ಅಧುನಿಕ ಅರ್ಜುನ ಈ ಬಿಲ್ವಿದ್ಯ ಪ್ರವೀಣ: ತಲೆಕೆಳಗಾಗಿ ನಿಂತು ಕಾಲಲ್ಲೇ ಬಿಡ್ತಾನೆ ಬಾಣ: ವೈರಲ್ ವೀಡಿಯೋ

By Anusha KbFirst Published Aug 6, 2023, 3:29 PM IST
Highlights

ಪುಟ್ಟ ಬಿಲ್ವಿದ್ಯ ಪ್ರವೀಣ ಹಾಗೂ ಯೋಗಪಟು ಬಾಲಕನ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಜನ ಈ ಬಾಲಕನನ್ನು ಆಧುನಿಕ ಪ್ರವೀಣ ಎನ್ನುತ್ತಿದ್ದಾರೆ. 

ಪ್ರತಿಭೆ ಯಾರ ಸ್ವತ್ತು ಅಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಭಿನ್ನ ಪ್ರತಿಭೆಗಳನ್ನು ಪ್ರದರ್ಶಿಸುವ ಪ್ರತಿಭಾಶಾಲಿ ಮಕ್ಕಳ ವೀಡಿಯೋಗಳನ್ನು ನಾವು ಆಗಾಗ ನೋಡುತ್ತಲೇ ಇರುತ್ತೇವೆ  ಅದೇ ರೀತಿ ಇಲ್ಲೊಂದು ವೀಡಿಯೋದಲ್ಲಿ ಪುಟ್ಟ ಬಿಲ್ವಿದ್ಯ ಪ್ರವೀಣ ಹಾಗೂ ಯೋಗಪಟು ಬಾಲಕನ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.   ಅಂದಹಾಗೆ ತಲೆಕೆಳಗಾಗಿ ನಿಂತು ಕಾಲಿನಿಂದಲೇ ಬಾಣ ಬಿಡುತ್ತಿರುವ ಈ ಬಾಲಕನ ಹೆಸರು ರುದ್ರಪ್ರತಾಪ್, ಈ ಬಾಲಕ ಜಿಮ್ನಾಸ್ಟಿಕ್‌ನಲ್ಲಿಯೂ  ಪ್ರವೀಣನಾಗಿದ್ದು, ವೀಡಿಯೋದಲ್ಲಿ ಕಾಣಿಸುವಂತೆ ಒಂದು ಪಲ್ಟಿ ಹೊಡೆದು ತಲೆಕೆಳಗಾಗಿ ನಿಂತು ದೇಹವನ್ನು ಬಿಲ್ಲಿನಂತೆ ಬಾಗಿಸುವ ಈತ ಕಾಲಿನಲ್ಲೇ ನಿಂತು ಬಾಣ ಬಿಡುತ್ತಾನೆ. ಅದು ಆತನಂತೆ ನಿರ್ದಿಷ್ಟವಾದ ಗುರಿ ತಲುಪಿ ದೂರದಲ್ಲಿ ನಿಲ್ಲಿಸಿದ ಬಲೂನಿಗೆ ತಾಗಿ ಬಾಲೂನು ಒಡೆದು ಹೋಗುತ್ತದೆ. 

ಈ ವೀಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಸ್ವತಃ ಬಾಲಕ ರುದ್ರ ಪ್ರತಾಪ್ ಇನ್ಸ್ಟಾಗ್ರಾಮ್‌ ಪೇಜ್‌ನಿಂದ ಅಪ್ಲೋಡ್ ಮಾಡಲಾಗಿದ್ದು, ವೀಡಿಯೋ ನೋಡಿದ ಅನೇಕರು ಬಾಲಕನ ಪ್ರತಿಭೆಗೆ ಹುಬ್ಬೇರಿಸಿದ್ದಾರೆ. ಸಾಮಾನ್ಯವಾಗಿ ನೇರವಾಗಿ ನಿಂತು ಬಾಣ ಬಿಡುವಾಗಲೇ ಗುರಿ ತಲುಪುವುದು ಕಷ್ಟದ ಕೆಲಸ, ಬಿಲ್ವಿದ್ಯೆಗೆ ಸಾಕಷ್ಟು ಏಕಾಗ್ರತೆ ಬೇಕಾಗಿದ್ದು, ಸ್ವಲ್ಪ ಅತ್ತಿತ್ತ ಆದರೂ ಬಿಟ್ಟ ಬಾಣ ಇನ್ನೆಲ್ಲೋ ಹೋಗಿ ತೂರುವುದು ಹೀಗಿರುವಾಗ ಈ ಬಾಲಕ ತಲೆಕೆಳಗಾಗಿ ನಿಂತು ಬಾಣ ಬಿಡುವ ರೀತಿಗೆ ಅನೇಕರು ಶಹಭಾಷ್ ಎಂದಿದ್ದಾರೆ.

