೆ ಬಳಸಲಾಗುವುದು ಎಂದರು. ಕೆಂಪೇಗೌಡರ ಉದ್ಯಾನವನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿದರೆ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಸರ್ಕಾರದ ಹಣದಲ್ಲಿ ಉದ್ಯಾನ ನಿರ್ಮಾಣ ಮಾಡಲಾಗುವುದು. ಜತೆಗೆ ಕೆಂಪೇಗೌಡರ ಕಲ್ಲಿನ ಮೂರ್ತಿಯನ್ನು ತೋಟಗಾರಿಕೆ ಇಲಾಖೆಯಿಂದಲೇ ಸ್ಥಾಪಿಸಲಾಗುವುದು ಎಂದರು.

Tap to resize

Latest Videos

ಎಸ್‌ಸಿ, ಎಸ್‌ಟಿ ಮೀಸಲು ಹೆಚ್ಚಳ ಶೆಡ್ಯೂಲ್‌ 9ಕ್ಕೆ ಸೇರಿಸಿ: ಕೇಂದ್ರಕ್ಕೆ ರಾಜ್ಯದಿಂದ ಪತ್ರ

ಕಬ್ಬನ್‌ ಪಾರ್ಕ್ಗಿಂತ ದೊಡ್ಡದು: ನಗರದಲ್ಲಿರುವ ಲಾಲ್‌ಬಾಗ್‌ ಹಾಗೂ ಕಬ್ಬನ್‌ ಪಾರ್ಕ್ 240 ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದು, ಬೆಂಗಳೂರಿಗೆ ಉದ್ಯಾನ ನಗರಿ ಎಂದು ಹೆಸರು ಬರಲು ಈ ಎರಡು ಉದ್ಯಾನ ಕಾರಣವಾಗಿದೆ. ಇಷ್ಟುವರ್ಷಗಳಾ ದರೂ ಹೊಸದಾಗಿ ಯಾವುದೇ ಪಾರ್ಕ್ ನಿರ್ಮಾಣ ಮಾಡಿಲ್ಲ. ಅದ್ದರಿಂದ ಬೆಟ್ಟಹಲಸೂರು ಬಳಿ ಉದ್ಯಾನ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಈ ಉದ್ಯಾನದಲ್ಲಿ ಕೆರೆ ನಿರ್ಮಾಣ, ಕೆಂಪೇಗೌಡರ ಇತಿಹಾಸ ತಿಳಿಸುವ ಪಾರ್ಕ್ ನಿರ್ಮಾಣವಾಗಲಿದೆ. ಕಂದಾಯ ಇಲಾಖೆಯ ಈ ಭೂಮಿಯ ಬೆಲೆ ಸುಮಾರು 700-800 ಕೋಟಿ ರು. ಆಗುತ್ತದೆ. ಇಲ್ಲಿಂದ 15 ಕಿ.ಮೀ. ದೂರದಲ್ಲಿ 320 ಎಕರೆ ಪ್ರದೇಶದಲ್ಲಿ ವಾಜಪೇಯಿ ಪಾರ್ಕ್ ನಿರ್ಮಾಣವಾಗಲಿದೆ ಎಂದು ಸಚಿವ ಮುನಿರತ್ನ ವಿವರಿಸಿದರು.

ಕೋಲಾರದಲ್ಲಿ ಸಿದ್ದರಾಮಯ್ಯ ಅಲೆ ಇಲ್ಲ: ಕೋಲಾರದಲ್ಲಿ ಸಿದ್ದರಾಮಯ್ಯನವರ ಅಲೆಯೇ ಇಲ್ಲ, ಕೋಲಾರ ಕ್ಷೇತ್ರಕ್ಕೆ ಹುಲಿಯನ್ನು ಬಿಡಬೇಕೋ ಸಿಂಹವನ್ನು ಬಿಡಬೇಕೋ ಎಂಬುದನ್ನು ಸೂಕ್ತ ಸಮಯದಲ್ಲಿ ನಿರ್ಧಾರ ಮಾಡುತ್ತೇವೆ. ಸೂಕ್ತ ಸಮಯಕ್ಕೆ ಸೂಕ್ತ ವ್ಯಕ್ತಿಯನ್ನೇ ಅಭ್ಯರ್ಥಿಯನ್ನಾಗಿ ಘೋಷಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರ ಸಚಿವ ಮುನಿರತ್ನ ತಿಳಿಸಿದರು.

ನಗರದ ಹೊರವಲಯದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಫಲಾನುಭವಿಗಳ ಸಮಾವೇಶ ರಾಜ್ಯಾದ್ಯಾಂತ ಯಶಸ್ವಿಯಾಗಿ ನಡೆಸಲಾಗುತ್ತಿದೆ. ಜನರಿಗೆ ಸರ್ಕಾರ ನೀಡಿರುವ ಯೋಜನೆಗಳ ಅಂಕಿ ಅಂಶಗಳನ್ನು ಸಂಕ್ಷಿಪ್ತವಾಗಿ ನೀಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆ ಮತ್ತು ಜನರಿಗೆ ನೀಡಿರುವ ಯೋಜನೆಗಳ ಬಗ್ಗೆ ಜನರಿಗೆ ತಿಳಿಸುವುದು ಈ ಸಮಾವೇಶದ ಉದ್ದೇಶವಾಗಿದೆ ಎಂದರು.

ಮತ್ತೆ ಸಚಿವ ಗಡ್ಕರಿಗೆ ಜೀವ ಬೆದರಿಕೆ ಕರೆ: ಬೆಳಗಾವಿ ಕೈದಿ ಹೆಸರಲ್ಲಿ ಮಂಗಳೂರಿಂದ ಬೆದರಿಕೆ

ಟಿಪ್ಪುವನ್ನು ಕೊಂದಿದ್ದು ಉರಿಗೌಡ: ಟಿಪ್ಪು ಸುಲ್ತಾನ್‌ನನ್ನು ಕೊಂದಿದ್ದು ಉರಿಗೌಡರು, ಈ ವರೆಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮರೆಮಾಚಿದ್ದ ಸತ್ಯಾಂಶ ನಮ್ಮ ಸಚಿವ ಆರ್‌.ಅಶೋಕ್‌ ಮತ್ತು ಅಶ್ವತ್ಥನಾರಾಯಣ ಅಧ್ಯಯನ ಮಾಡಿ ಹೊರ ತಂದಿದ್ದಾರೆ. ಆದರೆ ಕುಮಾರಸ್ವಾಮಿಗೆ ಇನ್ನೂ ಯಾಕೆ ಅನುಮಾನ ಕಾಡುತ್ತಿದೆ ಎಂದು ಗೊತ್ತಾಗುತ್ತಿಲ್ಲ ಎಂದರು. ಸೋಮಣ್ಣರಿಗೆ ಅಸಮಾಧಾನದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನಿಗೆ, ಸೋಮಣ್ಣನವರಿಗೆ ಅಸಮಾಧಾನ ಇದೆ ಎಂದು ನಿಮಗ್ಯಾರು ಹೇಳಿದ್ದು, ಅವರ ಕಣ್ಣಲ್ಲಿ ನೀರು ಬಂದಿದೆ ಎಂಬ ಪ್ರಶ್ನೆಗೆ ಆನಂದಕ್ಕೂ ನೀರು ಬರುತ್ತದೆ. ಅವರ ಮಗನ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ, ಅವರು ಏನು ಮಾತನಾಡಿದ್ದಾರೆ ಎಂಬ ವಿಷಯ ನನಗೆ ಗೊತ್ತಿಲ್ಲ ಎಂದರು.

click me!