ಸೌತ್ ಆಫ್ರಿಕಾ ತಂಡ ಸದ್ಯ ಭಾರತ ವಿರುದ್ದದ ಸರಣಿಗಾಗಿ ಅಭ್ಯಾಸ ಆರಂಭಿಸಿದೆ. ಈಗಾಗಲೇ ಭಾರತಕ್ಕೆ ಆಗಮಿಸಿರುವ ಸೌತ್ ಆಫ್ರಿಕಾ ತಂಡ ಇದೀಗ ಮುಂಬೈ ಮಾಜಿ ಕ್ರಿಕೆಟಿಗನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಿದೆ.
ಮುಂಬೈ(ಸೆ.09): ಭಾರತ ವಿರುದ್ದ ಟಿ20 ಹಾಗೂ ಟೆಸ್ಟ್ ಸರಣಿಗಾಗಿ ಭಾರತ ಪ್ರವಾಸದಲ್ಲಿರುವ ಸೌತ್ ಆಫ್ರಿಕಾ ಸರಣಿ ಗೆಲುವಿಗಾಗಿ ಭಾರಿ ಕಸರತ್ತು ಆರಂಭಿಸಿದೆ. ಭಾರತದ ಕಂಡೀಷನ್, ಸ್ಪಿನ್ ದಾಳಿ ಎದುರಿಸಲು ಭರ್ಜರಿ ತಯಾರಿ ಆರಂಭಿಸಿರುವ ಸೌತ್ ಆಫ್ರಿಕಾ, ಇದೀಗ ಮುಂಬೈ ಮಾಜಿ ಕ್ರಿಕೆಟಿಗನನ್ನು ಮಧ್ಯಂತರ ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಿದೆ.
ಇದನ್ನೂ ಓದಿ: ಭಾರತಕ್ಕೆ ಬಂದಿಳಿದ ದಕ್ಷಿಣ ಆಫ್ರಿಕಾ ತಂಡ
undefined
ದೇಸಿ ಕ್ರಿಕೆಟ್‌ನಲ್ಲಿ ದಿಗ್ಗಜನಾಗಿರುವ ಮುಂಬೈ ಮೂಲಕ ಅಮೂಲ್ ಮುಜುಂದಾರ್ ಇದೀಗ ಸೌತ್ ಆಫ್ರಿಕಾ ತಂಡದ ಮಧ್ಯಂತರ ಕೋಚ್ ಆಗಿ ಕಾರ್ಯನಿರ್ವಹಸಿಲಿದ್ದಾರೆ. 2014ರಲ್ಲಿ ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ಅಮೂಲ್ ಬಳಿಕ ಮುಂಬೈ, ರಾಜಸ್ಥಾನ ರಾಯಲ್ಸ್ ಸೇರಿದಂತೆ ಹಲವು ತಂಡಗಳ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಇದೀಗ ಸೌತ್ ಆಫ್ರಿಕಾ ಅಮೂಲ್ ಸೇವೆಯನ್ನು ಬಳಸಿಕೊಂಡು ಭಾರತವನ್ನು ಕಟ್ಟಿಹಾಕೋ ರಣತಂತ್ರ ರೂಪಿಸಿದೆ.
ಇದನ್ನೂ ಓದಿ: ಸೆ.15 ರಿಂದ ಭಾರತ-ಸೌತ್ಆಫ್ರಿಕಾ ಸರಣಿ; ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ!
ರಣಜಿ ಕ್ರಿಕೆಟ್‌ನಲ್ಲಿ 11,167 ರನ್ ಸಿಡಿಸಿರುವ ಮುಜುಂದಾರ್ 2ನೇ ಗರಿಷ್ಠ ರನ್ ಸ್ಕೋರರ್ ಅನ್ನೋ ದಾಖಲೆ ಬರೆದಿದ್ದಾರೆ. ನೆದರ್ಲೆಂಡ್ ಕ್ರಿಕೆಟ್ ತಂಡದ ಕೋಚ್ ಆಗಿಯೂ ಕಾರ್ಯನಿರ್ವಹಿಸಿರುವ ಅಮೂಲ್ ಇದೀಗ ಹೊಸ ಜವಾಬ್ದಾರಿ ನಿರ್ವಹಿಸಲು ಉತ್ಸುಕರಾಗಿದ್ದಾರೆ. ಅಮೂಲ್ ಸೇವೆ ನಮಗೆ ತುಂಬಾ ಅವಶ್ಯಕ. ಬ್ಯಾಟ್ಸ್‌ಮನ್ ಎದುರಿಸುವ ಸವಾಲು, ಸ್ಪಿನ್ ಎದರಿಸಲು ಬೇಕಾದ ಸಿದ್ಧತೆ, ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ಆಡುವ ಚಾಕಚಕ್ಯತೆಯನ್ನು ಅಮೂಲ್ ಮುಜುಂದಾರ್ ನಮ್ಮ ತಂಡಕ್ಕೆ ಧಾರೆ ಎರೆಯಲಿದ್ದಾರೆ ಎಂದು ಸೌತ್ ಆಫ್ರಿಕಾ ಕ್ರಿಕೆಟ್ ಮಂಡಳಿ ಹೇಳಿದೆ.