ಫುಟ್ಬಾಲ್ ದಿಗ್ಗಜ ಪೀಲೆ ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿದ್ದಾರೆ. ಪ್ಯಾರಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 78 ವರ್ಷ ಮಾಜಿ ಫುಟ್ಬಾಲ್ ಪಟು ಆರೋಗ್ಯ ಸ್ಥಿತಿ ಹೇಗಿದೆ? ಇಲ್ಲಿದೆ ವಿವರ.
ಪ್ಯಾರಿಸ್(ಏ.05): ಮೊತ್ರಕೋಶದ ಸೋಂಕಿನಿಂದ ಬಳಲುತ್ತಿರುವ ಫುಟ್ಬಾಲ್ ಲೋಕದ ದಂತಕತೆ, ದಿಗ್ಗಜ ಪೀಲೆ ಆಸ್ಪತ್ರೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ವಿಶೇಷ ವೈದ್ಯರ ತಂಡ ಪೀಲೆಗೆ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಆರೋಗ್ಯ ಸ್ಥಿರವಾಗಿದ್ದು, ಶೀಘ್ರದಲ್ಲೇ ಡಿಸ್‌ಚಾರ್ಜ್ ಆಗಲಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. 78 ವರ್ಷದ ಪೀಲೆ, ಇತ್ತೀಚೆಗೆ ಪೀಲೆ ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿ ಗುಣಮುಖರಾಗಿದ್ದರು.
ಇದನ್ನೂ ಓದಿ: ಫುಟ್ಬಾಲ್ ದಂತಕತೆ ಬ್ರೆಜಿಲ್‌ನ ಪೀಲೆ ಕುರಿತು ನಿಮಗೆಷ್ಟು ಗೊತ್ತು?
ಪ್ಯಾರಿಸ್‌ನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪೀಲೆ, ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. 2016ರ ರಿಯೋ ವಿಶ್ವಕಪ್ ಟೂರ್ನಿ ಆರಂಭದಲ್ಲೂ ಪೀಲೆ ಅನಾರೋಗ್ಯಕ್ಕೆ ತುತ್ತಾಗಿದ್ದರು. 2014ರಲ್ಲಿ ಕಿಡ್ನಿ ಸಮಸ್ಯೆಗೆ ತುತ್ತಾಗಿದ್ದ ಪೀಲೆ ಸುದೀರ್ಘ ಚಿಕಿತ್ಸೆ ಬಳಿಕ ಗುಣುಖರಾಗಿದ್ದರು.
ಇದನ್ನೂ ಓದಿ: ಫಿಫಾ ವಿಶ್ವಕಪ್ 2018: ನೆನಪಿದೆಯಾ ಪೀಲೆ ಸಿಡಿಸಿದ ಮೊದಲ ವಿಶ್ವಕಪ್ ಗೋಲು?
ವಿಶ್ವದ ಶ್ರೇಷ್ಠ ಆಟಗಾರ ಪೀಲೆ ಬ್ರೆಜಿಲ್ ಪರ 1958, 1962 ಹಾಗೂ 1970 ಫಿಫಾ ವಿಶ್ವಕಪ್ ಗೆಲುವಿನನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಪೀಲೆ ಒಟ್ಟು1,363 ಪಂದ್ಯಗಳಿಂದ 1,281 ಗೋಲು ಸಿಡಿಸಿದ್ದಾರೆ. ಈ ಮೂಲಕ ದಾಖಲೆ ಬರೆದಿದ್ದಾರೆ. ಇದೀಗ ಪೀಲೆ ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿರೋ ಸುದ್ದಿ ಫುಟ್ಬಾಲ್ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.