2019ರ ವಿಶ್ವಕಪ್ ಟೂರ್ನಿಗೆ 23 ಸದಸ್ಯರ ಪಾಕಿಸ್ತಾನ ತಂಡ ಪ್ರಕಟ

Published : Apr 05, 2019, 04:44 PM ISTUpdated : Apr 05, 2019, 04:49 PM IST
2019ರ ವಿಶ್ವಕಪ್ ಟೂರ್ನಿಗೆ 23 ಸದಸ್ಯರ ಪಾಕಿಸ್ತಾನ ತಂಡ ಪ್ರಕಟ

ಸಾರಾಂಶ

ಇಂಗ್ಲೆಂಡ್’ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಪಾಕಿಸ್ತಾನ ತಂಡವು ಸಮತೋಲಿತ ತಂಡ ಪ್ರಕಟಿಸಲು ಸಜ್ಜಾಗಿದೆ. ಇದೀಗ 23 ಸಂಭಾವ್ಯ ಆಟಗಾರರ ಹೆಸರನ್ನು ಅಂತಿಮಗೊಳಿಸಲಾಗಿದ್ದು, ಕೆಲವರಿಗೆ ಗೇಟ್’ಪಾಸ್ ಕೂಡಾ ನೀಡಿದೆ. ಅಷ್ಟಕ್ಕೂ ಸಂಭಾವ್ಯ ಪಟ್ಟಿಯಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವುದನ್ನು ನೀವೊಮ್ಮೆ ನೋಡಿ...

ಕರಾಚಿ[ಏ.05]: ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ಕ್ರಿಕೆಟ್ ಆಯ್ಕೆ ಸಮಿತಿಯು 23 ಆಟಗಾರರ ಹೆಸರನ್ನು ಅಂತಿಮಗೊಳಿಸಿದ್ದು, ತಮ್ಮ ಫಿಟ್ನೆಸ್ ಸಾಬೀತುಪಡಿಸಿಲು ಸೂಚಿಸಿದೆ.  

ಇಲ್ಲಿದೆ 2019ರ ಕ್ರಿಕೆಟ್ ವಿಶ್ವಕಪ್ ಸಂಪೂರ್ಣ ವೇಳಾಪಟ್ಟಿ

ಏಪ್ರಿಲ್ 15-16ರಂದು ಲಾಹೋರ್’ನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯಲ್ಲಿ ನಡೆಯುವ ಪಿಟ್ನೆಸ್’ನಲ್ಲಿ ಪಾಲ್ಗೊಳ್ಳುವಂತೆ ಈ ಎಲ್ಲಾ 23 ಆಟಗಾರರಿಗೆ ಸೂಚಿಸಲಾಗಿದೆ. ಇದಾದ ಬಳಿಕ ಏಪ್ರಿಲ್ 18ರಂದು ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡವನ್ನು ಆಯ್ಕೆ ಸಮಿತಿ ಪ್ರಕಟಿಸಲಿದೆ.

ಏಕದಿನ ವಿಶ್ವಕಪ್ ಟೂರ್ನಿಗೆ ಬಲಿಷ್ಠ ತಂಡ ಪ್ರಕಟಿಸಿದ ನ್ಯೂಜಿಲೆಂಡ್

ಪಾಕಿಸ್ತಾನದ ಅನುಭವಿ ವಿಕೆಟ್ ಕೀಪರ್ ಉಮರ್ ಅಕ್ಮಲ್, 2015ರ ವಿಶ್ವಕಪ್’ನಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದ ವಹಾಬ್ ರಿಯಾಜ್ ಅಂತಿಮ 23 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ಇನ್ನು ಇತ್ತೀಚೆಗಷ್ಟೇ ಪಾಕಿಸ್ತಾನ ತಂಡವು ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ 5-0 ಅಂತರದಲ್ಲಿ ಹೀನಾಯ ಸೋಲು ಕಂಡಿತ್ತು. ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿದ್ದ ಕೆಲ ಯುವ ಕ್ರಿಕೆಟಿಗರು ಸಂಭಾವ್ಯ ಪಟ್ಟಿಯಲ್ಲಿ ಸ್ಥಾನಪಡೆಯುವಲ್ಲಿ ಸಫಲವಾಗಿದ್ದಾರೆ.

ವಿಶ್ವಕಪ್ 2019: ಇಲ್ಲಿದೆ ಟೀಂ ಇಂಡಿಯಾ 15 ಸದಸ್ಯರ ಸಂಭಾವ್ಯ ತಂಡ!

ಪಾಕಿಸ್ತಾನದ ಸಂಭಾವ್ಯ ಪಟ್ಟಿ ಹೀಗಿದೆ:
ಸರ್ಫರಾಜ್ ಅಹಮ್ಮದ್[ನಾಯಕ], ಆಬಿದ್ ಅಲಿ, ಆಸಿಫ್ ಅಲಿ, ಬಾಬರ್ ಅಜಂ, ಪಾಹೀಮ್ ಅಶ್ರಫ್, ಫಖರ್ ಜಮಾನ್, ಹ್ಯಾರಿಸ್ ಸೋಹೆಲ್, ಹಸನ್ ಅಲಿ, ಇಮಾದ್ ವಾಸೀಂ, ಇಮಾಮ್ ಉಲ್ ಹಕ್, ಜುನೈದ್ ಖಾನ್, ಮೊಹಮ್ಮದ್ ಅಬ್ಬಾಸ್, ಮೊಹಮ್ಮದ್ ಅಮೀರ್, ಮೊಹಮ್ಮದ್ ಹಫೀಜ್, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಶಾದಾಬ್ ಖಾನ್, ಶಹೀನ್ ಶಾ ಅಫ್ರಿದಿ, ಶಾನ್ ಮಸೂದ್, ಶೋಯೆಬ್ ಮಲಿಕ್, ಉಸ್ಮಾನ್ ಶಿನ್ವಾರಿ, ಯಾಸಿರ್ ಶಾ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ತಂಡ ಪ್ರತಿನಿಧಿಸಿದ ಪಾಕಿಸ್ತಾನ ಕಬಡ್ಡಿ ಪಟು, ಇಸ್ಲಾಮಾಬಾದ್‌ನಲ್ಲಿ ಕೋಲಾಹಲ
ಐಪಿಎಲ್ ಹರಾಜಿನ ಬಳಿಕ 4 ಬಲಿಷ್ಠ ತಂಡ ಆಯ್ಕೆ ಮಾಡಿದ ಆರ್. ಅಶ್ವಿನ್; ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕಿಲ್ಲ ಸ್ಥಾನ!