ರಾಷ್ಟ್ರಕವಿ ಕುವೆಂಪು ಹುಟ್ಟುಹಬ್ಬ: ಕವಿಶೈಲಕ್ಕೆ ರಾಜ್ಯ ಸರ್ಕಾರದಿಂದ 1 ಕೋಟಿ ಬಿಡುಗಡೆ

By Govindaraj S  |  First Published Dec 28, 2022, 11:10 AM IST

ರಾಷ್ಟ್ರಕವಿ ಕುವೆಂಪು ಹುಟ್ಟುಹಬ್ಬಕ್ಕೆ ರಾಜ್ಯ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ. ಡಿಸೆಂಬರ್ 29ರ ಕುವೆಂಪು ಹುಟ್ಟುಹಬ್ಬದ ಆಚರಣೆ ಹಿನ್ನೆಲೆ ಒಂದು ದಿನ ಮೊದಲೇ ರಾಜ್ಯ ಸರ್ಕಾರ ಉಡುಗೊರೆ ನೀಡಿದೆ. 


ವರದಿ: ರಾಜೇಶ್ ಕಾಮತ್, ಏಷ್ಯಾನೆಟ್ ಸುವರ್ಣ ನ್ಯೂಸ್, ಶಿವಮೊಗ್ಗ

ಶಿವಮೊಗ್ಗ (ಡಿ.28): ರಾಷ್ಟ್ರಕವಿ ಕುವೆಂಪು ಹುಟ್ಟುಹಬ್ಬಕ್ಕೆ ರಾಜ್ಯ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ. ಡಿಸೆಂಬರ್ 29ರ ಕುವೆಂಪು ಹುಟ್ಟುಹಬ್ಬದ ಆಚರಣೆ ಹಿನ್ನೆಲೆ ಒಂದು ದಿನ ಮೊದಲೇ ರಾಜ್ಯ ಸರ್ಕಾರ ಉಡುಗೊರೆ ನೀಡಿದೆ. ರಾಷ್ಟ್ರಕವಿ ಕುವೆಂಪು ಹುಟ್ಟಿದ ಕುಪ್ಪಳ್ಳಿ ಮನೆಗೆ ದುರಸ್ಥಿ ಮತ್ತು ಸುಣ್ಣ ಬಣ್ಣಕ್ಕಾಗಿ ಸರ್ಕಾರ ಒಂದು ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. 

Tap to resize

Latest Videos

ಕವಿಶೈಲ ಕುಪ್ಪಳ್ಳಿಯ ಆಯೋಗವು ರಾಷ್ಟ್ರಕವಿ ಕುವೆಂಪು ಅವರ ಮನೆಯ ದುರಸ್ಥಿ ಮತ್ತು ಸುಣ್ಣಬಣ್ಣ ಕಾಮಗಾರಿಗಾಗಿ ಹಣ ಕೇಳಿದ್ದು, ಆಯೋಗದ ಮನವಿಯ ಮೇರೆಗೆ ಒಂದು ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ಮುಖ್ಯಮಂತ್ರಿಗಳ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಅನುದಾನ ಬಿಡುಗಡೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಹಾಗೂ ರಾಜ್ಯದ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಮಹತ್ತರ ಪಾತ್ರ ವಹಿಸಿದ್ದಾರೆ. 

ರೋಹಿತ್‌ ಚಕ್ರತೀರ್ಥ ವಿರುದ್ಧ ಗೋ ಬ್ಯಾಕ್‌ ಚಳ​ವ​ಳಿಗೆ ಸಜ್ಜು

ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ನೇತೃತ್ವದಲ್ಲಿ ಪ್ರತಿಷ್ಠಾನದ ಸದಸ್ಯರು ಕಳೆದ ಎರಡು ತಿಂಗಳ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಸಮ್ಮುಖದಲ್ಲಿ ಭೇಟಿಯಾಗಿ ಅನುದಾನ ಹೆಚ್ಚಿಸುವಂತೆ ಕೋರಿದ್ದರು. ಸಂಘ ಸಂಸ್ಥೆಗೆ ನೀಡುವಂತೆ ಪ್ರತಿ ವರ್ಷ ಸರ್ಕಾರ 5 ರಿಂದ 6 ಲಕ್ಷ ರೂ. ಹಣ ಬಿಡುಗಡೆ ಮಾಡುತ್ತಿತ್ತು. ಆದರೆ ಪ್ರತಿ ವರ್ಷ ಕವಿಶೈಲದ ನಿರ್ವಾಹಣಕ್ಕೆ 25 ರಿಂದ 30 ಲಕ್ಷ ರೂ. ವೆಚ್ಚ ತಗುಲುತ್ತಿತ್ತು. 

13 ಜನ ಕೆಲಸದವರು, ಕಲ್ಲಿನಿಂದ ನಿರ್ಮಿಸಿದ ನಾಡಹಂಚಿನ ಮಾದರಿಯ ಕಟ್ಟಡಗಳು ಇಲ್ಲಿವೆ. ಹೆಚ್ಚಿನ ಹಣ ಬಿಡುಗಡೆಗೆ ಆಗ್ರಹಿಸಿದ್ದರು. ಎರಡು ವರ್ಷಕ್ಕೊಮ್ಮೆ ಸುಣ್ಣಬಣ್ಣ ಹೊಡೆದರೂ ಸರ್ಕಾರದಿಂದ ಬರುವ  5 ರಿಂದ 6 ಲಕ್ಷದ ರೂ. ಸಾಕಾಗುತ್ತಿರಲಿಲ್ಲ. ಹಾಗಾಗಿ ಹೆಚ್ಚಿನ ಹಣ ಬಿಡುಗಡೆ ಮಾಡಲು ಗೃಹ ಮಂತ್ರಿ ಆರಗ ಜ್ಞಾನೇಂದ್ರ ಸಹಕಾರದೊಂದಿಗೆ ಕೋರಲಾಗಿತ್ತು. ಸರ್ಕಾರದಿಂದ ಉತ್ತರ ಬಂದಿದೆ. ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡುತ್ತಿದೆ. ಪ್ರತಿ ವರ್ಷ ಡಿಸೆಂಬರ್‌ನಲ್ಲಿ ಕವಿಶೈಲಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. 

ಕೋಡಿಯಲ್ಲಿ ಕಡಲಾಮೆಯ ಮೊಟ್ಟೆಗಳ ರಕ್ಷಣೆಗೆ ವ್ಯಾಪಕ ಪ್ರಶಂಸೆ

ಈ ಬಾರಿ 35 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಕವಿಶೈಲದ ವೀಕ್ಷಣೆ ಮಾಡಿದ್ದಾರೆಂದು ಹೇಳಲಾಗಿದೆ.  ಕೊರೋನಾ ಸೋಂಕು ಬರುವ ಮೊದಲು  17 ರಿಂದ 20 ಸಾವಿರದಷ್ಟು ಪ್ರವಾಸಿಗರು ಪ್ರತಿ ಡಿಸೆಂಬರ್ ಗೆ ಬಂದು ಹೋಗುತ್ತಿದ್ದರು. ಈ ಬಾರಿ ಅದರ ಸಂಖ್ಯೆ 35 ಸಾವಿರಕ್ಕೆರಿದೆ. ಶಾಲಾ ಮಕ್ಕಳು ಅತಿಹೆಚ್ಚು ಬೇಟಿ ನೀಡಿದ್ದರಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂಬುದು ಕುವೆಂಪು ಪ್ರತಿಷ್ಠಾನದ ಮಾಹಿತಿ.

click me!