ಕೊರಿಯಾ ಓಪನ್‌ 2019: ಕ್ವಾರ್ಟರ್‌ ಫೈನಲ್‌ಗೆ ಕಶ್ಯ​ಪ್‌

Published : Sep 27, 2019, 10:18 AM IST
ಕೊರಿಯಾ ಓಪನ್‌ 2019: ಕ್ವಾರ್ಟರ್‌ ಫೈನಲ್‌ಗೆ ಕಶ್ಯ​ಪ್‌

ಸಾರಾಂಶ

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಪಟು ಪಾರುಪಳ್ಳಿ ಕಶ್ಯಪ್ ಕೊರಿಯಾ ಓಪನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಟೂರ್ನಿಯಲ್ಲಿ ಉಳಿದಿರುವ ಏಕೈಕ ಭಾರತೀಯ ಎನಿಸಿರುವ ಕಶ್ಯಪ್ ಪ್ರಶಸ್ತಿ ಗೆಲ್ಲಲಿ ಎನ್ನುವುದಷ್ಟೇ ಕ್ರೀಡಾಭಿಮಾನಿಗಳ ಹಾರೈಕೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

ಇಂಚಾನ್‌[ಸೆ.27]: ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾ​ವ​ಳಿಯ ಪುರು​ಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ಗೆ ಭಾರ​ತದ ಪಾರುಪಳ್ಳಿ ಕಶ್ಯಪ್‌ ಪ್ರವೇ​ಶಿ​ಸಿ​ದ್ದಾರೆ. 

ಕೊರಿಯಾ ಓಪನ್‌: ಮೊದಲ ಸುತ್ತಲ್ಲೇ ಸಿಂಧು, ಸೈನಾ ಔಟ್‌!

ಗುರು​ವಾರ ನಡೆದ 2ನೇ ಸುತ್ತಿನ ಪಂದ್ಯ​ದ​ಲ್ಲಿ ಕಶ್ಯಪ್‌, ಮಲೇ​ಷ್ಯಾದ ಡರೆನ್‌ ಲೀವ್‌ ವಿರುದ್ಧ 21-17, 11-21, 21-12 ಗೇಮ್‌ಗಳಲ್ಲಿ ಗೆಲು​ವು ಸಾಧಿ​ಸಿ​ದರು. 56 ನಿಮಿಷಗಳ ಕಾಲ ನಡೆದ ಪಂದ್ಯ​ದಲ್ಲಿ ಭಾರ​ತೀಯ ಆಟ​ಗಾರನಾಗಿ ಭಾರೀ ಪೈಪೋಟಿ ಎದು​ರಾ​ಯಿತು.

4 ತಿಂಗ​ಳಲ್ಲಿ 26 ಕೆ.ಜಿ ತೂಕ ಇಳಿ​ಸಿದ ಸಾನಿ​ಯಾ!

ಶುಕ್ರ​ವಾರ ನಡೆ​ಯ​ಲಿ​ರುವ ಕ್ವಾರ್ಟರ್‌ ಫೈನಲ್‌ ಪಂದ್ಯ​ದಲ್ಲಿ ಕಶ್ಯಪ್‌, ಡೆನ್ಮಾರ್ಕ್’ನ ಜಾನ್‌ ಒ ಜಾರ್ಗೆ​ನ್ಸನ್‌ ವಿರುದ್ಧ ಸೆಣ​ಸ​ಲಿ​ದ್ದಾರೆ. ಕಶ್ಯಪ್‌, ಟೂರ್ನಿ​ಯಲ್ಲಿ ಉಳಿ​ದು​ಕೊಂಡಿ​ರು​ವ ಭಾರ​ತದ ಏಕೈಕ ಸ್ಪರ್ಧಿಯಾಗಿದ್ದು ಪ್ರಶಸ್ತಿ ಗೆಲ್ಲುವ ಗುರಿ ಹೊಂದಿ​ದ್ದಾರೆ.

ಅಂತಾರಾಷ್ಟ್ರೀಯ ಸ್ವಿಮ್ಮಿಂಗ್; ನಟ ಮಾಧವನ್ ಪುತ್ರನಿಗೆ ಬೆಳ್ಳಿ ಪದಕ!

ಕೊರಿಯಾ ಓಪನ್‌ ಓಪನ್ ಮೊದಲ ಸುತ್ತಿನಲ್ಲೇ ಪಿ.ವಿ. ಸಿಂಧು, ಸೈನಾ ನೆಹ್ವಾಲ್ ಹಾಗೂ ಬಿ.ಸಾಯಿ ಪ್ರಣೀತ್‌ ಆಘಾತಕಾರಿ ಸೋಲು ಕಂಡು ಹೊರ ಬಿದ್ದಿದ್ದರು. 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL Playoffs: ಒಂದೇ ಸ್ಥಾನ, 4 ತಂಡಗಳ ಫೈಟ್! ಯಾರಿಗೆ ಸಿಗಲಿದೆ ಕೊನೆಯ ಚಾನ್ಸ್?
ಚೇಸ್ ಮಾಡಿ ಗೆಲ್ಲೋ ಚಾನ್ಸ್ ಇದ್ದರೂ 166 ರನ್ ದಾಟಿಸಲು ಪ್ರಯತ್ನಿಸಿ ಸೋಲು ಕಂಡಿತಾ ಆರ್‌ಸಿಬಿ?