ತಲೆಕೆಳಗಾಗಿ ನಿಂತು ಕಾಲುಗಳಿಂದ ಬಾಣದ ಪ್ರಯೋಗ, ಜಮ್ನಾಸ್ಟ್ ಹುಡುಗಿಯ ಬಿಲ್ವಿದ್ಯೆ ಪ್ರದರ್ಶನ

ಬಾಲಕನ ಸಾಧನೆ ನೋಡಿದ ಅನೇಕರು ಶ್ಲಾಘನೆ ವ್ಯಕ್ತಪಡಿಸಿದ್ದು,  ಈ ಸಣ್ಣವಯಸ್ಸಿನಲ್ಲಿ ಈ ಇಂತಹ ಸಾಧನೆ ಮೆಚ್ಚಬೇಕಾದದ್ದೆ, ನಿನ್ನ ವಯಸ್ಸಿನ ಅನೇಕರು ಸ್ಮಾರ್ಟ್‌ಫೋನ್‌ ನೋಡುತ್ತಾ ರೀಲ್ಸ್ ಮಾಡ್ತಾ ಕಾಲ ಕಳಿತಿದ್ದಾರೆ. ಆದರೆ ನೀನು ಬಿಲ್ವಿದ್ಯ ಪ್ರವೀಣ ಆಗಿದ್ದೀಯಾ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.  ಮತ್ತೊಬ್ಬರು ಇದು ನಿಜವಾದ ಪ್ರತಿಭೆ ಎಂದು ಕಾಮೆಂಟ್ ಮಾಡಿದ್ದಾರೆ.  ಮತ್ತೆ ಕೆಲವರು ಈತನನ್ನು ಕಲಿಯುಗದ ಅರ್ಜುನ ಎಂದು ಶ್ಲಾಘಿಸಿದ್ದಾರೆ. ಈ ಹುಡುಗ ಮುಂದೆ ತನ್ನ ಮನೆ ಊರು, ದೇಶದ ಕೀರ್ತಿ ಬೆಳಗಲಿದ್ದಾನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಳ್ಳೆಯ ಕೆಲಸ ಕಂದ ನೀನು ದೇಶಕ್ಕೆ ಮುಂದೆ ಚಿನ್ನ ತರುವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.  ಹಾಗೆಯೇ ತುಂಬಾ ಜನ ಈತ ಮಹಾರಥಿ ಅರ್ಜುನ್ ಎಂದು ಕಾಮೆಂಟ್ ಮಾಡಿದ್ದಾರೆ. 

ನೇಪಾಳದಲ್ಲಿ ಸುರಪುರದ ಬಿಲ್ವಿದ್ಯೆ ಪಟುಗಳ ಮಿಂಚು: ಬಡತನದಲ್ಲೆ ಅರಳಿದ ಪ್ರತಿಭೆಗಳಿಗೆ ರಾಜೂಗೌಡ ಶಹಬ್ಬಾಶ್

ಈತನ ಇನ್ಸ್ಟಾಗ್ರಾಮ್‌  ಪೇಜ್‌ ನಲ್ಲಿ ಆತನ ಹಲವು ಯೋಗ ಪ್ರಾವೀಣ್ಯದ ಹಾಗೂ ಬಿಲ್ವಿದ್ಯೆಯ ಸಾಕಷ್ಟು ವೀಡಿಯೋಗಳಿದ್ದು, ಪ್ರತಿಯೊಂದು ವೀಡಿಯೋವೂ ಸ್ಪೂರ್ತಿ ನೀಡುವಂತಿದೆ. 

click me!