ಅಹಮದಾಬಾದ್‌ ಬಳಿಕ ಈಗ ವಿಶ್ವಕಪ್ ವೇಳಾಪಟ್ಟಿ ಬದಲಿಗೆ ಕೋಲ್ಕತಾ ಮನವಿ..! ಕಾರಣ ಏನು?

Published : Aug 06, 2023, 01:54 PM IST
ಅಹಮದಾಬಾದ್‌ ಬಳಿಕ ಈಗ ವಿಶ್ವಕಪ್ ವೇಳಾಪಟ್ಟಿ ಬದಲಿಗೆ ಕೋಲ್ಕತಾ ಮನವಿ..! ಕಾರಣ ಏನು?

ಸಾರಾಂಶ

ಒಂದು ವೇಳೆ ಬಿಸಿಸಿಐ ಹಾಗೂ ಐಸಿಸಿ ಬೇರೆ ದಿನದಂದು ಪಂದ್ಯ ನಡೆಸಲು ಒಪ್ಪಿದರೆ, ಮೂಲ ವೇಳಾಪಟ್ಟಿಯಲ್ಲಿ 3ನೇ ಬಾರಿಗೆ ಪಾಕಿಸ್ತಾನ ಪಂದ್ಯ ಬದಲಾದಂತೆ ಆಗುತ್ತದೆ. 

ಕೋಲ್ಕತಾ(ಆ.06): ಬಂಗಾಳ ಕ್ರಿಕೆಟ್ ಸಂಸ್ಥೆ(ಸಿಎಬಿ) ಶನಿವಾರ ನವೆಂಬರ್ 12ರಂದು ನಡೆಯಬೇಕಿರುವ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಿನ ವೇಳಾಪಟ್ಟಿಯನ್ನು ಬದಲಿಸುವಂತೆ ಐಸಿಸಿಗೆ ಮನವಿ ಮಾಡಿದೆ. ಆ ದಿನದಂದು ದುರ್ಗಾ ಪೂಜೆ ಇರುವ ಕಾರಣ, ಭದ್ರತಾ  ಸಮಸ್ಯೆಗಳು ಎದುರಾಗಬಹುದು ಎಂದು ಸ್ಥಳೀಯ ಪೊಲೀಸರು ಎಚ್ಚರಿಸಿರುವ ಕಾರಣ, ಸಿಎಬಿ ಮನವಿ ಸಲ್ಲಿಸಿದೆ.

ಒಂದು ವೇಳೆ ಬಿಸಿಸಿಐ ಹಾಗೂ ಐಸಿಸಿ ಬೇರೆ ದಿನದಂದು ಪಂದ್ಯ ನಡೆಸಲು ಒಪ್ಪಿದರೆ, ಮೂಲ ವೇಳಾಪಟ್ಟಿಯಲ್ಲಿ 3ನೇ ಬಾರಿಗೆ ಪಾಕಿಸ್ತಾನ ಪಂದ್ಯ ಬದಲಾದಂತೆ ಆಗುತ್ತದೆ. ಈ ಮೊದಲು ಆಗಸ್ಟ್‌ 15ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಭಾರತ -ಪಾಕಿಸ್ತಾನ ಪಂದ್ಯವನ್ನು ನವರಾತ್ರಿ ಸಂಭ್ರಮಾಚರಣೆ ಕಾರಣ ಅಕ್ಟೋಬರ್ 14ರಂದು ನಡೆಸುವಂತೆ ಗುಜರಾತ್ ಕ್ರಿಕೆಟ್ ಸಂಸ್ಥೆ ಮನವಿ ಮಾಡಿತ್ತು. ಇದರಿಂದಾಗಿ ಅಕ್ಟೋಬರ್ 12ರಂದು ಹೈದರಾಬಾದ್‌ನಲ್ಲಿ ನಡೆಯಬೇಕಿದ್ದ ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಪಂದ್ಯವನ್ನು ಅಕ್ಟೋಬರ್ 10ರಂದು ನಡೆಸಲು ಐಸಿಸಿ ಹಾಗೂ ಬಿಸಿಸಿಐ ಯೋಜಿಸಿವೆ. 2023ರ ಏಕದಿನ ವಿಶ್ವಕಪ್ ಟೂರ್ನಿಯ ಪರಿಷ್ಕೃತ ವೇಳಾಪಟ್ಟಿ ಮುಂದಿನವಾರ ಬಿಡುಗಡೆಯಾಗುವ ಸಾಧ್ಯತೆಯಿದೆ.

ವಿರಾಟ್​ ಕೊಹ್ಲಿ ವಾಚ್​ಗಳ ಮೇಲೆ ಎಲ್ಲರ ಕಣ್ಣು..! ಕೊಹ್ಲಿ ಕಟ್ಟುವ ವಾಚ್‌ನಲ್ಲಿ ಸಾವಿರಾರು ಜನ ಜೀವನ ಮಾಡಬಹುದು..!

₹8,200 ಕೋಟಿ ನಿರೀಕ್ಷೆಯಲ್ಲಿ ಬಿಸಿಸಿಐ!

