ಬೆಂಗಳೂರಿನಲ್ಲಿ ನಡೆಯುತ್ತಿರುವ ಏಷ್ಯನ್ ಈಜುಕೂಟದ ಮೂರನೇ ದಿನವೂ ಭಾರತದ ಈಜುಪಟುಗಳು ಕಮಾಲ್ ಮಾಡಿದ್ದಾರೆ. ಭಾರತದ ತಾರಾ ಈಜುಪಟು ಕುಶಾಗ್ರ ರಾವತ್ 4 ಚಿನ್ನದ ಪದಕಗಳಿಗೆ ಕೊರಳೊಡ್ದಿದರು. ಈ ಕುರಿತಾದ ವರದಿ ಇಲ್ಲಿದೆ ನೋಡಿ....
ಬೆಂಗಳೂರು[ಸೆ.27]: ಭಾರತದ ತಾರಾ ಈಜುಪಟು ಕುಶಾಗ್ರ ರಾವತ್, ಇಲ್ಲಿ ನಡೆಯುತ್ತಿರುವ 10ನೇ ಏಷ್ಯನ್ ವಯೋ ವರ್ಗ ಈಜು ಚಾಂಪಿಯನ್‌ಶಿಪ್‌ನಲ್ಲಿ ಗುರುವಾರ 4ನೇ ಚಿನ್ನದ ಪದಕಕ್ಕೆ ಮುತ್ತಿಟ್ಟರು. 3ನೇ ದಿನವೂ ಭಾರತದ ಈಜುಪಟುಗಳ ಪದಕ ಬೇಟೆ ಮುಂದುವರಿಯಿತು.
ಏಷ್ಯನ್ ಈಜು ಕೂಟ: 2ನೇ ದಿನ ಭಾರತಕ್ಕೆ 10 ಪದಕ!
ರಾಜ್ಯದ ಶ್ರೀಹರಿ ನಟರಾಜ್ ಅವರ ರಾಷ್ಟ್ರೀಯ ಕೂಟ ದಾಖಲೆಯೊಂದಿಗೆ ಭಾರತದ ಸ್ಪರ್ಧಿಗಳು 4 ಚಿನ್ನ, 4 ಬೆಳ್ಳಿ, 4 ಕಂಚಿನೊಂದಿಗೆ 12 ಪದಕ ಜಯಿಸಿದರು. ಮೊದಲ ದಿನ 18, 2ನೇ ದಿನ 10 ಸೇರಿದಂತೆ ಒಟ್ಟಾರೆ 40 ಪದಕ ಗೆದ್ದಿರುವ ಭಾರತ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದೆ.
ಲಿಯೋನೆಲ್ ಮೆಸ್ಸಿಗೆ ಒಲಿದ ಫಿಫಾ ವರ್ಷದ ಫುಟ್ಬಾಲಿಗ ಪ್ರಶಸ್ತಿ
ಪುರುಷರ 400 ಮೀ. ಫ್ರೀಸ್ಟೈಲ್‌ನಲ್ಲಿ ಕುಶಾಗ್ರ ರಾವತ್ 3 ನಿಮಿಷ 55.81 ಸೆ.ಗಳಲ್ಲಿ ಗುರಿ ಮುಟ್ಟಿ ಚಿನ್ನ ಗೆದ್ದರು. 200 ಮೀ. ಬಟರ್‌ಫ್ಲೈನಲ್ಲಿ ಸಾಜನ್ ಪ್ರಕಾಶ್ 2 ನಿಮಿಷ 00.38ಸೆ.ಗಳಲ್ಲಿ ಗುರಿ ಮುಟ್ಟಿ ಚಿನ್ನ ಜಯಿಸಿದರೆ, 100 ಮೀ. ಬ್ಯಾಕ್’ಸ್ಟ್ರೋಕ್’ನಲ್ಲಿ ಶ್ರೀಹರಿ ನಟರಾಜ್ 55.06 ಸೆ.ಗಳಲ್ಲಿ ಗುರಿ ಮುಟ್ಟಿ ದಾಖಲೆಯೊಂದಿಗೆ ಚಿನ್ನ ಗೆದ್ದರು. ಪುರುಷರ 4*100 ಮೀ. ಮೆಡ್ಲೆ ಸ್ಪರ್ಧೆಯಲ್ಲಿ ಶ್ರೀಹರಿ, ಲಿಖಿತ್, ಸಾಜನ್ ಹಾಗೂ ವೀರ್‌ಧವಳ್ ಅವರನ್ನೊಳಗೊಂಡ ಭಾರತ ತಂಡ ಮೊದಲ ಸ್ಥಾನ ಪಡೆಯಿತು. 100 ಮೀ. ಫ್ರೀಸ್ಟೈಲ್‌ನಲ್ಲಿ ವೀರ್‌ಧವಳ್ ಖಾಡೆ 50.68 ಸೆ. ಹಾಗೂ ಶ್ರೀಹರಿ ನಟರಾಜ್ 50.91 ಸೆ.ಗಳಲ್ಲಿ ಗುರಿ ತಲುಪಿ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು.
ಕಾಡಿ ಬೇಡಿ ಓಪನರ್ ಆಗಿದ್ದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್..!
ಮಹಿಳೆಯರ 400 ಮೀ. ಫ್ರೀಸ್ಟೈಲ್‌ನಲ್ಲಿ ಶಿವಾನಿ ಕಟಾರಿಯ 4 ನಿಮಿಷ 27.16 ಸೆ.ಗಳಲ್ಲಿ ಗುರಿ ತಲುಪಿ ಕಂಚು ಗೆದ್ದರೆ, 100 ಮೀ. ಬ್ಯಾಕ್’ಸ್ಟ್ರೋಕ್‌ನಲ್ಲಿ ಮಾನಾ ಪಟೇಲ್ 1 ನಿಮಿಷ 05.08 ಸೆ.ಗಳಲ್ಲಿ ಗುರಿ ತಲುಪಿ ಬೆಳ್ಳಿ ಜಯಿಸಿದರು. ಅಂಡರ್ 15-17 ಬಾಲಕರ 200 ಮೀ. ಬಟರ್‌ಫ್ಲೈನಲ್ಲಿ ಮ್ಯಾಥ್ಯೂ ತನೀಶ್ ಜಾಜ್‌ರ್ ಬೆಳ್ಳಿ, ಅಂಡರ್ 12-14 ಬಾಲಕರ 200 ಮೀ. ಬ್ಯಾಕ್’ಸ್ಟ್ರೋಕ್‌ನಲ್ಲಿ ದೇವನಾಶ್ ಪಾರ್ಮರ್ ಕಂಚು ಗಳಿಸಿದರು. ಬಾಲಕಿಯರ 200 ಮೀ. ಬ್ರೆಸ್ಟ್’ಸ್ಟ್ರೋಕ್‌ನಲ್ಲಿ ಅಪೇಕ್ಷಾ ಫರ್ನಾಂಡೀಸ್ ಕಂಚು ಗೆದ್ದರು.