CRICKET

ಸರಣಿ ಸೋತರೂ ಟೀಂ ಇಂಡಿಯಾದ 5 ಬೌಲರ್ಸ್ ಮಾಡಿದ್ರು ಅಪರೂಪದ ದಾಖಲೆ..!

4, Sep 2018, 5:12 PM IST

ಬೆಂಗಳೂರು[ಸೆ.04]: ಭಾರತ-ಇಂಗ್ಲೆಂಡ್ ನಡುವಿನ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿಯಿರುವಂತೆಯೇ ಇಂಗ್ಲೆಂಡ್ ಸರಣಿ ಕೈವಶ ಮಾಡಿಕೊಂಡಿದೆ. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್’ಗಳು ಕೂಡಾ ನಿರೀಕ್ಷಿತ ಪ್ರದರ್ಶನ ತೋರಲು ಸಫಲವಾಗಲಿಲ್ಲ. ಆದರೆ ಇಂಗ್ಲೆಂಡ್’ಗೆ ಭಾರತ ಪ್ರಬಲ ಹೋರಾಟ ನೀಡಲು ಕಾರಣವಾಗಿದ್ದು ಟೀಂ ಇಂಡಿಯಾದ ಬೌಲರ್’ಗಳು. ಭಾರತದ ಐವರು ಬೌಲರ್’ಗಳು ತಲಾ 10 ವಿಕೆಟ್ ಪಡೆಯಲು ಸಫಲರಾಗಿದ್ದಾರೆ.