ಅಕ್ಟೋಬರ್ 3ಕ್ಕೆ KSCA ಚುನಾವಣೆ

By Kannadaprabha News  |  First Published Sep 27, 2019, 11:40 AM IST

ಬಹುನಿರೀಕ್ಷಿತ KSCA ಚುನಾವಣೆಗೆ ದಿನಾಂಕ ಕೂಡಿ ಬಂದಿದೆ. ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ ಮತ್ತು ಆಡಳಿತ ಮಂಡಳಿ ಸದಸ್ಯರ ಸ್ಥಾನ (11 ಸ್ಥಾನ​ಗ​ಳು)ಗಳಿಗೆ ಚುನಾ​ವಣೆ ಅಕ್ಟೋಬರ್ 03ರಂದು ನಡೆ​ಯ​ಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ಬೆಂಗಳೂರು(ಸೆ.27): ಬಹು ನಿರೀಕ್ಷಿತ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಚುನಾವಣೆಯ ದಿನಾ​ಂಕ ನಿಗ​ದಿ​ಯಾ​ಗಿದೆ. ಅಕ್ಟೋ​ಬರ್‌ 3ರಂದು ಚುನಾ​ವಣೆ ನಡೆ​ಯ​ಲಿದ್ದು, ಅಂದು ಸಂಜೆಯೇ ಫಲಿ​ತಾಂಶ ಪ್ರಕ​ಟ​ವಾ​ಗ​ಲಿದೆ ಎಂದು ಗುರು​ವಾರ ಚುನಾ​ವಣಾ ಅಧಿ​ಕಾರಿ ಎಂ.ಆರ್‌.ಹೆಗ್ಡೆ ಪ್ರಕ​ಟಣೆ ಮೂಲಕ ತಿಳಿ​ಸಿ​ದರು. ಅ.3ರಂದು ರಾಜ್ಯ ಕ್ರಿಕೆಟ್‌ ಸಂಸ್ಥೆಯ 82ನೇ ವಾರ್ಷಿಕ ಸಾಮಾನ್ಯ ಸಭೆ ನಡೆ​ಯ​ಲಿದ್ದು, ಅಂದೇ ಚುನಾ​ವಣೆ ಸಹ ನಡೆ​ಯಲಿದೆ.

BCCI ಚುನಾ​ವಣೆ: ಕೆಎಸ್‌ಸಿಎಗೆ ಮತ ಹಕ್ಕು

Tap to resize

Latest Videos

ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ ಮತ್ತು ಆಡಳಿತ ಮಂಡಳಿ ಸದಸ್ಯರ ಸ್ಥಾನ (11 ಸ್ಥಾನ​ಗ​ಳು)ಗಳಿಗೆ ಚುನಾ​ವಣೆ ನಡೆ​ಯ​ಲಿದೆ. 2019-2022ರ ಅವ​ಧಿ​ಗೆ ಈ ಚುನಾ​ವಣೆಯಲ್ಲಿ ಪದಾ​ಧಿ​ಕಾ​ರಿ​ಗ​ಳನ್ನು ಆಯ್ಕೆ ಮಾಡ​ಲಾ​ಗು​ತ್ತದೆ. ಕೆಎಸ್‌ಸಿಎಯಿಂದ ಮಾನ್ಯತೆ ಪಡೆದ ಕ್ಲಬ್‌ಗಳ ಕಾರ್ಯ​ದ​ರ್ಶಿ​ಗಳು, ಜೀವ​ಮಾನದ ಸದ​ಸ್ಯರು ಮತ ಚಲಾ​ಯಿ​ಸ​ಲಿ​ದ್ದಾರೆ. ಒಟ್ಟು 1600ರಿಂದ 1700 ಮತ​ಗಳಿವೆ.

