
ಬೆಂಗಳೂರು(ಏ.05): 12ನೇ ಆವೃತ್ತಿ ಐಪಿಎಎಲ್ ಟೂರ್ನಿಯಲ್ಲಿ ಸತತ 4 ಸೋಲು ಅನುಭವಿಸಿರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೀಗ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ದದ ಅಗ್ನಿಪರೀಕ್ಷೆಗೆ ಮುಂದಾಗಿದೆ. ಕಳಪೆ ಫಾರ್ಮ್‌ನಲ್ಲಿರುವ RCB ಆಟಗಾರರು ಇಂದು(ಏ.05) ಗೆಲುವಿಗಾಗಿ ಕಠಿಣ ಹೋರಾಟ ಮಾಡಲಿದೆ. ಆದರೆ ಅಭಿಮಾನಿಗಳಲ್ಲಿ RCB ಗೆಲುವಿನ ವಿಶ್ವಾಸ ಕ್ಷೀಣಿಸಿದೆ.
ಇದನ್ನೂ ಓದಿ: ಇಂದಿನ RCB ಪರಿಸ್ಥಿತಿಗೆ ಕೊಹ್ಲಿ ಕಾರಣಾನಾ..?
ಕಳೆದ ಪಂದ್ಯಕ್ಕೆ ಮಾರ್ಕಸ್ ಸ್ಟೊಯ್ನಿಸ್ ತಂಡ ಸೇರಿಕೊಂಡರು ಫಲಿತಾಂಶದಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಸೋಲಿನಿಂದಾಗಿ RCB ತಂಡದಲ್ಲಿ ಕೆಲ ಬದಲಾವಣೆಯಾಗಲಿದೆ. ಬ್ಯಾಟ್ಸ್‌ಮನ್‌ಗಳು ಒಂದಂಕಿಗೆ ಪೆವಿಲಿಯನ್ ಸೇರಿಕೊಳ್ಳುತ್ತಿದ್ದರೆ, ಬೌಲರ್‌ಗಳು ದುಬಾರಿಯಾಗುತ್ತಿದ್ದಾರೆ. ಇಂದಿನ ಪಂದ್ಯಕ್ಕೆ RCB ಸಂಭವನೀಯ ತಂಡ ಇಲ್ಲಿದೆ.
ಇದನ್ನೂ ಓದಿ: RCB ಪಡೆಯನ್ನು ಮೂರು ಬಾರಿ ಸೋಲಿಸಿದ ಕನ್ನಡಿಗ.!
RCB ಸಂಭವನೀಯ ತಂಡ:
ವಿರಾಟ್ ಕೊಹ್ಲಿ(ನಾಯಕ) ಪಾರ್ಥೀವ್ ಪಟೇಲ್, ಮಾರ್ಕಸ್ ಸ್ಟೊಯ್ನಿಸ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಮೊಯಿನ್ ಆಲಿ, ಆಕ್ಷದೀಪ್ ನಾಥ್, ವಾಶಿಂಗ್ಟನ್ ಸುಂದರ್, ನಥನ್ ಕೌಲ್ಟರ್ ನೈಲ್, ಯಜುವೇಂದ್ರ ಚೆಹಾಲ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್
KKR ಸಂಭವನೀಯ ತಂಡ:
ಕ್ರಿಸ್ ಲಿನ್, ಸುನಿಲ್ ನರೈನ್, ರಾಬಿನ್ ಉತ್ತಪ್ಪ, ನಿತೀಶ್ ರಾಣ, ಆ್ಯಂಡ್ರೆ ರಸೆಲ್, ದಿನೇಶ್ ಕಾರ್ತಿಕ್, ಶುಬ್‌ಮಾನ್ ಗಿಲ್, ಪಿಯೂಷ್ ಚಾವ್ಲಾ, ಕುಲ್ದೀಪ್ ಯಾದವ್, ಲೊಕಿ ಫರ್ಗ್ಯುಸನ್, ಪ್ರಸಿದ್ಧ ಕೃಷ್ಣ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.