ಟೀಂ ಇಂಡಿಯಾದಿಂದ ಡ್ರಾಪ್ ಆಗಿರುವ ಮಯಾಂಕ್, ಸದ್ಯ ಅದ್ಭುತ ಫಾರ್ಮ್ನಲ್ಲಿದ್ದಾರೆ. ನಂಬರ್ 7 ಜೆರ್ಸಿ ಸದ್ಯ ಅವರ ಕೆರಿಯರ್ ಅನ್ನೇ ಬದಲಿಸಿದೆ.
ಬೆಂಗಳೂರು(ಆ.06) ಮಯಾಂಕ್ ಅಗರ್ವಾಲ್, ಕರ್ನಾಟಕದ ಓಪನಿಂಗ್ ಬ್ಯಾಟರ್ ಸದ್ಯ ಟೀಂ ಇಂಡಿಯಾದಿಂದ ಡ್ರಾಪ್ ಆಗಿದ್ದಾರೆ. ಭಾರತ ಪರ 21 ಟೆಸ್ಟ್ ಮತ್ತು ಐದು ಒನ್ಡೇ ಮ್ಯಾಚ್ಗಳನ್ನಾಡಿರುವ 32 ವರ್ಷದ ಅಗರ್ವಾಲ್, ಕಳಪೆ ಫಾರ್ಮ್ನಿಂದಾಗಿ ಟೀಮ್ನಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಐಪಿಎಲ್ನಲ್ಲೂ ಅವರಾಟ ಅಷ್ಟಕಷ್ಟೆ. ಆದ್ರೆ ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಮಾತ್ರ ಮಯಾಂಕ್ ಅದ್ಭುತ ಆಟವಾಡ್ತಿದ್ದಾರೆ. ಸೌತ್ ಝೋನ್ ಟೀಮ್ಗೆ ಎರಡು ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ.
ಹೌದು, ಮಯಾಂಕ್ ಅಗರ್‌ವಾಲ್ ನಾಯಕತ್ವದಲ್ಲಿ ದಕ್ಷಿಣ ವಲಯ ತಂಡ ದೇವ್ಧರ್ ಟ್ರೋಫಿ ಏಕದಿನ ಟೂರ್ನಿ ಗೆದ್ದುಕೊಂಡಿದೆ. ಪಶ್ಚಿಮ ವಲಯ ತಂಡವನ್ನ ಸೋಲಿಸಿ ಮಯಾಂಕ್ ಬಳಗ ಟ್ರೋಫಿ ಎತ್ತಿ ಹಿಡಿಯಿತು. 6 ಪಂದ್ಯಗಳಿಂದ 4 ಹಾಫ್ ಸೆಂಚುರಿ ಬಾರಿಸಿದ ಅಗರ್ವಾಲ್, ಫೈನಲ್ನಲ್ಲೂ ತಂಡಕ್ಕೆ ಆಸರೆಯಾಗಿದ್ದರು. ನಾಯಕನಾಗಿ ಮತ್ತು ಆಟಗಾರನಾಗಿ ಸಕ್ಸಸ್ ಆಗಿದ್ದಾರೆ. ಇನ್ನು ದೇವ್ಧರ್ ಟ್ರೋಫಿಗೂ ಮುನ್ನ ನಡೆದ ದುಲೀಪ್ ಟ್ರೋಫಿಯನ್ನು ದಕ್ಷಿಣ ವಲಯ ಗೆದ್ದುಕೊಂಡಿತ್ತು. ಆ ತಂಡಕ್ಕೆ ಮಯಾಂಕ್ ಉಪನಾಯಕ. 4 ಇನ್ನಿಂಗ್ಸ್ನಲ್ಲಿ ಎರಡು ಅರ್ಧಶತಕ ಹೊಡೆದಿದ್ದ ಅಗರ್ವಾಲ್, ಅಲ್ಲೂ ಸೌತ್ ಝೋನ್ ಟೀಮ್ಗೆ ನೆರವಾಗಿದ್ದರು.
undefined
ಅಹಮದಾಬಾದ್ ಬಳಿಕ ಈಗ ವಿಶ್ವಕಪ್ ವೇಳಾಪಟ್ಟಿ ಬದಲಿಗೆ ಕೋಲ್ಕತಾ ಮನವಿ..! ಕಾರಣ ಏನು?
