#INDvSA 2ನೇ ಟಿ20: ಭಾರತಕ್ಕೆ 150 ರನ್ ಟಾರ್ಗೆಟ್ ನೀಡಿದ ಆಫ್ರಿಕಾ!

By Web DeskFirst Published Sep 18, 2019, 8:39 PM IST
Highlights

ಸೌತ್ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತದ ಯುವ ಬೌಲರ್‌ಗಳು ನಿರೀಕ್ಷಿತ ಪ್ರದರ್ಶನ ನೀಡಿದ್ದಾರೆ. ಇದೀಗ ಎಲ್ಲಾ ಜವಾಬ್ದಾರಿ ಬ್ಯಾಟ್ಸ್‌ಮನ್‌ಗಳ ಮೇಲಿದೆ. ಮೊಹಾಲಿ ಚೇಸಿಂಗ್‌ ಪಿಚ್ ಎಂದೇ ಹೆಸರುವಾಸಿಯಾಗಿದೆ. ಆದರೂ ಸೌತ್ ಆಫ್ರಿಕಾ ಬೌಲಿಂಗ್ ದಾಳಿ ಮುಂದೆ 150 ರನ್ ಟಾರ್ಗೆಟ್ ಭಾರತಕ್ಕೆ ಸವಾಲು.

ಮೊಹಾಲಿ(ಸೆ.18): ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಯಶಸ್ಸು ಸಾಧಿಸಿದೆ. ಬೃಹತ್ ಮೊತ್ತ ಪೇರಿಸುವ ಸೂಚನೆ ನೀಡಿದ್ದ ಸೌತ್ ಆಫ್ರಿಕಾ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ನಾಯಕ ಕ್ವಿಂಟನ್ ಡಿಕಾಕ್ ಹಾಗೂ ತೆಂಬಾ ಬವುಮಾ ಬ್ಯಾಟಿಂಗ್ ಪ್ರದರ್ಶನದಿಂದ ಮೊಹಾಲಿ ಪಂದ್ಯದಲ್ಲಿ ಸೌತ್ ಆಫ್ರಿಕಾ 5 ವಿಕೆಟ್ ನಷ್ಟಕ್ಕೆ 149 ರನ್ ಸಿಡಿಸಿದೆ.

ಇದನ್ನೂ ಓದಿ: ಭಾರತೀಯನಾಗಿದ್ದರೆ OK, ಆಸ್ಟ್ರೇಲಿಯನ್ನಾಗಿದ್ದೇ ತಪ್ಪಾಯ್ತು; ಸ್ಮಿತ್ ಕೋಚ್

ಟಾಸ್ ಗೆದ್ದ ಟೀಂ ಇಂಡಿಯಾ, ಎದುರಾಳಿ ಸೌತ್ ಆಫ್ರಿಕಾ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿತು. ರೀಝಾ ಹೆಂಡ್ರಿಕ್ಸ್ ಕೇವಲ 6 ರನ್ ಸಿಡಿಸಿ ಔಟಾದರು. ಕ್ವಿಂಟನ್ ಡಿಕಾಕ್ ಹಾಗೂ ತೆಂಬಾ ಬವುಮಾ ಜೊತೆಯಾಟದಿಂದ ಸೌತ್ ಆಫ್ರಿಕಾ ದಿಟ್ಟ ಹೋರಾಟ ನೀಡಿತು. ಡಿಕಾಕ್ ಆಕರ್ಷಕ ಅರ್ಧಶತಕ ಸಿಡಿಸಿದರು.

ಇದನ್ನೂ ಓದಿ: ಬಡ ಮಕ್ಕಳ ಹಾರ್ಟ್ ಸರ್ಜರಿ; 600 ಕಂದಮ್ಮಗಳಿಗೆ ಬೆಳಕಾದ ಗವಾಸ್ಕರ್!

ಡಿಕಾಕ್ 52 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲ ರಸಿ ವ್ಯಾಂಡರ್ ಡಸ್ಸೆನ್ 1 ರನ್ ಸಿಡಿಸಿ ಔಟಾದರು. ಡೇವಿಡ್ ಮಿಲ್ಲರ್ ಜೊತೆಗೂಡಿ ತೆಂಬಾ ಅತ್ಯುತ್ತಮ ಹೋರಾಟ ನೀಡಿದರು. ಬವುಮಾ 49 ರನ್ ಸಿಡಿಸಿ ಔಟಾದರು. ಡೇವಿಡ್ ಮಿಲ್ಲರ್ ಸಿಡಿಸಿದ 18 ರನ್ ಸಿಡಿಸಿ ನಿರ್ಗಮಿಸಿದರು. ಅಂತಿಮವಾಗಿ ಸೌತ್ ಆಫ್ರಿಕಾ 5 ವಿಕೆಟ್ ನಷ್ಟಕ್ಕೆ 149 ರನ್ ಸಿಡಿಸಿತು.

ಭಾರತದ ಪರ ದೀಪಕ್ ಚಹಾರ್ 2, ನವದೀಪ್ ಸೈನಿ 1 ಹಾಗೂ  ರವೀಂದ್ರ ಜಡೇಜಾ 1 ವಿಕೆಟ್ ಕಬಳಿಸಿದರು.

click me!