ಭಾರತೀಯನಾಗಿದ್ದರೆ OK, ಆಸ್ಟ್ರೇಲಿಯನ್ನಾಗಿದ್ದೇ ತಪ್ಪಾಯ್ತು; ಸ್ಮಿತ್ ಕೋಚ್

By Web DeskFirst Published Sep 18, 2019, 7:16 PM IST
Highlights

ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಭಾರತೀಯನಾಗಿದ್ದರೆ ಸ್ವೀಕರಿಸುತ್ತಿದ್ದರು. ಆದರೆ ಆಸ್ಟ್ರೇಲಿಯನ್ನಾಗಿದ್ದೇ ತಪ್ಪಾಯ್ತು ಎಂದು ಸ್ಮಿತ್ ಬಾಲ್ಯದ ಕೋಚ್ ಹೇಳಿದ್ದಾರೆ. ಈ ಮಾತಿಗೆ ಆಸಿಸ್ ಅಭಿಮಾನಿಗಳು ಅಸಮಧಾನ ವ್ಯಕ್ತಪಡಿಸಿದ್ದಾರೆ.
 

ಸಿಡ್ನಿ(ಸೆ.18): ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವ್ ಸ್ಮಿತ್ ಐಸಿಸಿ ಟೆಸ್ಟ್ ರ್ಯಾಕಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದ್ದಾರೆ. ಇಂಗ್ಲೆಂಡ ವಿರುದ್ಧ ಆ್ಯಷಸ್ ಸರಣಿಯಲ್ಲಿ ಸ್ಮಿತ್ ಬ್ಯಾಟಿಂಗ್ ಶೈಲಿಗೆ ತವರಿನ ಅಭಿಮಾನಿಗಳಿಂದ ವಿರೋಧ ವ್ಯಕ್ತವಾಗಿದೆ. ಸ್ಮಿತ್ ಬ್ಯಾಟಿಂಗ್ ಟೆಕ್ನಿಕ್ ಉತ್ತಮವಾಗಿಲ್ಲ ಅನ್ನೋ ಅಭಿಪ್ರಾಯ ಮೂಡಿದೆ.

ಇದನ್ನೂ ಓದಿ: ICC ಟೆಸ್ಟ್ ರ‍್ಯಾಂಕಿಂಗ್ ಪ್ರಕಟ; ಅಗ್ರಸ್ಥಾನದಲ್ಲಿ ಸ್ಮಿತ್, ವಿರಾಟ!

ಆ್ಯಷಸ್ ಸರಣಿಯಲ್ಲಿ 774 ರನ್ ಸಿಡಿಸಿರುವ ಸ್ಮಿತ್ ಮೇಲಿನ ಟೀಕೆಗೆ ಬಾಲ್ಯದ ಕೋಚ್ ಟ್ರೆಂಡ್ ವುಡ್‌ಹಿಲ್ ಬೇಸರಗೊಂಡಿದ್ದಾರೆ. ಸ್ಮಿತ್ ಭಾರತೀಯನಾಗಿದ್ದರೆ, ಅಲ್ಲಿನ ಅಭಿಮಾನಿಗಳು ಸ್ಮಿತ್ ಟೆಕ್ನಿಕ್ ಸ್ವೀಕರಿಸುತ್ತಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಎಂ.ಎಸ್.ಧೋನಿ ವಿಭಿನ್ನ ಬ್ಯಾಟಿಂಗ್ ಟಿಕ್ನೆಕ್ ಹಾಗೂ ಶೈಲಿ ಹೊಂದಿದ್ದಾರೆ. ಅಲ್ಲಿನ ಅಭಿಮಾನಿಗಳಿಗೆ ಫಲಿತಾಂಶ, ರನ್ ಮುಖ್ಯ ಎಂದು ಟ್ರೆಂಟ್ ವುಡ್‌ಹಿಲ್ ಹೇಳಿದ್ದಾರೆ.

ಇದನ್ನೂ ಓದಿ: ಕೊಹ್ಲಿ-ಸ್ಮಿತ್ ಇಬ್ಬರಲ್ಲಿ ಯಾರು ಬೆಸ್ಟ್..?

ಆಸ್ಟ್ರೇಲಿಯಾ, ಇಂಗ್ಲೆಂಡ್ ಅಭಿಮಾನಿಗಳು ಟಿಕ್ನೆಕ್, ಶೈಲಿ ಎಂದು ಟೀಕೆ ಮಾಡುತ್ತಲೇ ಇರುತ್ತಾರೆ. ಇದು ಬೇಸರ ತಂದಿದೆ. ಹೀಗಾಗಿ ಒಂದು ವರ್ಷ ಕ್ರಿಕೆಟ್ ಆಡದೇ ಒಂದು ಸರಣಿಯಲ್ಲಿ ಮತ್ತೆ ನಂಬರ್ 1 ಪಟ್ಟ ಅಲಂಕರಿಸುವುದು ಸುಲಭತ ಮಾತಲ್ಲ. ಆದರೆ ಸ್ಮಿತ್ ಮಾಡಿ ತೋರಿಸಿದ್ದಾರೆ. ಇದಕ್ಕೆ ಹೆಮ್ಮೆ ಪಡಬೇಕು ಎಂದು ಕೋಚ್ ವುಡ್‌ಹಿಲ್ ಹೇಳಿದ್ದಾರೆ. ಕೋಚ್ ಹೇಳಿಕೆಗೆ ಆಸಿಸ್ ಅಭಿಮಾನಿಗಳು ಅಸಮಧಾನ ವ್ಯಕ್ತಪಡಿಸಿದ್ದಾರೆ.

click me!