ನಂಬರ್ 16.. 7 ಆಗಿದ್ದೇಗೆ..? 1+6= 7
ಮಯಾಂಕ್ ಅಗರ್ವಾಲ್ ಈ ಮುಂಚೆ ತಮ್ಮ ಜೆರ್ಸಿ ಹಿಂಬದಿ ನಂಬರ್ 16 ಅಂತ ಹಾಕಿಸಿಕೊಂಡಿದ್ದರು. ಜೆರ್ಸಿ ನಂಬರ್ 16 ಹಾಕಿಕೊಂಡು ಅವರು ಟೀಂ ಇಂಡಿಯಾ ಪರ ನಾಲ್ಕು ಶತಕ ಬಾರಿಸಿದ್ದಾರೆ. ಐಪಿಎಲ್ನಲ್ಲೂ ಸೆಂಚುರಿ ಸಿಡಿಸಿದ್ದಾರೆ. ಆದ್ರೆ ಈ ಸೀಸನ್ ಡೊಮೆಸ್ಟಿಕ್ನಲ್ಲಿ ಮಾತ್ರ ಅವರ ಜೆರ್ಸಿ ನಂಬರ್ 7. ಹೌದು, 16 ನಂಬರ್ ತೆಗೆದುಹಾಕಿರುವ ಮಯಾಂಕ್, 7ನೇ ನಂಬರ್ ಜೆರ್ಸಿ ಹಾಕಿಕೊಂಡು ಆಡ್ತಿದ್ದಾರೆ. ಈ ನಂ. 7 ಜೆರ್ಸಿಯನ್ನ ಅವರು ಹಾಕಿಕೊಂಡಿದ್ದೇ ತಡ. ಎರಡೆರಡು ಟ್ರೋಫಿ ಗೆದ್ದಿದ್ದಾರೆ. ಹೀಗಾಗಿ ನಂಬರ್ 7 ಜೆರ್ಸಿ ಅವರ ಪಾಲಿಗೆ ಲಕ್ಕಿಯಾಗಿದೆ. 1+6 ಕೂಡಿದರೆ 7 ಬರುತ್ತೆ. ಈ ಏಳನ್ನೇ ಅವರು ಜೆರ್ಸಿ ಹಿಂಬದಿ ಹಾಕಿಕೊಂಡಿರೋದು.
What a satisfying feeling !! 🏆🏆
To remain unbeaten was a phenomenal effort !!
Big thanks to everyone who stood along and supported ❤️ pic.twitter.com/HAYhKLOjL1
ನಂ. 7 ಜೆರ್ಸಿಯನ್ನ ಭಾರತ ಪರ ಆಡುವಾಗ ಹಾಕುವಂತಿಲ್ಲ..!
ನಂಬರ್ 7 ಜೆರ್ಸಿ ಎಂಎಸ್ ಧೋನಿ ಅವರದ್ದು ಅಂತ ನಾವ್ ಹೇಳಬೇಕಿಲ್ಲ. ಈ ನಂಬರ್ 7 ಜೆರ್ಸಿ ಹಾಕಿಕೊಂಡು ಮಹಿ, ಭಾರತಕ್ಕೆ ಮೂರು ಐಸಿಸಿ ಟ್ರೋಫಿ ಮತ್ತು ಸಿಎಸ್ಕೆಗೆ ಐದು ಐಪಿಎಲ್ ಕಪ್ ಗೆಲ್ಲಿಸಿಕೊಟ್ಟಿದ್ದಾರೆ. ಈ ಲೆಜೆಂಡ್ ಪ್ಲೇಯರ್ ಜೆರ್ಸಿಯನ್ನ ಬಿಸಿಸಿಐ ರಿಟೈರ್ಡ್ ಮಾಡಿಸಿದೆ. ಅಂದ್ರೆ ಭಾರತ ಪರ ಆಡುವಾಗ ನಂ. 7 ಜೆರ್ಸಿಯನ್ನ ಯಾರೂ ಹಾಕಬಾರದು ಎಂದು ಹೇಳಿದೆ. ಆದ್ರೆ ಡೊಮೆಸ್ಟಿಕ್ನಲ್ಲಿ ಮಾತ್ರ ನಂ.7 ಜೆರ್ಸಿ ಹಾಕಬಹುದು. ಹೀಗಾಗಿಯೇ ಮಯಾಂಕ್, ಧೋನಿ ಜೆರ್ಸಿ ನಂಬರ್ ಹಾಕಿಕೊಂಡಿರೋದು. ಸೌತ್ ಝೋನ್ಗೆ ಎರಡು ಟ್ರೋಫಿ ಗೆಲ್ಲಿಸಿಕೊಟ್ಟಿರೋದು.
ದೇವಧರ್ ಟ್ರೋಫಿ ಮುಡಿಗೇರಿಸಿಕೊಂಡ ಮಯಾಂಕ್ ಅಗರ್‌ವಾಲ್ ನೇತೃತ್ವದ ದಕ್ಷಿಣ ವಲಯ..!
ಟೀಂ ಇಂಡಿಯಾದಿಂದ ಡ್ರಾಪ್ ಆಗಿರುವ ಮಯಾಂಕ್, ಸದ್ಯ ಅದ್ಭುತ ಫಾರ್ಮ್ನಲ್ಲಿದ್ದಾರೆ. ನಂಬರ್ 7 ಜೆರ್ಸಿ ಸದ್ಯ ಅವರ ಕೆರಿಯರ್ ಅನ್ನೇ ಬದಲಿಸಿದೆ. ಮತ್ತೆ ಅವರು ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡ್ತಾರಾ..? ಜೆರ್ಸಿ ನಂಬರ್ 7 ಅವರ ಅದೃಷ್ಟವನ್ನ ಬದಲಿಸುತ್ತಾ..? ನೋಡ್ಬೇಕು.