ನವದೆಹಲಿ: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಮಾಧ್ಯಮ ಪ್ರಸಾರ ಹಕ್ಕು ಮಾರಾಟದಿಂದ ಬರೋಬ್ಬರಿ 1 ಬಿಲಿಯನ್‌ ಡಾಲರ್‌(ಅಂದಾಜು 8200 ಕೋಟಿ ರು.) ಗಳಿಸುವ ನಿರೀಕ್ಷೆಯಲ್ಲಿದೆ. 2023ರಿಂದ 2028ರ ಅವಧಿಯಲ್ಲಿ ಭಾರತದಲ್ಲಿ ನಡೆಯಲಿರುವ ಒಟ್ಟು 88 ಪಂದ್ಯಗಳ(25 ಟೆಸ್ಟ್‌, 27 ಏಕದಿನ, 36 ಟಿ20) ಪ್ರಸಾರ ಹಕ್ಕು ಖರೀದಿಸಲು ಈಗಾಗಲೇ ಟೆಂಡರ್‌ ಕರೆಯಲಾಗಿದ್ದು, ಸದ್ಯದಲ್ಲೇ ಇ-ಹರಾಜು ಪ್ರಕ್ರಿಯೆ ನಡೆಯಲಿದೆ. ಕಳೆದ ಅವಧಿ(2018-23)ಯಲ್ಲಿ ಬಿಸಿಸಿಐ 944 ಮಿಲಿಯನ್‌(2018ರ ಅಮೆರಿಕನ್‌ ಡಾಲರ್‌ ಮೌಲ್ಯದಲ್ಲಿ 6138 ಕೋಟಿ ರು.) ಗಳಿಸಿತ್ತು.

Ind vs WI 2nd T20I: ಐಪಿಎಲ್‌ ಸ್ಟಾರ್ಸ್‌ಗೆ ಇಂದು ಪುಟಿದೇಳುವ ಗುರಿ..!

ಭಾರತ ಏಕದಿನ ಸರಣಿಗೆ ಕಮಿನ್ಸ್‌ ಅಲಭ್ಯ ಸಾಧ್ಯತೆ

ಸಿಡ್ನಿ: ಮಣಿಕಟ್ಟು ಗಾಯಕ್ಕೆ ತುತ್ತಾಗಿರುವ ಆಸ್ಟ್ರೇಲಿಯಾ ನಾಯಕ ಪ್ಯಾಟ್‌ ಕಮಿನ್ಸ್‌ ಸೆ.22ರಿಂದ ಆರಂಭಗೊಳ್ಳಲಿರುವ ಭಾರತ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ. ಇಂಗ್ಲೆಂಡ್‌ ವಿರುದ್ಧದ ಆ್ಯಶಸ್‌ ಸರಣಿಯ 5ನೇ ಪಂದ್ಯದ ಮೊದಲ ದಿನವೇ ಕಮಿನ್ಸ್‌ ಗಾಯಗೊಂಡಿದ್ದರು. ಇದರ ಹೊರತಾಗಿಯೂ ಇಡೀ ಪಂದ್ಯದಲ್ಲಿ ಆಡಿದ್ದರು. ಸದ್ಯ ಅವರ ಗಾಯದ ಪ್ರಮಾಣದ ಬಗ್ಗೆ ಕ್ರಿಕೆಟ್‌ ಆಸ್ಟ್ರೇಲಿಯಾ ಯಾವುದೇ ಮಾಹಿತಿ ಒದಗಿಸಿಲ್ಲ. ಒಂದು ವೇಳೆ ಕಮಿನ್ಸ್‌ ಗೈರಾದರೆ ಮಿಚೆಲ್ ಮಾರ್ಷ್‌ಗೆ ಸರಣಿಯಲ್ಲಿ ನಾಯಕತ್ವದ ಹೊಣೆ ನೀಡುವ ಸಾಧ್ಯತೆ ಇದೆ.

ರಾಜಾಜಿನಗರ ಕ್ರಿಕೆಟರ್ಸ್‌ಗೆ ಕೆಎಸ್‌ಸಿಎ ಟಿ20 ಕಪ್‌

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಆಯೋಜಿಸಿದ್ದ ಜಿ.ಕಸ್ತೂರಿರಂಗನ್‌ ಸ್ಮರಣಾರ್ಥ ಟಿ20 ಟೂರ್ನಿಯಲ್ಲಿ ಬೆಂಗಳೂರಿನ ರಾಜಾಜಿನಗರ ಕ್ರಿಕೆಟರ್ಸ್‌ ತಂಡ ಚಾಂಪಿಯನ್‌ ಆಗಿದೆ. ಶನಿವಾರ ನಡೆದ ಫೈನಲ್‌ನಲ್ಲಿ ರಾಜಾಜಿನಗರ ತಂಡ ಕೋಲ್ಸ್‌ ಕ್ರಿಕೆಟ್ ಕ್ಲಬ್‌ ವಿರುದ್ಧ 5 ವಿಕೆಟ್‌ ಜಯ ಸಾಧಿಸಿತು. ಕೋಲ್ಸ್‌ ಕ್ಲಬ್‌ 20 ಓವರಲ್ಲಿ 7 ವಿಕೆಟ್‌ಗೆ 171 ರನ್‌ ಗಳಿಸಿದರೆ, ರಾಜಾಜಿನಗರ ತಂಡ 18 ಓವರಲ್ಲಿ 5 ವಿಕೆಟ್‌ಗೆ 172 ರನ್‌ ಕಲೆಹಾಕಿ ಜಯಿಸಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?
ಸಂಜು ಸ್ಯಾಮ್ಸನ್ ಔಟ್, ಶುಭ್‌ಮನ್ ಗಿಲ್ ಇನ್: ಅಸಲಿ ಸತ್ಯ ಬಿಚ್ಚಿಟ್ಟ ರವಿಚಂದ್ರನ್ ಅಶ್ವಿನ್!