ವಿಶ್ವ ರಸ್ಲಿಂಗ್ ಚಾಂಪಿಯನ್ ಟೂರ್ನಿಯಲ್ಲಿ ಭಾರತದ ವಿನೇಶ್ ಫೋಗಟ್ ಕಂಚಿನ ಪದಕ ಗೆದ್ದು ಸಂಭ್ರಮಿಸಿದ್ದಾರೆ. ಈ ಮೂಲಕ ಪದಕದ ಕೊರಗನ್ನು ನೀಗಿಸಿದ್ದಾರೆ. ಇಷ್ಟೇ ಅಲ್ಲ ಟೋಕಿಯೋ ಒಲಿಂಪಿಕ್ಸ್ಗೂ ಅರ್ಹತೆ ಪಡೆದಿದ್ದಾರೆ.
ಕಜಕಿಸ್ತಾನ್(ಸೆ.18): ವಿಶ್ವ ರಸ್ಲಿಂಗ್ ಚಾಂಪಿಯನ್ಶಿಪ್ ಟೂರ್ನಿಯಲ್ಲಿ ಕಂಚಿನ ಪದಕ ಗೆಲ್ಲೋ ಮೂಲಕ ಭಾರತದ ವಿನೇಶ್ ಫೋಗಟ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಕಳೆದ 3 ಟೂರ್ನಿಗಳಲ್ಲಿ ಪದಕ ಗೆಲ್ಲಲು ವಿಫಲವಾಗಿದ್ದ ವಿನೇಶ್ ಫೋಗಟ್, ಇದೀಗ ಮಹತ್ವದ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದಕೊಂಡರು. ಇದರೊಂದಿಗೆ 2020 ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿದ್ದಾರೆ.
ಇದನ್ನೂ ಓದಿ: ಸಂಗೀತಾ ಫೋಗಾಟ್ ಜತೆ ಕುಸ್ತಿಪಟು ಭಜರಂಗ್ ವಿವಾಹ
undefined
ಸ್ವೀಡನ್ನ ಸೋಫಿಯಾ ಮ್ಯಾಟ್ಸನ್ ವಿರುದ್ಧ 1ನೇ ರೌಂಡ್ನಲ್ಲಿ ವಿನೇಶ್ ಫೋಗಟ್ 13-0 ಅಂತರದಲ್ಲಿ ಗೆದ್ದಿದ್ದರು. ಮುಕಯಿಡಾ ಫೈನಲ್ ಪ್ರವೇಶಿಸಿದ ಕಾರಣ, ವಿನೇಶ್ಗೆ ರಿಪಿಶ್ಯಾಜ್ ಸುತ್ತಿಗೆ ಲಗ್ಗೆ ಇಟ್ಟಿದ್ದರು. ಇದೀಗ ಗ್ರೀಕ್ನ ಮರಿಯಾ ಪ್ರೆವೋಲರಿಕಿ ವಿರುದ್ಧ 4-1 ಅಂತರದಲ್ಲಿ ಗೆಲುವು ಸಾಧಿಸಿದ್ದರು. ಈ ಮೂಲಕ ಕಂಚಿನ ಪದಕ ಗೆದ್ದುಕೊಂಡರು.
ಇದನ್ನೂ ಓದಿ: ವೈರಲ್ ಆಗುತ್ತಿದೆ ರಸ್ಲರ್ ಗೀತಾ ಪೋಗತ್ ಪತಿ ಡ್ಯಾನ್ಸ್ ವೀಡಿಯೋ !
ವಿಶ್ವ ರಸ್ಲಿಂಗ್ ಚಾಂಪಿಯನ್ಶಿಪ್ನಲ್ಲಿ ಪದಕ ಗೆದ್ದ 5ನೇ ಭಾರತದ ಮಹಿಳೆ ಅನ್ನೋ ಹೆಗ್ಗಳಿಕೆಗೆ ವಿನೇಶ್ ಪಾತ್ರವಾಗಿದ್ದಾರೆ. 2006ರಲ್ಲಿ ಅಲಕಾ ಥೋಮರ್, 2012ರಲ್ಲಿ ಗೀತಾ ಫೋಗಟ್, 2012ರಲ್ಲೇ ಬಬಿತಾ ಫೋಗಟ್ ಹಾಗೂ 2018ರಲ್ಲಿ ಪೂಜಾ ಧಂಡಾ ಪದಕ ಗೆದ್ದಿದ್ದರು. ಇದೀಗ ಈ ಸಾಲಿಗೆ ವಿನೇಶ್ ಫೋಗಟ್ ಕೂಡ ಸೇರಿಕೊಂಡಿದ್ದಾರೆ. ಈ ಪದಕದೊಂದಿಗೆ 2020ರ ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಭಾರತದ ಮೊದಲ ಕ್ರೀಡಾಪಟು ಅನ್ನೋ ಹಿರಿಮೆಗೆ ಪಾತ್ರರಾಗಿದ್ದಾರೆ.