ಟೀಂ ಇಂಡಿಯಾ ಕೋಚ್ ಶಾಸ್ತ್ರಿ ಸ್ಯಾಲರಿ ; ಬೆಚ್ಚಿ ಬೀಳಬೇಡಿ ಸ್ಲಿಪ್ ನೋಡಿ!

By Web Desk  |  First Published Sep 9, 2019, 3:16 PM IST

ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿಯ ನೂತನ ಸ್ಯಾಲರಿ ಕೇಳಿದರೆ ಒಂದು ಬಾರಿ ದಂಗಾಗುವುದು ಖಚಿತ. ವಿಶ್ವದ ಇತರ ಯಾವ ಕ್ರಿಕೆಟ್ ಕೋಚ್‌ಗೂ ಈ ಮಟ್ಟದ ಸ್ಯಾಲರಿ ಇಲ್ಲ. ಅದರಲ್ಲೂ 2ನೇ ಅವಧಿಗೆ ಕೋಚ್ ಆಗಿರುವ ಶಾಸ್ತ್ರಿ ಸ್ಯಾಲರಿಯನ್ನು ಶೇಕಡಾ 20 ರಷ್ಟು ಹೆಚ್ಚಿಸಲಾಗಿದೆ.


ಮುಂಬೈ(ಸೆ.09): ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಪುನರ್ ಆಯ್ಕೆಯಾಗಿ ದಿನಗಳೇ ಉರುಳಿದರೂ ಚರ್ಚೆ ಮಾತ್ರ ಇನ್ನು ಅಂತ್ಯಗೊಂಡಿಲ್ಲ. 2ನೇ ಅವಧಿಗೆ  ಭಾರತ ತಂಡದ ಮಾರ್ಗದರ್ಶನ ಜವಾಬ್ದಾರಿ ನಿರ್ವಹಿಸುತ್ತಿರುವ ಶಾಸ್ತ್ರಿಗೆ ಇದೀಗ ಮೊದಲ ಸವಾಲು ಸೌತ್ ಆಫ್ರಿಕಾ ವಿರುದ್ಧದ ಸರಣಿ. ಮೊದಲ ಅವಧಿಯ ಅಂತ್ಯದಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಮಾಡಿದ್ದ ಟೀಂ ಇಂಡಿಯಾ ಟಿ20, ಏಕದಿನ ಹಾಗೂ ಟೆಸ್ಟ್ ಸರಣಿ ವಶಪಡಿಸಿ ತವರಿಗೆ ವಾಪಾಸ್ಸಾಗಿದೆ. ಇದರ ಬೆನ್ನಲ್ಲೇ ಕೋಚ್ ಶಾಸ್ತ್ರಿ ಸ್ಯಾಲರಿ ಎಷ್ಟು ಅನ್ನೋ ಕುತೂಹಲಕ್ಕೆ ಉತ್ತರ ಸಿಕ್ಕಿದೆ.

ಇದನ್ನೂ ಓದಿ: ಟ್ರೋಲಿಗರಿಗೆ ತಿರುಗೇಟು ನೀಡಲು ಹೋದ ಶಾಸ್ತ್ರಿಗೆ ಮತ್ತೆ ಕ್ಲಾಸ್!

Tap to resize

Latest Videos

ಭಾರತ ತಂಡದ ಕೋಚ್ ಆಗಿ ಪುನರ್ ಆಯ್ಕೆಯಾಗಿರುವ ರವಿ ಶಾಸ್ತ್ರಿ ವೇತನವನ್ನು 20% ಹೆಚ್ಚಿಸಲಾಗಿದೆ. ಹೀಗಾಗಿ ಶಾಸ್ತ್ರಿ ವಾರ್ಷಿಕವಾಗಿ ಸರಿಸುಮಾರು 10 ಕೋಟಿ ರೂಪಾಯಿ ಸ್ಯಾಲರಿ ಪಡೆಯಲಿದ್ದಾರೆ. ಮೊದಲ ಅವಧಿಯಲ್ಲಿ ಶಾಸ್ತ್ರಿ 8 ಕೋಟಿ ರೂಪಾಯಿ ವಾರ್ಷಿಕ ಸಂಭಾವನೆ ಪಡೆಯುತ್ತಿದ್ದರು. ಇದೀಗ ಸರಿಸುಮಾರು 9.5 ಕೋಟಿಯಿಂದ 10 ಕೋಟಿ ರೂಪಾಯಿ ವೇತನ ಪಡೆಯಲಿದ್ದಾರೆ.

ಇದನ್ನೂ ಓದಿ: ಸಲಹಾ ಸಮಿತಿ ಮುಂದೆ ಹೊಸ ಬೇಡಿಕೆಯಿಟ್ಟ ರವಿಶಾಸ್ತ್ರಿ..!

ಸಪೋರ್ಟ್ ಸ್ಟಾಫ್ ವೇತನ ಕೂಡ ಹೆಚ್ಚಿಸಲಾಗಿದೆ. ಬೌಲಿಂಗ್ ಕೋಚ್ ಭರತ್ ಅರುಣ್ ಸರಿಸುಮಾರು 3.5 ಕೋಟಿ ರೂಪಾಯಿ ವಾರ್ಷಿಕ ಸಂಭಾವನೆ ಪಡೆಯಲಿದ್ದಾರೆ. ಇನ್ನು ಫೀಲ್ಡಿಂಗ್ ಕೋಟ್ ಶ್ರೀಧರ್ ಕೂಡ 3.5 ಕೋಟಿ ರೂಪಾಯಿ ವಾರ್ಷಿಕ ಸ್ಯಾಲರಿ ಪಡೆಯಲಿದ್ದಾರೆ. ಬ್ಯಾಟಿಂಗ್ ಕೋಟ್ ವಿಕ್ರಂ ರಾಥೋಡ್ 2.5 ಕೋಟಿಯಿಂದ 3 ಕೋಟಿ ರೂಪಾಯಿ ವಾರ್ಷಿಕ ವೇತನ ಪಡೆಯಲಿದ್ದಾರೆ.

ಇದನ್ನೂ ಓದಿ: 1983ರ ವಿಶ್ವಕಪ್ ಗೆದ್ದ ಕಪಿಲ್ ಸೈನ್ಯದ ಸ್ಯಾಲರಿ; ಇಲ್ಲಿದೆ ಸಂಪೂರ್ಣ ವಿವರ!

1983ರ ವಿಶ್ವಕಪ್ ಟೂರ್ನಿ ಗೆದ್ದ ಭಾರತ ತಂಡದಲ್ಲಿದ್ದ ರವಿ ಶಾಸ್ತ್ರಿ ಪ್ರತಿ ಪಂದ್ಯಕ್ಕೆ 1,500 ರೂಪಾಯಿ ವೇತನ ಹಾಗೂ 600 ರೂಪಾಯಿ ಭತ್ಯೆ ಮೂಲಕ ಒಟ್ಟು 2,100 ರೂಪಾಯಿ ಪಡೆದಿದ್ದರು. ಇದೀಗ ಇದೇ ರವಿ ಶಾಸ್ತ್ರಿ ಬರೋಬ್ಬರಿ 10 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.  2021ರ ಟಿ20 ವಿಶ್ವಕಪ್ ಟೂರ್ನಿ ಬಳಿಕ ನೂತನ ಕೋಚ್ ಹಾಗೂ ಸಪೋರ್ಟ್ ಸ್ಟಾಫ್ ಅವಧಿ ಮುಕ್ತಾಯವಾಗಲಿದೆ. 2013ರ ಬಳಿಕ  ಭಾರತ ಇದುವರೆಗೆ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ.

click me!