PKL7:ಸೋಲಿನಿಂದ ಕಂಗೆಟ್ಟಿದ್ದ ಹರ್ಯಾಣಕ್ಕೆ ಗೆಲುವಿನ ಸಿಂಚನ!

By Web Desk  |  First Published Aug 7, 2019, 10:01 PM IST

ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಸತತ ಸೋಲುಗಳಿಂದ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಹರ್ಯಾಣ ಸ್ಟೀಲರ್ಸ್ ಭರ್ಜರಿ ಗೆಲುವಿನೊಂದಿಗೆ ಒಂದು ಸ್ಥಾನ ಮೇಲಕ್ಕೇರಿದೆ. ಪಾಟ್ನಾ ವಿರುದ್ಧ ಹರ್ಯಾಣ ತಂಡದ ಪ್ರದರ್ಶನ ಹೇಗಿತ್ತು? ಇಲ್ಲಿದೆ ಹೈಲೈಟ್ಸ್.
 


ಪಾಟಲೀಪುತ್ರ(ಆ.07): ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದ್ದ ಹರ್ಯಾಣ ಸ್ಟೀಲರ್ಸ್ ಕೊನೆಗೂ ಗೆಲುವಿನ ನಗೆ ಬೀರಿದೆ. ಪಾಟ್ನಾ ಪೈರೇಟ್ಸ್ ವಿರುದ್ಧ ನಡೆದ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಹರ್ಯಾಣ 35-26 ಅಂಕಗಳ ಗೆಲುವು ಸಾಧಿಸಿದೆ.  ಈ ಮೂಲಕ 4ನೇ ಪಂದ್ಯದಲ್ಲಿ ಮೊದಲ ಗೆಲುವು ಸಾಧಿಸಿದೆ. ಆದರೆ ಗೆಲುವಿನ ವಿಶ್ವಾಸದಲ್ಲಿದ್ದ ಪಾಟ್ನಾಗೆ ಆಘಾತ ಎದುರಾಗಿದೆ.

ಇದನ್ನೂ ಓದಿ: ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ ! 

Tap to resize

Latest Videos

ಪಂದ್ಯದ ಫಸ್ಟ್ ಹಾಫ್‌ನಲ್ಲಿ ಪಾಟ್ನಾ ಶುಭಾರಂಭ ಮಾಡಿತು. ಪ್ರದೀಪ್ ನರ್ವಾಲ್ ಯಶಸ್ವಿ ರೈಡ್ ಮೂಲಕ ಅಕೌಂಟ್ ಒಪನ್ ಮಾಡಿತು. ಆದರೆ ಹರ್ಯಾಣ ಸ್ಟೀಲರ್ಸ್ ಆರಂಭದಲ್ಲಿ ಖಾಲಿ ರೈಡ್‌ನೊಂದಿಗೆ ನಿರಾಸೆ ಅನುಭವಿಸಿತು. ಆರಂಭಿಕ 3 ಪ್ರಯತ್ನಗಳಲ್ಲಿ ಹರ್ಯಾಣ ಅಂಕ ಗಳಿಸಲಿಲ್ಲ. 2ನಿಮಿಷದ ಬಳಿಕ ಪಾಟ್ನಾ ಹಿಂದಿಕ್ಕಿದ ಹರ್ಯಾಣ 2-1 ಅಂಕಗಳಿಂದ ಮುನ್ನಡೆ ಪಡೆಯಿತು. 8ನೇ ನಿಮಿಷದಲ್ಲಿ ಪಾಟ್ನಾ ಅಂಕ ಕೇವಲ 2, ಆದರೆ ಹರ್ಯಾಣ 10 ಅಂಕಗಳಿಸೋ ಮೂಲಕ 8 ಅಂಕಗಳ ಮುನ್ನಡೆ ಕಾಯ್ದುಕೊಂಡಿತು.

ಇದನ್ನೂ ಓದಿ: ಪ್ರೊ ಕಬಡ್ಡಿ 7ನೇ ಆವೃತ್ತಿ ಹಾಗೂ ವಿಶೇಷತೆ!

ಮೊದಲಾರ್ಧಲ್ಲೇ ಪಾಟ್ನಾ ಮಂಕಾಯಿತು. ಅಂಕಗಳಿಸಲು ಪರದಾಡಿತು. ಆದರೆ ಹರ್ಯಾಣ ಮಾತ್ರ ನಿರಾಯಾಸವಾಗಿ ಪಾಯಿಂಟ್ಸ್ ಕಲೆ ಹಾಕಿತು.  ಫಸ್ಟ್ ಹಾಫ್ ಅಂತ್ಯದಲ್ಲಿ ಹರ್ಯಾಣ 17-9 ಅಂಕಗಳ ಮುನ್ನಡೆ ಕಾಯ್ದುಕೊಂಡಿತು. ಪ್ರತಿ ಪಂದ್ಯದಲ್ಲೂ ಉತ್ತಮ ಆರಂಭ ಪಡೆಯುತ್ತಿದ್ದ ಪಾಟ್ನಾ, ಹರ್ಯಾಣ ವಿರುದ್ದ ಅಬ್ಬರಿಸಲು ಸಾಧ್ಯವಾಗಲಿಲ್ಲ.

ದ್ವಿತಿಯಾರ್ಧದಲ್ಲೂ ಪಾಟ್ನಾ ಮುನ್ನಡೆ ಸಾಧಿಸಲಿಲ್ಲ. ಪಾಟ್ನಾ ಪ್ರಯತ್ನಗಳೂ ಕೈಗೂಡಲಿಲ್ಲ. ದ್ವಿತಿಯಾರ್ಧದ ಅಂತ್ಯದಲ್ಲಿ ಹರ್ಯಾಣ 35-26 ಅಂಕಗಳಿಂದ ಗೆಲುವು ಸಾಧಿಸಿತು. ಕಳೆದ 3 ಪಂದ್ಯಗಳಲ್ಲಿ ಸೋಲು ಕಂಡಿದ್ದ ಹರ್ಯಾಣ ಮೊದಲ ಗೆಲುವು ಕಂಡಿತು. ಇಷ್ಟೇ ಅಲ್ಲ ಅಂಕಪಟ್ಟಿಯಲ್ಲಿ 11ನೇ ಸ್ಥಾನಕ್ಕೆ ಜಿಗಿಯಿತು.
 

click me!