ಮೊದಲ ಬಾರಿಗೆ ಇವಿಎಂ ಬಳಕೆ

ಶುಕ್ರ​ವಾರ (ಸೆ.27)ದಿಂದ ನಾಮ​ಪ​ತ್ರ ಸಲ್ಲಿ​ಕೆ ಪ್ರಕ್ರಿಯೆ ಆರಂಭ​ಗೊ​ಳ್ಳ​ಲಿದ್ದು, ಸೋಮ​ವಾರ ಮಧ್ಯಾಹ್ನ 3 ಗಂಟೆ ವರೆಗೂ ನಾಮ​ಪತ್ರ ಸಲ್ಲಿ​ಸಲು ಅವ​ಕಾಶವಿದೆ. ಸೆ.29ರಂದು ಭಾನು​ವಾರ ಕಚೇ​ರಿಗೆ ರಜೆ ಇರ​ಲಿದೆ. ಸೆ.30ರಂದು ಮಧ್ಯಾಹ್ನ 3ರಿಂದ ಸಂಜೆ 6ರ ವರೆ​ಗೂ ನಾಮ​ಪ​ತ್ರ​ಗಳ ಪರಿ​ಶೀ​ಲನೆ ನಡೆ​ಯ​ಲಿದೆ. ಚುನಾ​ವಣಾ ಕಣ​ದಿಂದ ಹಿಂದೆ ಸರಿ​ಯಲು ಇಚ್ಛಿ​ಸು​ವ​ವರು ಅ.1ರಂದು ನಾಮ​ಪತ್ರ ಬೆಳಗ್ಗೆ 11ರಿಂದ ಮಧ್ಯಾಹ್ನ 1ರ ವರೆಗೂ ನಾಮ​ಪ​ತ್ರ ಹಿಂಪ​ಡೆ​ಯ​ಬ​ಹು​ದಾ​ಗಿದೆ. 

ಕರ್ನಾಟಕ ಪ್ರವಾಹ ಸಂತ್ರಸ್ತರಿಗೆ ನೆರವು; ಅಭಿಯಾನದಲ್ಲಿ ಕೊಹ್ಲಿ, ಶಾಸ್ತ್ರಿ!

ಅ.1ರ ಮಧ್ಯಾಹ್ನ ಚುನಾ​ವಣೆಯಲ್ಲಿ ಸ್ಪರ್ಧಿ​ಸುವ ಅಭ್ಯ​ರ್ಥಿ​ಗಳ ಅಂತಿಮ ಪಟ್ಟಿ​ಯನ್ನು ಪ್ರಕಟ ಮಾಡ​ಲಾ​ಗುತ್ತದೆ. ಚುನಾವಣೆಯಲ್ಲಿ ಪಾರದರ್ಶಕತೆ ಕಾಪಾಡುವ ದೃಷ್ಟಿಯಿಂದ ಇದೇ ಮೊದಲ ಬಾರಿ ಎಲೆಕ್ಟ್ರಾನಿಕ್‌ ಮತ ಯಂತ್ರವನ್ನು (ಇವಿಎಂ) ಬಳಸಲಾಗುತ್ತಿದೆ.

ಯಾವ್ಯಾವ ಸ್ಥಾನಗಳಿಗೆ ಚುನಾ​ವಣೆ?

ಅಧ್ಯಕ್ಷ

ಉಪಾ​ಧ್ಯಕ್ಷ

ಕಾರ್ಯ​ದರ್ಶಿ

ಜಂಟಿ ಕಾರ್ಯ​ದರ್ಶಿ

ಖಜಾಂಚಿ

ಆಡ​ಳಿತ ಮಂಡಳಿ ಸದ​ಸ್ಯರು (11 ಸ್ಥಾನ​ಗ​ಳು​)

ಚುನಾ​ವಣಾ ಪ್ರಕ್ರಿಯೆ ವೇಳಾ​ಪ​ಟ್ಟಿ

ಸೆ.27-30 ನಾಮ​ಪತ್ರ ಸಲ್ಲಿಕೆ

ಸೆ.30 ನಾಮಪತ್ರ ಪರಿ​ಶೀ​ಲನೆ

ಅ.1 ನಾಮಪತ್ರ ಹಿಂಪ​ಡೆ​ಯು​ವಿ​ಕೆ

ಅ.1 ಅಭ್ಯರ್ಥಿಗಳ ಅಂತಿಮ ಪಟ್ಟಿಪ್ರಕ​ಟ

ಅ.3 ಚುನಾ​ವಣೆ, ಫಲಿ​ತಾಂಶ ಪ್ರಕಟ
 

click me!