ಸೌರವ್‌ ಗಂಗೂಲಿಗೆ ಮತ್ತೆ ಸ್ವಹಿತಾಸಕ್ತಿ ಸಂಕಷ್ಟ!

Published : Sep 14, 2019, 11:10 AM IST
ಸೌರವ್‌ ಗಂಗೂಲಿಗೆ ಮತ್ತೆ ಸ್ವಹಿತಾಸಕ್ತಿ ಸಂಕಷ್ಟ!

ಸಾರಾಂಶ

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್, ವಿ.ವಿ.ಎಸ್. ಲಕ್ಷ್ಮಣ್, ಸಚಿನ್ ತೆಂಡುಲ್ಕರ್ ಸ್ವಹಿತಾಸಕ್ತಿ ಆರೋಪಕ್ಕೆ ಗುರಿಯಾಗಿದ್ದರು. ಮಾಜಿ ನಾಯಕ ಸೌರವ್ ಗಂಗೂಲಿ ಕೂಡಾ ಮತ್ತೊಮ್ಮೆ ಸ್ವಹಿತಾಸಕ್ತಿ ಆರೋಪಕ್ಕೆ ಗುರಿಯಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...  

ಮುಂಬೈ[ಸೆ.14]: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿಗೆ ಮತ್ತೊಮ್ಮೆ ಸ್ವಹಿತಾಸಕ್ತಿ ಸಂಕಷ್ಟ ಎದುರಾಗಿದೆ. ‘ಸೌರವ್‌ ಗಂಗೂಲಿ ಸ್ವಹಿತಾಸಕ್ತಿ ಸಂಘರ್ಷದಲ್ಲಿ ಒಳಪಡಲಿದ್ದು, ಕೇವಲ ಒಂದು ಹುದ್ದೆಯಲ್ಲಿ ಮುಂದುವರಿಯಬೇಕು. ತಮ್ಮ ಉಳಿದ ಹುದ್ದೆಗಳನ್ನು ತ್ಯಜಿಸಬೇಕು’ ಎಂದು ಬಿಸಿಸಿಐ ನೈತಿಕ ಅಧಿಕಾರಿ ಡಿ.ಕೆ ಜೈನ್‌ ಸೂಚಿಸಿದ್ದಾರೆ.

ಸ್ವಹಿತಾಸಕ್ತಿಗೆ ದ್ರಾವಿಡ್‌ ಒಳಪಡಲ್ಲ: BCCI ಸ್ಪಷ್ಟನೆ

‘ಸೌರವ್‌ 3 ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರೂ ತಮ್ಮ ಪ್ರಭಾವ ಬಳಸಿರಬೇಕಿಲ್ಲ. ಆದರೆ ಒಂದಕ್ಕಿಂತ ಹೆಚ್ಚು ಹುದ್ದೆಗಳನ್ನು ಅಲಂಕರಿಸುವ ಮೂಲಕ ಸ್ವಹಿತಾಸಕ್ತಿ ಸಾಧ್ಯತೆಯನ್ನು ಹೆಚ್ಚಿಸುತ್ತಿದ್ದಾರೆ. ನಿಯಮದ ಪ್ರಕಾರ ಕೇವಲ ಒಂದು ಹುದ್ದೆಯಲ್ಲಿ ಮುಂದುವರಿಯುವಂತೆ ಬಿಸಿಸಿಐ ಖಚಿತಪಡಿಸಲಿ’ ಎಂದು ಜೈನ್‌ ತಿಳಿಸಿದ್ದಾರೆ. 

‘ಡ​ಬಲ್‌ ಟಿ20 ವಿಶ್ವ​ಕಪ್‌’ಗೆ ಟೀಂ ಇಂಡಿಯಾ ಸಿದ್ಧ​ತೆ

ಬಂಗಾಳ ಕ್ರಿಕೆಟ್‌ ಸಂಸ್ಥೆ (ಸಿಎಬಿ) ಅಧ್ಯಕ್ಷ ಸೌರವ್‌, ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಸಲಹೆಗಾರ ಆಗಿದ್ದಾರೆ. ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ)ಯಲ್ಲೂ ಗಂಗೂಲಿ ಇದ್ದರು, ಆದರೆ ಸ್ವಹಿತಾಸಕ್ತಿ ದೂರು ದಾಖಲಾದಂತೆ ರಾಜೀನಾಮೆ ನೀಡಿದ್ದರು. ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ರಾಹುಲ್‌ ದ್ರಾವಿಡ್‌ ಸ್ವಹಿತಾಸಕ್ತಿ ಆರೋಪ ಎದುರಿಸಿದಾಗ ಗಂಗೂಲಿ, ‘ಸ್ವಹಿತಾಸಕ್ತಿ ಪದ ಇತ್ತೀಚೆಗೆ ಫ್ಯಾಷನ್‌ ಆಗಿದೆ’ ಎಂದು ಖಂಡಿಸಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?