
ಜಮೈಕಾ(ಸೆ.09): ವಿಶ್ವಕಪ್ ಟೂರ್ನಿ ಬಳಿಕ ಭಾರತ ವಿರುದ್ದದ ಸರಣಿಯಲ್ಲಿ ಹೀನಾಯ ಸೋಲು ತಂಡ ವೆಸ್ಟ್ ಇಂಡೀಸ್ ತಂಡ ಸಂಕಷ್ಟದಲ್ಲಿದೆ. ಇದೀಗ ತಂಡಕ್ಕೇ ಮೇಜರ್ ಸರ್ಜರಿ ಮಾಡಲು ವಿಂಡೀಸ್ ಕ್ರಿಕೆಟ್ ಮಂಡಳಿ ಸಜ್ಜಾಗಿದೆ. ಇದರ ಬೆನ್ನಲ್ಲೇ ಏಕದಿನ ನಾಯಕ ಜಾಸನ್ ಹೋಲ್ಡರ್ ಹಾಗೂ ಹಾಗೂ ಟಿ20 ನಾಯಕ ಕಾರ್ಲೋಸ್ ಬ್ರಾಥ್ವೈಟ್‌ಗೆ ಕೊಕ್ ನೀಡಲು ವೆಸ್ಟ್ ಇಂಡೀಸ್ ಮುಂದಾಗಿದೆ.
ಇದನ್ನೂ ಓದಿ: ವಿಂಡೀಸ್ ಮಣಿಸಿ ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ
ಹೋಲ್ಡರ್ ಹಾಗೂ ಬ್ರಾಥ್ವೈಟ್ ಕಿತ್ತೆಸೆದು ಇದೀಗ ಹಿರಿಯ ಆಲ್ರೌಂಡರ್ ಕೀರನ್ ಪೊಲ್ಲಾರ್ಡ್‌ಗೆ ನಾಯಕನ ಜವಾಬ್ದಾರಿ ನೀಡಲು ಎಲ್ಲಾ ತಯಾರಿ ನಡೆದಿದೆ. ಭಾರತ ವಿರುದ್ಧ ಸರಣಿ ಮುಗಿಸಿರುವ ವೆಸ್ಟ್ ಇಂಡೀಸ್ ಶೀಘ್ರದಲ್ಲೇ ಆಫ್ಘಾನಿಸ್ತಾನ ವಿರುದ್ಧದ ಸರಣಿಗಾಗಿ ಭಾರತ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಗೂ ಮುನ್ನ ಅಧೀಕೃತ ಪ್ರಕಟಣೆ ಹೊರಡಿಸಲಿದೆ.
ಇದನ್ನೂ ಓದಿ: ಟಿ20 ಸರಣಿ ಬಳಿಕ, ಏಕದಿನ ಸರಣಿಯಲ್ಲೂ ಭಾರತ ಚಾಂಪಿಯನ್!
ಭಾರತ ವಿರುದ್ಧದ ಟಿ20 ಸರಣಿಯಲ್ಲಿ 0-3, ಏಕದಿನ ಸರಣಿಯಲ್ಲಿ 0-2 ಹಾಗೂ ಟೆಸ್ಟ್ ಸರಣಿಯಲ್ಲಿ 0-2 ಅಂತರದಲ್ಲಿ ಸರಣಿ ಸೋತಿತ್ತು. ಮೂರು ಮಾದರಿಯಲ್ಲಿ ಕ್ಲೀನ್ ಸ್ವೀಪ್ ಮುಖಭಂಗ ಅನುಭವಿಸಿದ ವಿಂಡೀಸ್ ಇದೀಗ ಬಲಿಷ್ಠ ತಂಡ ಕಟ್ಟಲು ಸಜ್ಜಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.