ವಿಶ್ವಕಪ್‌ ಸೋಲು: ಪಾಕ್ ಕೋಚ್‌ಗೆ ಗೇಟ್‌ಪಾಸ್

By Web DeskFirst Published Aug 8, 2019, 12:28 PM IST
Highlights

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಲು ಪಾಕಿಸ್ತಾನ ವಿಫಲವಾದ ಬೆನ್ನಲ್ಲೇ ಕೋಚ್‌ಗಳ ತಲೆದಂಡವಾಗಿದೆ. ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಪಾಕ್ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಲೀಗ್ ಹಂತದಲ್ಲೇ ಹೊರಬಿದ್ದಿತ್ತು. ಈ ಕುರಿತಾದ ವರದೆ ಇಲ್ಲಿದೆ ನೋಡಿ...

ಕರಾಚಿ[ಆ.08]: ಏಕದಿನ ವಿಶ್ವಕಪ್‌ ಸೆಮಿಫೈನಲ್‌ಗೇರದ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ತನ್ನ ಕೋಚಿಂಗ್‌ ಸಿಬ್ಬಂದಿಯನ್ನು ವಜಾಗೊಳಿಸಿದೆ. ಪ್ರಧಾನ ಕೋಚ್‌ ಮಿಕ್ಕಿ ಆರ್ಥರ್‌, ಬ್ಯಾಟಿಂಗ್‌ ಕೋಚ್‌ ಗ್ರಾಂಟ್‌ ಫ್ಲವರ್‌, ಬೌಲಿಂಗ್‌ ಕೋಚ್‌ ಅಜರ್‌ ಮೆಹಮೂದ್‌ ಹುದ್ದೆ ಕಳೆದುಕೊಂಡಿದ್ದಾರೆ. 

ಭಾರತೀಯಳನ್ನು ವರಿಸಲು ಸಜ್ಜಾದ ಪಾಕ್ ವೇಗಿ ಹಸನ್ ಆಲಿ!

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರ್ಥರ್‌, ‘ಪಿಸಿಬಿ ನಿರ್ಧಾರದಿಂದ ಆಘಾತ ಉಂಟಾಗಿದ್ದು, ಭಾರೀ ಬೇಸರವಾಗಿದೆ’ ಎಂದಿದ್ದಾರೆ. ಇನ್ನೆರಡು ವರ್ಷ ಅವಧಿಗೆ ಒಪ್ಪಂದವನ್ನು ವಿಸ್ತರಿಸುವಂತೆ ಆರ್ಥರ್‌ ಪಿಸಿಬಿಗೆ ಮನವಿ ಸಲ್ಲಿಸಿದ್ದರು.

ವಿಶ್ವದ ಶ್ರೇಷ್ಠ ತಂಡವನ್ನು ಕಟ್ತೀವಿ: ಪಾಕ್ ಪ್ರಧಾನಿ ಇಮ್ರಾನ್ ಖಾನ್

ಮಿಕ್ಕಿ ಆರ್ಥರ್‌ ಮಾರ್ಗದರ್ಶನದಲ್ಲಿ ಪಾಕಿಸ್ತಾನ ತಂಡವು 2017ರಲ್ಲಿ ಚೊಚ್ಚಲ ಬಾರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದು ಸಂಭ್ರಮಿಸಿತ್ತು. ಅಲ್ಲದೇ ಟಿ20 ಶ್ರೇಯಾಂಕದಲ್ಲಿ ಇದುವರೆಗೂ ನಂಬರ್ ಒನ್ ಸ್ಥಾನದಲ್ಲೇ ಮುಂದುವರೆದಿದೆ.  

click me!