ಬಿಸಿಸಿಐ ಸದಸ್ಯರಾಗಿ ಉಳಿಯಬೇಕಿದ್ದರೆ, ರಾಜ್ಯ ಸಂಸ್ಥೆಗಳು ನಿಯಮ ಪಾಲಿಸಬೇಕು. ಸಂವಿಧಾನದಲ್ಲಿ ತಿದ್ದುಪಡಿ ತರಬೇಕು ಎಂದು ಸೂಚಿಸಲಾಗಿತ್ತು. ಅದರಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ತನ್ನ ಸಂವಿಧಾನಕ್ಕೆ ತಿದ್ದುಪಡಿ ಮಾಡಿಕೊಂಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬೆಂಗಳೂರು(ಸೆ.14): ಬಿಸಿಸಿಐ ನಿಯಮ ಪಾಲಿಸಿ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಶುಕ್ರವಾರ ತನ್ನ ಸಂವಿಧಾನ ತಿದ್ದುಪಡಿ ಮಾಡಿದೆ. ಇದರೊಂದಿಗೆ ಬಿಸಿಸಿಐ ಚುನಾವಣೆಯಲ್ಲಿ ಮತ ಹಾಕುವ ಹಕ್ಕು ಉಳಿಸಿಕೊಂಡಿರುವ ಕೆಎಸ್‌ಸಿಎ, ತನ್ನ ಸಂಸ್ಥೆಗೂ ಚುನಾವಣೆ ನಡೆಸಲು ಅನುಮತಿ ಪಡೆದಿದೆ.
ಸೆಪ್ಟೆಂಬರ್ 14ರೊಳಗೆ ಚುನಾವಣೆ ನಡೆಸಿ: ರಾಜ್ಯ ಸಂಸ್ಥೆಗೆ ಬಿಸಿಸಿಐ
ಬಿಸಿಸಿಐ ಸದಸ್ಯರಾಗಿ ಉಳಿಯಬೇಕಿದ್ದರೆ, ರಾಜ್ಯ ಸಂಸ್ಥೆಗಳು ನಿಯಮ ಪಾಲಿಸಬೇಕು. ಸಂವಿಧಾನದಲ್ಲಿ ತಿದ್ದುಪಡಿ ತರಬೇಕು ಎಂದು ಸೂಚಿಸಲಾಗಿತ್ತು. ಸೆ.14ರ ವರೆಗೂ ನೀಡಿದ್ದ ಗಡುವನ್ನು ಸೆ.28ರ ವರೆಗೂ ವಿಸ್ತರಿಸಲಾಗಿತ್ತು. ‘ನಿಯಮದಂತೆ ಸಂವಿಧಾನ ತಿದ್ದುಪಡಿ ಮಾಡಲಾಗಿದ್ದು, ಬಿಸಿಸಿಐ ಹಾಗೂ ಸುಪ್ರೀಂ ಕೋರ್ಟ್ ನೇಮಿತ ಆಡಳಿತ ಸಮಿತಿ ಒಪ್ಪಿಗೆ ಸೂಚಿಸಿದೆ. ತಿದ್ದುಪಡಿ ಮಾಡಿದ ಸಂವಿಧಾನವನ್ನು ರಿಜಿಸ್ಟ್ರಾರ್ ಬಳಿ ನೋಂದಣಿ ಮಾಡಲಿದ್ದು, ಆ ಬಳಿಕ ಚುನಾವಣಾ ಪ್ರಕ್ರಿಯೆ ಆರಂಭಿಸಲಿದ್ದೇವೆ’ ಎಂದು ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ.
ಇಂಡೋ-ಆಫ್ರಿಕಾ ಟಿ20: ಬೆಂಗಳೂರು ಪಂದ್ಯದ ಟಿಕೆಟ್ ಕೇವಲ ₹500 ಮಾತ್ರ..!
ಬಿಸಿಸಿಐನ ಪ್ರಮುಖ ನಿಯಮಗಳೇನು?
* ರಾಜ್ಯ ಸಂಸ್ಥೆಗಳು 5ಕ್ಕಿಂತ ಹೆಚ್ಚು ಪದಾಧಿಕಾರಿಗಳನ್ನು ಹೊಂದಿರಬಾರದು. ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಹಾಗೂ ಖಜಾಂಚಿ ಹೊರತು ಪಡಿಸಿ ಬೇರೆ ಹುದ್ದೆಗಳನ್ನು ನೀಡುವಂತ್ತಿಲ್ಲ.
* ಪದಾಧಿಕಾರಿಗಳ ಕಾರ್ಯಾವಧಿ ಮೂರು ವರ್ಷ ಮೀರಬಾರದು. ಮತ್ತೊಂದು ಅವಧಿಗೆ ಕಾರ್ಯನಿರ್ವಹಿಸುವ ಮುನ್ನ 3 ವರ್ಷಗಳು ‘ಕೂಲಿಂಗ್ ಆಫ್’ ಅವಧಿಯಲ್ಲಿರಬೇಕು.
* ಆಡಳಿತ/ಕಾರ್ಯಕಾರಿ ಸಮಿತಿಯಲ್ಲಿ ಕನಿಷ್ಠ ಒಬ್ಬ ಮಹಿಳೆ, ಆಟಗಾರರ ಪರ ಇಬ್ಬರು ಪ್ರತಿನಿಧಿಗಳು (ಒಬ್ಬ ಮಾಜಿ ಪುರುಷ, ಮಹಿಳಾ ಕ್ರಿಕೆಟಿಗ) ಇರಬೇಕು.
* ಸಂಸ್ಥೆ ತನ್ನ ಸ್ವಂತ ವೆಬ್‌ಸೈಟ್ ಹೊಂದಿರಬೇಕು. ಆಟಗಾರರಿಗೆ, ಆಡಳಿತಕ್ಕೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯೂ ಅದರಲ್ಲಿರಬೇಕು.